Malashree : ಅದೊಂದು ಮಾತಿಗೆ ವಿಷ್ಣುವರ್ಧನ್ ಮಾಲಾಶ್ರೀ ಜೊತೆ ನಟಿಸಲೇ ಇಲ್ವಂತೆ..! ಮಾಲಾಶ್ರೀ ಆಡಿದ ಮಾತೇನು..!

By Infoflick Correspondent

Updated:Wednesday, August 10, 2022, 08:31[IST]

Malashree :  ಅದೊಂದು ಮಾತಿಗೆ ವಿಷ್ಣುವರ್ಧನ್ ಮಾಲಾಶ್ರೀ ಜೊತೆ ನಟಿಸಲೇ ಇಲ್ವಂತೆ..! ಮಾಲಾಶ್ರೀ ಆಡಿದ ಮಾತೇನು..!

ಕನಸಿನ ರಾಣಿ ಕನ್ನಡ ಚಲನಚಿತ್ರರಂಗದ ಖ್ಯಾತ ನಟಿ ಹಾಗೂ ಚಂದುಳ್ಳಿ ಚೆಲುವೆ ಎಂದು ಕರೆಸಿಕೊಂಡಿದ್ದ ನಟಿ ಮಾಲಾಶ್ರೀ ಅಪರೂಪದ ನಟಿಯಾಗಿ ಒಂದಾನೊಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದವರು. ಸಾಕಷ್ಟು ನಟರ ಜೊತೆ ತೆರೆಯನ್ನು ಹಂಚಿಕೊಂಡು ಅವರು ಅಭಿನಯ ಮಾಡಿದ ಎಲ್ಲಾ ಸಿನಿಮಾಗಳು ಹಿಟ್ ಆಗುವಲ್ಲಿ ಯಶಸ್ವಿ ಮೂಲಭೂತ ಕಾರಣ ಇವರು ಸಹ ಹೌದು ಎನ್ನಬಹುದು. ಅಷ್ಟರಮಟ್ಟಿಗೆ ಮಾಲಾಶ್ರೀ ಅವರ ಸಿನಿಮಾಗಳು ಮೂಡಿ ಬರುತ್ತಿದ್ದವು. ನಟಿ ಮಾಲಾಶ್ರೀ ಆಲ್ ಮೋಸ್ಟ್ ಕನ್ನಡದ 90ರ ದಶಕದಲ್ಲಿ ಹಾಗೂ 2000 ವೇಳೆ ಎಲ್ಲಾ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಡಾ. ರಾಜಕುಮಾರ್ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರೊಟ್ಟಿಗೆ ತೆರೆಯನ್ನು ಹಂಚಿಕೊಳ್ಳಲೇ ಇಲ್ಲ.

ಅದಕ್ಕೆ ಬಹಿರಂಗವಾಗಿ ಯಾವ ಕಾರಣವೂ ಕೂಡ ಇಂದಿಗೂ ತಿಳಿದುಬಂದಿಲ್ಲ. ಆದರೆ ಕೇಳಿ ಬಂದ ಮಾಹಿತಿ ಪ್ರಕಾರ ನಟಿ ಮಾಲಾಶ್ರೀ 90ರ ದಶಕದಲ್ಲಿ ತುಂಬಾನೇ ಪ್ರಖ್ಯಾತಿ ಹೊಂದಿದ್ದ ನಟಿ. ಹೆಚ್ಚು ಅಭಿನಯ ಮಾಡುತ್ತಿದ್ದ ಇವರ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿದ್ದವಂತೆ. ಆಗ ಸಂದರ್ಶನದಲ್ಲಿ ಮಾಲಾಶ್ರೀ ಅವರನ್ನು ಅಭಿನಯಿಸಿದ ನಿಮ್ಮ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತವೆ, ಇದಕ್ಕೆ ಕಾರಣ ಏನು ಎಂಬಂತೆ ಪ್ರಶ್ನಿಸಿದಾಗ. ನನ್ನ ಜೊತೆ ಒಂದು ನಾಯಿ ಕೂಡ ಅಭಿನಯ ಮಾಡಿದರೂ ಅದು ಕೂಡ ಸೂಪರ್ ಸ್ಟಾರ್ ಆಗುತ್ತದೆ ಎಂದು ಮಾಲಾಶ್ರೀ ಅವರು ಹೇಳಿದ್ದರು ಎನ್ನಲಾಗಿದೆ. ಇದೊಂದು ಕಾರಣಕ್ಕೆ ಡಾ. ವಿಷ್ಣುವರ್ಧನ್ ಅವರು ಮಾಲಾಶ್ರೀ ಜೊತೆ ಅಭಿನಯ ಮಾಡಲಿಲ್ಲ ಎಂದು ಗಾಳಿ ಸುದ್ದಿ ಹಬ್ಬಿತು. 

