Vinod Raj : ದೇವ್ರು ನನ್ನ ಬದುಕಿಸಿ ಬಿಟ್ಟ ಆದ್ರೆ ಅಪ್ಪುನ 5 ನಿಮಿಷ ಟೈಮ್ ಕೊಡ್ಬೇಕಿತ್ತು: ಎಂದು ವಿನೋದ್ ರಾಜ್ ಹೇಳಿದ್ದ್ಯಾಕ್ಕೆ ?

By Infoflick Correspondent

Updated:Wednesday, July 27, 2022, 12:57[IST]

Vinod Raj :  ದೇವ್ರು ನನ್ನ ಬದುಕಿಸಿ ಬಿಟ್ಟ ಆದ್ರೆ ಅಪ್ಪುನ 5 ನಿಮಿಷ ಟೈಮ್ ಕೊಡ್ಬೇಕಿತ್ತು: ಎಂದು  ವಿನೋದ್ ರಾಜ್   ಹೇಳಿದ್ದ್ಯಾಕ್ಕೆ  ?

ಆಗಿನ ಕಾಲದಲ್ಲಿ ಕನ್ನಡದ ಮೈಕಲ್ ಜಾಕ್ಸನ್ ರಂತೆ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ ನಟ ವಿನೋದ್ ರಾಜ್. ಹಿರಿಯ ನಟಿ ಲೀಲಾವತಿ ಮಗ ವಿನೋದ್ ರಾಜ್ ತಮ್ಮ ಬಾಲ್ಯದ ಜೀವನದಿಂದ ಹಿಡಿದು ಇಂದಿನ ಲೈಫ್ ಬಗ್ಗೆ ಕೇಳಿದರೆ ನಿಜಕ್ಕೂ ನೀವು ನಿಂತಲ್ಲೇ ಕುಸಿದು ಬೀಳುತ್ತೀರಾ..? ವಿನೋದ್ ರಾಜ್ ಅವರ ಬಾಲ್ಯದ ತುಂಟಾಟ, ತಾಯಿಯ ಪ್ರೀತಿ, ಸಿನಿ ಜರ್ನಿ, ಡ್ಯಾನ್ಸ್ ಕಲಿತದ್ದು, ಹಾಡಿದ್ದು ಎಲ್ಲವೂ ಕೂಡ ಅವರ ತಾಯಿ ಲೀಲಾವತಿ ಜೊತೆಗೆ. ವಿನೋದ್ ರಾಜ್ ಅವರಿಗೆ ಅವರ ತಾಯಿಯೇ ಎಲ್ಲಾ..

ವಿನೋದ್ ರಾಜ್ ಅವರು ತಮ್ಮ ತಾಯಿ ಜೊತೆಗೆ ವಾಸವಿದ್ದು, ಇಂದಿಗೂ ಮದುವೆನೇ ಆಗಿಲ್ಲ. ಈ ಹಿಂದೆ ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ಕೇಳಿದ್ದಕ್ಕೆ, ನನ್ನ ತಾಯಿಯಿಂದ ದೂರಾಗಲು ನಾನು ಬಯಸೊಲ್ಲ, ಅವಳಿಗಾಗಿ ನನ್ನ ಬದುಕು ಮುಡಿಪು ಎಂದಿದ್ದರು. ಸದಾ ಅವರ ತಾಯಿ ಜೊತೆಗೆ ವಿನೋದ್ ರಾಜ್ ಅವರು ಇರುತ್ತಾರೆ. ನನ್ನ ತಾಯಿ ನನ್ನನ್ನು ತುಂಬಾ ಚೆನ್ನಾಗಿ ಸಾಕಿದ್ದಾಳೆ. ಅವಳು ನನಗೆ ಕೊಟ್ಟಿರುವ ಆಸ್ತಿ ಸಂಪತ್ತೆಲ್ಲೆವೂ ನನ್ನ ತಾಯಿ ಕಷ್ಟ ಪಟ್ಟು ದುಡಿದಿದ್ದು. ಅವಳಿಗೆ ನಾನು, ನನಗೆ ಅವಳು. ತಮ್ಮ ತಾಯಿ ಜೊತೆಗೆ ಅರಾಮವಾಗಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.   

ವಿನೋದ್ ರಾಜ್ ಹಾಗೂ ಲೀಲಾವತಿ ಅವರು ಜೀವನದಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ. ಹೆಜ್ಜೆ ಹೆಜ್ಜೆಗೂ ಕಷ್ಟಗಳನ್ನು ಎದುರಿಸಿದ್ದಾರೆ. ಇನ್ನು ಹೀಗೆ ಒಮ್ಮೆ ವಿನೋದ್ ರಾಜ್ ಅವರು ತಮ್ಮ ತಾಯಿಯ ಜೊತೆಗೆ ಕಾರಿನಲ್ಲಿ ಹೋಗುವಾಗ ಆಘಾತವೊಂದು ನಡೆಯಿತು. ಅದೇನೆಂದರೆ, ವಿನೋದ್ ಅವರು ಕಾರು ಡ್ರೈವ್ ಮಾಡುತ್ತಿದ್ದಾಗ, ಇದ್ದಕ್ಕಿದ್ದ ಹಾಗೆ ಕಣ್ಣು ಮಂಜಾಗಿ, ಸುಸ್ತಾಗಿ, ಎದೆ ನೋವು ಕಾಣಿಸಿಕೊಂಡಿತಂತೆ. ಆಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ವೈದ್ಯರು ವಿನೋದ್ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಿ ಸ್ಟಂಟ್ ಕೂಡ ಅಳವಡಿಸಲಾಯ್ತಂತೆ. ಆವತ್ತು ವಿನೋದ್ ರಾಜ್ ಅವರು ಬದುಕಿದ್ದೇ ಹೆಚ್ಚಂತೆ.