ತಮ್ಮ ಮೊಬೈಲ್ ವಾಲ್ಪೇಪರ್ ಫೋಟೊ ತೋರಿಸಿ ನಟ ವಿನಯ್ ರಾಜ್ಕುಮಾರ್ ಭಾವಕ..! ಇಲ್ಲಿದೆ ವಿಡಿಯೋ

By Infoflick Correspondent

Updated:Thursday, May 26, 2022, 19:28[IST]

ತಮ್ಮ ಮೊಬೈಲ್ ವಾಲ್ಪೇಪರ್ ಫೋಟೊ ತೋರಿಸಿ ನಟ ವಿನಯ್ ರಾಜ್ಕುಮಾರ್ ಭಾವಕ..! ಇಲ್ಲಿದೆ ವಿಡಿಯೋ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಇಂದಿಗೂ ತುಂಬಾನೇ ನೋವು ನೀಡುತ್ತಿದೆ. ಅಂತಹ ಒಬ್ಬ ಒಳ್ಳೆಯ ಮನುಷ್ಯ, ಈ ಭೂಮಿ ಮೇಲೆ ಇರಲು ಇನ್ನಷ್ಟು ವರ್ಷಗಳ ಕಾಲ ಇರಲು ಅವಕಾಶ ಸಿಗಲಿಲ್ಲ. ಆ ಮೇಲಿರುವ ದೇವರು ತುಂಬಾ ಮೋಸ ಮಾಡಿ ಬಿಟ್ಟ ಎಂದೆನಿಸುತ್ತದೆ. ಅದೆಷ್ಟೋ ಜನರುಗಳ ಜೀವನವನ್ನು ಬೀದಿಗೆ ತಂದ ಆ ದೇವರಿಗೆ ಇಂದಿಗೂ ಕೂಡ ಅಪ್ಪು ಅವರ ಪ್ರೀತಿಯ ಅಭಿಮಾನಿಗಳು ಮತ್ತು ಇಡೀ ಕನ್ನಡದ ಜನತೆ ಹಿಡಿ ಶಾಪ ಹಾಕುತ್ತಿದ್ದೆ ಎಂದರೆ ತಪ್ಪಾಗಲಾರದು. ಅಪ್ಪು ಅವರು ಕೇವಲ ತೆರೆಯ ಮೇಲೆ ಮಾತ್ರವಲ್ಲದೆ, ನಿಜ ಜೀವನದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿದ್ದರು. ಹೆಚ್ಚು ಅನಾಥಾಶ್ರಮ, ವೃದ್ಧಾಶ್ರಮ, ಮಕ್ಕಳ ವಿದ್ಯಾಭ್ಯಾಸ ಹೀಗೆ ಲೆಕ್ಕವಿಲ್ಲದಷ್ಟು ಹಣದ ಸಹಾಯ ಎಲ್ಲಾ ಕೂಡ ಮಾಡಿದ್ದರು. 

ಆದರೆ ಎಲ್ಲಿಯೂ ಆ ಬಗ್ಗೆ ಹೇಳಿಕೊಂಡಿರಲೆ ಇಲ್ಲ. ಅದೇ ಅವರ ದೊಡ್ಡ ಗುಣ, ಅವರ ಸರಳತೆಯೇ ಇಂದು ಅವರು ದೇವರು ಎಂದೆನಿಸಿಕೊಳ್ಳುತ್ತಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರ ಎರಡನೆಯ ಅಣ್ಣ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ಅವರು ಎಲ್ಲರಿಗೂ ಗೊತ್ತು. ಅವರ ಸಿನಿಮಾಗಳು ಕೂಡ ಈಗಾಗಲೇ ಕೆಲವೊಂದಿಷ್ಟು ಬಿಡುಗಡೆಯಾಗಿವೆ. ಕೆಲವೊಂದಿಷ್ಟು ಬಿಡುಗಡೆಗೆ ಸಿದ್ಧತೆಯಾಗಿವೆ. ಹೀಗಿರುವಾಗ ನಟ ವಿನಯ್ ರಾಜಕುಮಾರ್ ಅವರು ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಅವರ ಕೆಲ ವಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದರು. ಅವರ ಮೊಬೈಲ್ ನಲ್ಲಿ ವಾಲ್ಪೇಪರ್ ಬಗ್ಗೆ ಕೆಲವೊಂದಿಷ್ಟು ಮಾಹಿತಿ ನೀಡಿದ್ದರು.    

ಆ ವಿಡಿಯೋ ನಟ ಪುನೀತ್ ಅವರು ಇಲ್ಲವಾದ ಮೇಲೆ ತುಂಬಾನೇ ವೈರಲ್ ಆಗುತ್ತಿದೆ. ನಿಮ್ಮ ಮೊಬೈಲ್ ನಲ್ಲಿ ವಾಲ್ಪೇಪರ್ ಏನಿದೆ ಎನ್ನುವ ಪ್ರಶ್ನೆಗೆ, ಮೊಬೈಲ್ ತೋರಿಸಿ ನನ್ನ ತಂಗಿಯರು ವಂದಿತ ಹಾಗು ದೃತಿ ಇದ್ದಾರೆ. ಇದು ಐದು ವರ್ಷದಿಂದ ಇದೊಂದೇ ವಾಲ್ಪೇಪರ್ ಫೋನ್ ಅಲ್ಲೇ ಇದೆ ಎಂದರು. ಇವರು ಪುನೀತ್ ಅವರ ಮಕ್ಕಳು ಎನ್ನುತ್ತಾರೆ ವಿನಯ ರಾಜಕುಮಾರ್. ನಿಮ್ಮ ಮೊಬೈಲ್ ಪಾಸ್ವರ್ಡ್ ಏನಿದೆ ಯಾರಿಗೆಲ್ಲ ಗೊತ್ತಿದೆ ಎನ್ನುವ ಪ್ರಶ್ನೆಗೆ, ನನಗೆ ಮತ್ತು ನನ್ನ ತಂಗಿಯರಿಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ ಎನ್ನುತ್ತಾರೆ ವಿನಯ ರಾಜಕುಮಾರ್. ಅಸಲಿಗೆ ಆ ವಿಡಿಯೋ ಹೇಗಿದೆ ಗೊತ್ತಾ..? 

ವಿನಯ ರಾಜಕುಮಾರ್ ಅವರ ಭಾವುಕರಾಗಿದ್ದೇಕೆ, ಇಲ್ಲಿದೆ ನೋಡಿ ವಿಡೀಯೋ. ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ. ಜೊತೆಗೆ ಈ ಅಣ್ಣ ತಂಗಿಯರ ಸಂಬಂಧ ಪ್ರೀತಿ ಹೀಗೆ ಇರಲಿ ಎಂದು ನೀವು ಕಾಮೆಂಟ್ ಮಾಡಿ ಹಾರೈಸಿ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...