ಹೊಸ ಕಾರ್ಯ ಕೈಗೊಂಡ ಲೀಲಾವತಿ ವಿನೋದ್ ರಾಜ್..! ಹಳ್ಳಿಯ ಜನರ ನೆರವಿಗೆ ನಿಂತು ಮತ್ತೊಂದು ಸಹಾಯ

By Infoflick Correspondent

Updated:Saturday, May 21, 2022, 08:30[IST]

ಹೊಸ ಕಾರ್ಯ ಕೈಗೊಂಡ ಲೀಲಾವತಿ ವಿನೋದ್ ರಾಜ್..! ಹಳ್ಳಿಯ ಜನರ ನೆರವಿಗೆ ನಿಂತು ಮತ್ತೊಂದು ಸಹಾಯ

ಕನ್ನಡ ಚಿತ್ರರಂಗದ ಖ್ಯಾತ ನಟ ವಿನೋದ್ ರಾಜ್ ಅವರು ಆರಂಭದ ದಿನಗಳಲ್ಲಿ ತುಂಬಾ ಹೆಚ್ಚು ಪ್ರಖ್ಯಾತಿ ಹೊಂದಿದ ನಟ. ಡ್ಯಾನ್ಸ್ ಮಾಡುವುದರಲ್ಲಿ ಪ್ರತಿಭಾವಂತ ಆಗಿದ್ದ ನಟ ವಿನೋದ್ ರಾಜ್ ಅವರು ಡಾನ್ಸ್ ರಾಜ ಡಾನ್ಸ್ ಎನ್ನುವ ಸಿನೆಮಾ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಹೌದು ನಟ ವಿನೋದ್ ರಾಜ್ ಹಾಗೂ ಅವರ ತಾಯಿ ಲೀಲಾವತಿ ಅವರು ಇದೀಗ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಆರಂಭದದಿನಗಳಲ್ಲಿ ವಿನೋದ್ ರಾಜ್ ಅವರು ತುಂಬಾನೆ ಕಷ್ಟಪಟ್ಟು ನಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೆ ಅವರದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಬರುಬರುತ್ತಾ ನಟ ವಿನೋದ್ ರಾಜ್ ಅವರಿಗೆ ಆಗ ಅವಕಾಶಗಳು ಕಡಿಮೆಯಾದವು. ಬೇರೆ ಕಾರಣಗಳಿಂದಾಗಿ ನಟ ವಿನೋದ್ ರಾಜ್ ಅವರು ಇದೀಗ ಸಿನಿಮಾರಂಗದಿಂದ ಕಂಪ್ಲೀಟ್ ಆಗಿ ದೂರ ಉಳಿದು ಬಿಟ್ಟಿದ್ದಾರೆ. 

ಹೌದು ನಟ ವಿನೋದ್ ರಾಜ್ ಅವರು ಮದುವೆಯಾಗದೆ ಅವರ ತಾಯಿ ಜೊತೆ ನೆಲಮಂಗಲದ ಒಂದು ಗ್ರಾಮದಲ್ಲಿ ಜೀವನ ನಡೆಸುತ್ತಿದ್ದು ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುತ್ತಾ ನಟ ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರು ಅವರ ಆಸ್ತಿ ಮಾರಿ ಬೇರೆಯವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಸಿನಿಮಾರಂಗ ಕಷ್ಟದಲ್ಲಿ ಇದೆ ಎಂದಾಗ ಅವರ ಕೈಲಾದ ಸಹಾಯ ಮಾಡುತ್ತಾ, ಜೊತೆಗೆ ರಾಜ್ಯ ಕಷ್ಟದಲ್ಲಿ ಇದೆ ಎಂದಾಗ, ಮಳೆಯಿಂದ ಹೆಚ್ಚು ನಷ್ಟಕ್ಕೆ ಒಳಗಾದಾಗ ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿ ಹಸು ಕರುಗಳಿಗೆ ಮೇವು ನೀಡಿ ಸದಾ ಒಳ್ಳೆಯ ಕೆಲಸ ಮಾಡುತ್ತಲೇ ಇದ್ದಾರೆ. ಹೀಗೆ ಒಂದಲ್ಲ ಒಂದು ವಿಚಾರದಲ್ಲಿ ಕಾಣಿಸುವ ವಿನೋದ್ ರಾಜ್ ಮತ್ತು ಅವರ ತಾಯಿ ಲೀಲಾವತಿ ಈಗಾಗಲೇ ಅವರ ಊರಿನಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಹ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೀಗ ಅಂಥಹದ್ದೆ ಮತ್ತೊಂದು ಸಹಾಯಕ್ಕೆ, ಹಳ್ಳಿಯ ಜನತೆ ನೆರವಿಗೆ ನಿಂತಿರುವ ಲೀಲಾವತಿ ಅಮ್ಮನವರು ಒಂದು ಆಸ್ಪತ್ರೆ ಕಟ್ಟಿಸುವುದಾಗಿ ಮುಂದಾಗಿದ್ದಾರಂತೆ. ಈಗಾಗಲೇ ಅದರ ಗುದ್ದಲಿ ಪೂಜೆ ನಡೆದಿದ್ದು, ಈ ಅಸ್ಪತ್ರೆ ಕಾರ್ಯವನ್ನು ತಮ್ಮ ಆಸ್ತಿ ಮಾರಿ ಬಂದ 50 ಲಕ್ಷ ಹಣದಲ್ಲಿ ಮಾಡುತ್ತಿದ್ದಾರೆ ಎಂದು ಕೇಳಿಬಂದಿದೆ. ಈ ಮೂಲಕ ಹಳ್ಳಿ ಜನತೆ ಮನಸ್ಸನ್ನು ಮತ್ತೆ ಗೆದ್ದಿರುವ ಲೀಲಾವತಿ ಅಮ್ಮನವರು ಇನ್ನಷ್ಟು ಒಳ್ಳೆಯ ಕಾರ್ಯ ಮಾಡುವ ಹಾಗೆ ದೇವರ ಶಕ್ತಿ ನೀಡಲಿ ಎಂದು ಹರಸೋಣ. ಅದೆಷ್ಟೇ ಹಣ ಇದ್ದರೂ ಕೂಡ ಯಾರು ಕೂಡ ಸಹಾಯ ಮಾಡಲು ಹೆಚ್ಚಾಗಿ ಮುಂದೆ ಬರುವುದಿಲ್ಲ. ಕಡಿಮೆ ಎನ್ನಬಹುದು. ಅಂತಹದರಲ್ಲಿ ಲೀಲಾವತಿಯವರು ಅವರ ಆಸ್ತಿ ಮಾರಿ ಈ ರೀತಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದರೆ ನಿಜಕ್ಕೂ ಗ್ರೇಟ್. ನಟಿ ಲೀಲಾವತಿ ಅಮ್ಮನವರ ಕಾರ್ಯಕ್ಕೆ ಹಳ್ಳಿಯ ಜನತೆ ತುಂಬುಹೃದಯದ ಧನ್ಯವಾದ ತಿಳಿಸಿದ್ದಾರೆ. ಹಾಗೆ ಆಸ್ಪತ್ರೆ ಕಟ್ಟಿಸುವ ಕಾರ್ಯಕ್ಕೆ ಚಾಲನೆ ಕಾರ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ...