Vindod Rajkumar : ದರ್ಶನ್ ಅವರ ಜೊತೆ ನಿಂತಿರುವ ದೊಡ್ಡ ಶಕ್ತಿ ಯಾವುದು ಗೊತ್ತಾ..? ವಿನೋದ್ ರಾಜ್ ಬಿಚ್ಚಿಟ್ಟ ಸತ್ಯ ನೋಡಿ

By Infoflick Correspondent

Updated:Friday, July 15, 2022, 13:49[IST]

Vindod Rajkumar : ದರ್ಶನ್ ಅವರ ಜೊತೆ ನಿಂತಿರುವ ದೊಡ್ಡ ಶಕ್ತಿ ಯಾವುದು ಗೊತ್ತಾ..? ವಿನೋದ್ ರಾಜ್ ಬಿಚ್ಚಿಟ್ಟ ಸತ್ಯ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆರಂಭದ ದಿನಗಳಲ್ಲಿ ತುಂಬಾನೇ ಕಷ್ಟ ಪಟ್ಟು ಕನ್ನಡ ಚಿತ್ರರಂಗದಲ್ಲಿ ಬೆಳೆದವರು. ಹಾಗೆ ಮೂಲತಹ ಸ್ಟಾರ್ ಕಲಾವಿದನ  ಕುಟುಂಬದಿಂದ ಬಂದವರು. ಅವರ ಅಪ್ಪ ತೂಗುದೀಪ್ ಶ್ರೀನಿವಾಸ್ ಅವರು ಖ್ಯಾತ ಖಳನಾಯಕ. ಹಾಗೂ ಮುಖ್ಯ ಪಾತ್ರಗಳಲ್ಲಿ ಕಾಣಿಸಿದ್ದು ಅವರದ್ದೆಯಾದ ಸಿನಿಜರ್ನಿಯಲ್ಲಿ ಹೆಸರು ಮಾಡಿದವರು. ಆದ್ರೂ ಸಹ ದರ್ಶನ್ ಅವರಿಗೆ ಸಿನಿಕ್ಷೇತ್ರ ದಾರಿ ಸುಲಭ ಇರಲಿಲ್ಲ. ಅಂತಹವರ ಮಗನಾಗಿ ದರ್ಶನ್ ಅವರು ಹುಟ್ಟಿದ್ದು ಇಂದು ದೊಡ್ಡ ಮಟ್ಟಕ್ಕೆ ಅವರ ತಂದೆಯ ಹೆಸರನ್ನ ಪಸರಿಸಿದ್ದಾರೆ ಎನ್ನಬಹುದು. ಹೌದು ತೂಗುದೀಪ್ ಶ್ರೀನಿವಾಸ್ ಅವರ ಮಗನಾದ ದರ್ಶನ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಇಂದಿಗೂ ಕರೆಯುವುದೇ ಅವರಿಗೆ ಖುಷಿ. ಹಾಗೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯುವುದು ನಿಮಗೂ ಗೊತ್ತಿದೆ. 

ದರ್ಶನ್ ಅವರು ಆಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚಿಗಷ್ಟೇ ಅವರ ಬಹುನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾದಿಂದ ಕೆಲ ನ್ಯೂಸ್ ಚಾನೆಲ್ ಗಳನ್ನು ದೂರ ಇಟ್ಟಿದ್ದಾರೆ. ಕ್ರಾಂತಿ ಸಿನಿಮಾವನ್ನು ಅಭಿಮಾನಿಗಳು ಇದೀಗ ಭರ್ಜರಿಯಾಗಿ ಪ್ರಮೋಷನ್ ಮಾಡುತ್ತಿದ್ದು, ಎಲ್ಲೆಡೆ ಡಿ ಬಾಸ್ ಅವರ ಕ್ರಾಂತಿ ಸಿನಿಮಾದ್ದೆ ಕಾರುಬಾರು ಎಂದು ಹೇಳಬಹುದು. ನಟ ದರ್ಶನ್ ಅವರ ಈ ಕ್ರಾಂತಿ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಅವರ ಅಭಿಮಾನಿಗಳು ಬೀದಿಗಿಳಿದು ಕ್ರಾಂತಿ ಸಿನಿಮಾದ ಪ್ರಮೋಷನ್ನಲ್ಲಿ ಹೆಚ್ಚಾಗಿ ಬಿಜಿಯಾಗಿದ್ದು ಇದೆಲ್ಲವೂ ನಟ ದರ್ಶನ್ ಅವರ ಮೇಲಿನ ಪ್ರೀತಿಗೆ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ದರ್ಶನ್ ಅವರ ಅಭಿಮಾನಿ ಬಳಗ ತುಂಬಾ ದೊಡ್ಡದಿದೆ.

ಇದೀಗ ನಟ ವಿನೋದ್ ರಾಜ್ ಅವರು ದರ್ಶನ್ ಅವರ ಬಗ್ಗೆ  ಕೆಲವು ವಿಚಾರವನ್ನು ಬೆಚ್ಚಿಟ್ಟಿದ್ದಾರೆ. ದರ್ಶನ್ ಅವರ ಜೊತೆ ನಿಂತಿರುವ ಆ ಅತಿ ದೊಡ್ಡ ಶಕ್ತಿ, ಹಾಗೂ ಬಲವೂ ಯಾವುದು ಎಂಬುದಾಗಿ ಹೇಳಿದ್ದಾರೆ. ಎಲ್ಲರನ್ನು ಒಂದು ಕ್ಷಣ ಬೆರಗಾಗುವಂತೆ ಮಾಡಿದೆ ಈ ವಿಡಿಯೋ. ಹೌದು ನಟ ದರ್ಶನ್ ಜೊತೆ ಅಭಿಮಾನಿಗಳ ಶಕ್ತಿ ಇದೆ, ಅಭಿಮಾನಿಗಳ ಅತಿ ದೊಡ್ಡ ಬಲವಿದೆ, ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತಾರೆ, ದರ್ಶನ್ ಅವರನ್ನ ಭುವನೇಶ್ವರಿ ತಾಯಿ ಖಂಡಿತ ಕಾಪಾಡುತ್ತಾರೆ. ದರ್ಶನ್ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ ಎಂದಿದ್ದಾರೆ ನಟಿ ವಿನೋದ್ ರಾಜ್. ಅಸಲಿಗೆ ಆ ಪ್ರೀತಿಯ ಶುಭಾಶಯದ ವಿಡಿಯೋ ಹೇಗಿದೆ ಗೊತ್ತಾ.? ಇಲ್ಲಿದೆ ನೋಡಿ ನಟ ವಿನೋದ್ ರಾಜ್ ಅವರ ಪ್ರೀತಿಯ ನುಡಿಗಳ ಮಾತಿನ ಝಲಕ್ ವಿಡಿಯೋ.. ಪೂರ್ತಿ ನೋಡಿ ಇಷ್ಟವಾದಲ್ಲಿ ಶೇರ್ ಮಾಡಿ, ಕ್ರಾಂತಿ ಸಿನಿಮಾದ ಕೆಲಸಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು