ಮದುವೆ ಕುರಿತು ಇಷ್ಟರಲ್ಲೇ ಒಂದೊಳ್ಳೆ ನ್ಯೂಸ್ ಕೊಡ್ತಿನಿ ಎಂದ ವಿನೋದ್ ರಾಜ್..! ಹುಡುಗಿ ಯಾರ್ ನೋಡಿ.?

Updated: Sunday, September 19, 2021, 20:39 [IST]

ಮದುವೆ ಕುರಿತು ಇಷ್ಟರಲ್ಲೇ ಒಂದೊಳ್ಳೆ ನ್ಯೂಸ್ ಕೊಡ್ತಿನಿ ಎಂದ ವಿನೋದ್ ರಾಜ್..! ಹುಡುಗಿ ಯಾರ್ ನೋಡಿ.?

ಕನ್ನಡ ಸಿನಿಮಾರಂಗದ ಖ್ಯಾತ ಹಿರಿಯ ನಟಿ ಲೀಲಾವತಿ ಅವರು ಹಾಗೂ ಪುತ್ರ ನಟ ವಿನೋದ್ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸುದ್ದಿ ಆಗುತ್ತಾರೆ. ಹೌದು ರಾಜ್ಯ ಸಮಸ್ಯೆಗೆ ಸಿಲುಕಿದಾಗ, ಅವರ ಕೈಲಾದ ಸಹಾಯ ಮಾಡುತ್ತಾರೆ. ಹಾಗೆ ಸಂಕಷ್ಟದಲ್ಲಿದ್ದೇವೆ ಎಂದು ಯಾರಾದರೂ ವಿನೋದ್ ರಾಜ್ ಹಾಗೂ ನಟಿ ಲೀಲಾವತಿಯವರ  ಹತ್ತಿರ ಕಷ್ಟಗಳನ್ನು ಹೇಳಿಕೊಂಡರೆ, ಇವರದು ತಮ್ಮ ಕೈಲಾದ ಸಹಾಯ ಮಾಡುವ ಮನಸ್ಥಿತಿ ಹೊಂದಿದ್ದಾರೆ. ವಿನೋದ್ ರಾಜ್  ಹೆಚ್ಚು ಸರಳ ಮನುಷ್ಯ ಹಾಗೆ ಸರಳ ಮನೋಭಾವ ಹೊಂದಿದ್ದಾರೆ.

ಸದಾ ಒಳ್ಳೆಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ವಿನೋದ್ ರಾಜ್ ಹಾಗೂ ಲೀಲಾವತಿಯವರು ಹೆಚ್ಚು ಯಾವಾಗಲೂ ಚರ್ಚೆಯಲ್ಲಿ ಇರುತ್ತಾರೆ.ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ನಟ ವಿನೋದ್ ರಾಜ್ ಅವರು ಒಂದು ಮಾಧ್ಯಮಕ್ಕೆ ಸಂದರ್ಶನವನ್ನು ನೀಡಿದ್ದರು. ಆ ವೇಳೆ ತಮ್ಮ ತಾಯಿ ಲೀಲಾವತಿ ಅವರನ್ನು ದರ್ಶನ್ ಅವರಿಗೆ ಹೋಲಿಕೆ ಮಾಡಿ, ದರ್ಶನ್ ಅಂದರೆ ತುಂಬಾ ಇಷ್ಟ. ಯಾಕೆಂದರೆ ಅವರು ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅವರಿಗೆ ಬಹು ಬೇಗ ಕೋಪ ಯಾಕೆ ಬರುತ್ತದೆ ಎಂದು ಹೇಳಿ ತಮ್ಮ ತಾಯಿಯನ್ನು ದರ್ಶನ್ ಅವರಿಗೆ ಕಂಪೇರ್ ಮಾಡಿದ್ದರು.

ಸಂದರ್ಶನದಲ್ಲಿ ನಟ ವಿನೋದ್ ರಾಜ್ ಅವರ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಲಾಗುತ್ತದೆ. ಆಗ ನಟ ವಿನೋದ್ ರಾಜ್, ತಮ್ಮ ಮದುವೆ ಬಗ್ಗೆ ಹೇಳಿದ್ದು ಇದೀಗ ತುಂಬಾ ಸುದ್ದಿಯಾಗುತ್ತಿದೆ. ವಿನೋದ್ ರಾಜ್ ಅವರು ಹೇಳಿದ ಹಾಗೆ ಮದುವೆ ಇನ್ನೂ ಆಗಿಲ್ಲ, ಆದರೆ ಇಷ್ಟರಲ್ಲಿಯೇ ಒಂದು ಒಳ್ಳೆ ನ್ಯೂಸ್ ಕೊಡುತ್ತೇನೆ ಎಂದು ಎಲ್ಲರಿಗೂ ಸಿಹಿಸುದ್ದಿಯನ್ನು ನೀಡಿದ್ದಾರೆ. ಅವರ ತಾಯಿ ಇಚ್ಛೆಯಂತೆ ಎಲ್ಲವೂ ನಡೆಯಲಿದೆಯಂತೆ. ಅಷ್ಟಕ್ಕೂ ವಿನೋದ್ ರಾಜ್ ಅವರನ್ನು ಕೈಹಿಡಿಯುವ ಆ ಯುವತಿ ಎಲ್ಲಿ ಇದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ನಟ ವಿನೋದ್ ರಾಜ್ ಹಾಗೂ ಲೀಲಾವತಿಯವರಿಗೆ ಒಳ್ಳೆಯದಾಗಲಿ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ, ಮತ್ತು ವಿನೋದ್ ರಾಜ್ ಅವರು ಆದಷ್ಟು ಬೇಗನೆ ಮದುವೆ ಆಗಲಿ ಎಂದು ಹಾರೈಸಿ, ಈ ವಿಡಿಯೋ ಶೇರ್ ಮಾಡಿ ಧನ್ಯವಾದಗಳು...(ವಿಡಿಯೋ ಕೃಪೆ :ತುಳಸಿ ಕನ್ನಡ  )