ತದನಂತರ 1991ರಲ್ಲಿ ಡಾ. ವಿಷ್ಣುವರ್ಧನ್ ಅವರ ಒಂದು ಲಯನ್ ಜಗಪತಿರಾಮ್ ಸಿನಿಮಾ ಶೂಟಿಂಗ್ ಬರದಿಂದ ಸಾಗಿದ್ದು, ಇನ್ನೊಂದು ಕಡೆ ಅಂಬರೀಶ್ ಹಾಗೂ ಮಾಲಾಶ್ರೀ ಅವರ ಹೃದಯ ಹಾಡಿತು ಶೂಟಿಂಗ್ ನಡೆಯುತ್ತಿತ್ತಂತೆ. ಆಗ ವಿಷ್ಣುವರ್ಧನ್ ಅವರು ಇವೆರಡು ಸಿನಿಮಾಗಳು ಒಟ್ಟಿಗೆ ತೆರೆಗೆ ಅಪ್ಪಳಿಸಿದರೆ ಇಬ್ಬರಿಗೂ ಹಾನಿ. ಹಾಗೆ ಚಿತ್ರಗಳಿಗೆ ಹೊಡೆತ ಬೀಳಬಹುದು ಎಂದು ಅಂಬರೀಶ್ ಅವರಿಗೆ ನಟ ವಿಷ್ಣುವರ್ಧನ್ ಫೋನ್ ಮಾಡಿ ನಿಮ್ಮ ಸಿನಿಮಾವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದರಂತೆ. ಇದು ಕೂಡ ನಟಿ ಮಾಲಾಶ್ರೀ ಅವರೊಟ್ಟಿಗೆ ವಿಷ್ಣುವರ್ಧನ್ ಅವರು ಮುಂದೆಂದೂ ನಟಿಸುವುದೇ ಇಲ್ಲ ಎನ್ನುವ ಹಾಗೆ ಹೇಳಿಕೆ ನೀಡಿದ್ದರು ಎಂದು ಗಾಳಿ ಸುದ್ದಿ ಹಬ್ಬಿ ಚರ್ಚೆಯಾಯಿತು ಎನ್ನಲಾಗಿ ಕೇಳಿಬಂದಿದೆ.

ವಿಷ್ಣುವರ್ಧನ್ ಕೂಡ ಅಂದು ಈ ಬಗ್ಗೆ ಮಾತನಾಡಲಿಲ್ಲ ಆದರೆ ಮಾಲಾಶ್ರೀ ಅವರು ಹೇಳಿದ ಹಾಗೆ ಅವರೊಟ್ಟಿಗೆ ಅಭಿನಯ ಮಾಡಬೇಕು ಎಂದು ಹೆಚ್ಚು ಅಂದುಕೊಂಡಿದ್ದೇ, ಆದ್ರೆ ನನಗೆ ವಿಷ್ಣುವರ್ಧನ್ ಅವರಿಗೆ ಹೊಂದುವ ಒಳ್ಳೆಯ ಕಥೆ ಸಿಗಲಿಲ್ಲ, ಹಾಗಾಗಿ ಅಭಿನಯ ಮಾಡಲಿಲ್ಲ ಎಂದು ಮಾಲಾಶ್ರೀ ಹೇಳಿಕೊಂಡಿದ್ದಾರೆ.. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...