Vinod Raj : ವಯಸ್ಸು 53 ಆದ್ರೂ ವಿನೋದ್ ರಾಜ್ ಮದುವೆ ಆಗದೆ ಇರೋಕೆ ಕಾರಣವೇನು? ಅವರ ಮಾತಲ್ಲೇ ಕೇಳಿ

By Infoflick Correspondent

Updated:Tuesday, May 3, 2022, 12:45[IST]

Vinod Raj : ವಯಸ್ಸು 53 ಆದ್ರೂ ವಿನೋದ್ ರಾಜ್ ಮದುವೆ ಆಗದೆ ಇರೋಕೆ ಕಾರಣವೇನು? ಅವರ ಮಾತಲ್ಲೇ ಕೇಳಿ

ಕನ್ನಡದ ಬಹುಮುಖ ಪ್ರತಿಭೆಗಳಲ್ಲಿ ನಟ ವಿನೋದ್ ರಾಜ್ ಕುಮಾರ್ ಕೂಡ ಒಬ್ಬರು. ಹೌದು ವಿನೋದ್ ರಾಜ್ ಅವರು 1987 ರಲ್ಲಿ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲಿ ಅಭಿಮಾನಿಗಳ ಗಿಟ್ಟಿಸಿಕೊಂಡ ವಿನೋದ್ ರಾಜ್ ಅವರ ನೃತ್ಯಕ್ಕೆ ಅಭಿಮಾನಿಗಳು ಅಂದೆ ಫಿದಾ ಆಗಿ ವಿನೋದ್ ರಾಜ್ ನಟನೆಗೆ ಶಿಳ್ಳೆ ಹೊಡೆದಿದ್ದರು. ಹೌದು ವಿನೋದ್ ರಾಜ್ ಖ್ಯಾತ ನಟಿ ಲೀಲಾವತಿಯವರ ಪುತ್ರ. ಆರಂಭದಲ್ಲೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ವಿನೋದರಾಜ್ ಅವರ ಡ್ಯಾನ್ಸ್ ಇಂದಿಗೂ ಸಹ ತುಂಬಾ ಫೇಮಸ್. ಯಾವುದಾದರೂ ಕಾರ್ಯಕ್ರಮಗಳಲ್ಲಿ ನಟ ವಿನೋದ್ ರಾಜ್ ಅವರು ಕಾಣಿಸಿಕೊಂಡರೆ, ಮೊದಲು ಅವರ ಅಭಿಮಾನಿಗಳು ಡ್ಯಾನ್ಸ್ ಮಾಡುವಂತೆ ಹೇಳುತ್ತಾರೆ. ಅಭಿಮಾನಿಗಳ ಆಸೆಯಂತೆ ವಿನೋದ್ ರಾಜ್ ಅವರ ಸ್ಟೆಪ್ ಕೂಡ ಹಾಕಿದ್ದಾರೆ.

ವಿನೋದ್ ರಾಜ್ ಅವರು ಒಬ್ಬ ಒಳ್ಳೆಯ ಪ್ರತಿಭಾವಂತ ನಟ. ಆರಂಭದಲ್ಲಿ ಸಿನಿಮಾ ಅವಕಾಶಗಳು ಸಿಗುತ್ತಿದ್ದು, ಅನಂತರದ ದಿನಗಳಲ್ಲಿ ವಿನೋದ್ ರಾಜ್ ಅವರಿಗೆ ಹೆಚ್ಚು ಅವಕಾಶ ಕಡಿಮೆಯಾದವು. ಸಿನಿಮಾರಂಗದಿಂದ ದೂರ ಉಳಿದ ವಿನೋದ್ ರಾಜ್ ದೂರದ ಒಂದು ಹಳ್ಳಿಯಲ್ಲಿ ತಾಯಿ ಜೊತೆ ವಾಸ ಮಾಡಲು ಶುರುಮಾಡಿದರು. ಅಲ್ಲೇ ಒಂದಿಷ್ಟು ಜಮೀನಿನಲ್ಲಿ ಕೆಲಸ ಮಾಡುತ್ತಾ ಕೆಲಸಗಾರರನ್ನ ಇಟ್ಟುಕೊಂಡು ದುಡಿಮೆ ಮಾಡಲು ಆರಂಭಿಸಿದ್ದಾರೆ. ಹೌದು ನಟ ವಿನೋದ್ ರಾಜ್ ಅವರಿಗೆ ಈಗ 53 ಮೂರು ವರ್ಷ. ಆದರೂ ಕೂಡ ವಿನೋದ್ ರಾಜ್ ಅವರು ಯಾಕೆ ಇನ್ನು ಮದುವೆ ಆಗಿಲ್ಲ ಎನ್ನುವ ವಿಚಾರಕ್ಕೆ, ಅವರೇ ಕೆಲ ಮಾಹಿತಿ ಬಹಿರಂಗಪಡಿಸಿದ್ದಾರೆ ಎಂದು ತಿಳಿದುಬಂದಿದೆ.  

ಹೌದು ವಿನೋದ್ ರಾಜ್ ಅವರು ಹೇಳುವ ಹಾಗೆ, ನನ್ನ ತಾಯಿಯನ್ನ ಈ ಜಗತ್ತಿನಲ್ಲಿ ಚೆನ್ನಾಗಿ ನೋಡಿಕೊಳ್ಳುವವರು ಯಾರು ಇಲ್ಲ, ನಾನು ಒಂದು ವೇಳೆ ಮದುವೆಯಾದರೂ ಆ ಹುಡುಗಿ ನನ್ನ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳುತ್ತಾಳೊ ಅಥವಾ ಇಲ್ವೋ ಎನ್ನುವ ಚಿಂತೆ ನನಗಿದೆ. ಹಾಗಾಗಿ ನಾನು ಮದುವೆಯಾಗಿಲ್ಲ, ನನ್ನನ್ನು ಬಿಟ್ಟರೆ ನನ್ನ ತಾಯಿಯನ್ನು ಯಾರು ಕೂಡ ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎನ್ನುತ್ತಾರೆ ವಿನೋದ್ ರಾಜ್. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ . ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ. ಹೌದು ನಟ ವಿನೋದ್ ರಾಜ್ ರನ್ನ ಡ್ಯಾನ್ಸ್ ವೇದಿಕೆಯಲ್ಲಿ ನೋಡಲು ಎಲ್ಲಾ ಕನ್ನಡಿಗರು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲಿ ಈ ಬಗ್ಗೆ ಚರ್ಚೆ ಮಾಡುತ್ತಾರೆ ಅದರೂ ಇನ್ನೂ ಕೂಡ ಇವರನ್ನ ಕರೆತರುವ ಕೆಲಸ ಚಾನೆಲ್ ನವರಿಂದ ಆಗಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಡಾನ್ಸ್ ಕಾರ್ಯಕ್ರಮಕ್ಕೆ ನಟ ವಿನೋದ್ ರಾಜ್ ಅವರೇ ಜಡ್ಜ್ ಆಗಿ ಬರಲಿ ಎಂದು ಹಾರೈಸಿ ಧನ್ಯವಾದಗಳು...