ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ನಟಿ ವೈಜಯಂತಿಯ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ..? ಅತಿ ಶ್ರೀಮಂತ ಸ್ಪರ್ಧಿ.! ವಿಡಿಯೋ ನೋಡಿ

Updated: Saturday, April 10, 2021, 12:20 [IST]

ನಮಸ್ಥೆ ಗೆಳೆಯರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಿಯಂಕ ತಿಮ್ಮೇಶ್ ಅವರ ಜೊತೆಯೇ ಇನ್ನೊಬ್ಬ ಕನ್ನಡದ ನಟಿಯಾಗಿರುವ ವೈಜಯಂತಿ ಅಡಿಗ ಅವರು, ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಮೂಲಕ ಸಖತ್ತಾಗಿ ಎಂಟ್ರಿ ಕೊಟ್ಟು ಬಿಗ್ ಮನೆಯ ಸ್ಪರ್ಧಿಗಳ ಸಂಖ್ಯೆಯನ್ನ ಸಹ ಹೆಚ್ಚು ಮಾಡಿದ್ದಾರೆ. ಹೌದು ಈ ಬಿಗ್ಬಾಸ್ ಮನೆಗೆ ಇನ್ನಷ್ಟು ರಂಗು ತರಲು ನಟಿ ವೈಜಯಂತಿ ಅವ್ರು ಬಿಗ್  ಮನೆಗೆ ಎಂಟ್ರಿ ಕೊಟ್ಟಿರುವುದನ್ನು ನೋಡಿ ನಿಜಕ್ಕೂ ಬಿಗ್ ಬಾಸ್ ವೀಕ್ಷಕರಲ್ಲಿ, ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ...  

ಇದೆ ವೇಳೆಯಲ್ಲಿ ಬಿಗ್ ಬಾಸ್ ಸಹ, ಈ ಉಪಯುಕ್ತ ಸಮಯವನ್ನು ಚೆನ್ನಾಗಿ ಉಪಯೋಗ ಮಾಡಿಕೊಳ್ಳಲು ನಿರ್ಧಾರ ಮಾಡಿ, ಬಿಗ್ಬಾಸ್ ಸ್ಪರ್ಧಿಗಳ ಕುರಿತಾಗಿ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸುವಂತೆ, ಹಾಗೇನೇ ಈಗ ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಗೆ ಬಂದಿರೋ ಸ್ಪರ್ಧಿಗಳನ್ನು ಸಹ ಹೆಚ್ಚು ಅರ್ಥ ಮಾಡಿಕೊಳ್ಳುವಂತೆ ವಿವಿಧ ರೀತಿಯ ಟಾಸ್ಕ್ ಗಳನ್ನು ನೀಡುತ್ತಿದ್ದಾರೆ. ಇದರ ಜೊತೆ ನಟಿ ವೈಜಯಂತಿ ಅಡಿಗರವರ ಬಗ್ಗೆ ಇಂದಿನ ಈ ಲೇಖನದಲ್ಲಿ ಹೆಚ್ಚು ಮಾಹಿತಿ ತಿಳಿಸಿಕೊಡುತ್ತೇವೆ ಮುಂದೆ ಓದಿ..

ವೈಜಯಂತಿ ಅಡಿಗ ಅವರು ಮೂಲತಹ ಉದ್ಯಮಿ ಕುಟುಂಬದಿಂದ ಬಂದಿರುವುದಾಗಿ ಕೇಳಿ ಬಂದಿದೆ. ಬೆಂಗಳೂರಿನಲ್ಲಿ ಹಾಗೂ ವಿವಿಧ ಕಡೆ ಪ್ರಮುಖವಾದ ನಗರಗಳಲ್ಲಿ, ಅಲ್ಲಲ್ಲಿ ಕಾಣಸಿಗುವ ವಾಸುದೇವ ಅಡಿಗಾಸ್ ಎಂಬ ಹೋಟೆಲ್ ಒಂದರ ಮಾಲೀಕರಾದ ವಾಸುದೇವ ಅಡಿಗರವರ ಪುತ್ರಿ ಈ ವೈಜಯಂತಿ ಅಡಿಗ ಎಂದು ತಿಳಿದುಬಂದಿದೆ. ಹೌದು ನಮ್ಮ ದೇಶದ ಪ್ರತಿಷ್ಠಿತ ಹೋಟೆಲ್ ಉದ್ಯಮಗಳಲ್ಲಿ, ಈ ವಾಸುದೇವ್ ಅಡಿಗ ಅನ್ನೋ ಹೋಟೆಲ್ ಸಂಸ್ಥೆ ನಮಗೆ ಕಾಣಿಸುತ್ತದೆ. ಜೊತೆಗೆ ಇವರ ಒಟ್ಟು ಆಸ್ತಿಯ ಮೌಲ್ಯದ ಕುರಿತಾಗಿ ನಾವು ಮಾತಾಡುವುದಾದ್ರೆ,

ಸರಿ ಸುಮಾರು 200 ಕೋಟಿಗೂ ಹೆಚ್ಚು ಆಸ್ತಿಯನ್ನು ಈ ನಟಿ ವೈಜಯಂತಿ ಅಡಿಗ ಹೊಂದಿದ್ದಾರೆ ಎನ್ನಲಾಗಿ ಕೇಳಿಬಂದಿದೆ. ಹಾಗೆ ಒಂದು ವರ್ಷಕ್ಕೆ ಈ ವಾಸುದೇವ್ ಅಡಿಗಸ್ ಎನ್ನುವ ಹೋಟೆಲ್ ಕಂಪನಿ, ಸುಮಾರು 50 ಕೋಟಿಗೂ ಹೆಚ್ಚು ಆದಾಯವನ್ನ ಗಳಿಕೆ ಮಾಡುತ್ತದೆಂದು ತಿಳಿದುಬಂದಿದೆ.