ಹೊರ ಬಿತ್ತು ನಿಖಿಲ್ ಕುಮಾರಸ್ವಾಮಿ- ರೇವತಿಗೆ ಯಾವ ಮಗು ಆಗುತ್ತೆ ಅನ್ನೋ ಸತ್ಯಾಂಶ: ಅವರ ಮನೆಗೆ ಭೇಟಿ ಕೊಟ್ವರು ಹೇಳಿದ್ದೇನು ಗೊತ್ತಾ..?

Updated: Thursday, July 29, 2021, 19:57 [IST]

ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಈಗ ಐದು ತಿಂಗಳ ಗರ್ಭಿಣಿಯಾಗಿರೋದು ಎಲ್ಲರಿಗೂ ಗೊತ್ತಿದೆ. ಕಳೆದ ತಿಂಗಳು ರೇವತಿ ಹುಟ್ಟುಹಬ್ಬದ ದಿನದಂದು ಮಾಜಿ ಸಿಎಂ ಕುಮಾರಸ್ವಾಮಿ ಈ ಸಿಹಿ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ. ಕೊರೊನಾ ಸೋಂಕು ತಗುಲಿದ್ದರಿಂದ ರೇವತಿ ಹಾಗೂ ನಿಖಿಲ್ ಆತಂಕಕ್ಕೊಳಗಾಗಿದ್ದರು. ಹೀಗಾಗಿ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಹಲವು ದಿನ ಮುಚ್ಚಿಟ್ಟಿದ್ದರು. 

ಇದರ ನಡುವೆ ರೇವತಿಗೆ ಯಾವ ಮಗುವಾಗುತ್ತೆ ಎಂಬ ಸುದ್ದಿಯು ಹೊರ ಬಿದ್ದಿದೆ. ಇತ್ತೀಚೆಗಷ್ಟೇ, ನಿಖಿಲ್ ಅವರ ಮನೆಗೆ ಭೇಟಿ ಕೊಟ್ಟ ವಿನಯ್ ಗುರೂಜಿ ಈ ಸತ್ಯವನ್ನು ಹೊರ ಹಾಕಿದ್ದಾರೆ. ಈ ಮಗು ಜನಿಸಿದ ಮೇಲೆ ನಿಖಿಲ್ ಲಕ್ ಡಬಲ್ ಆಗುತ್ತಂತೆ. ಇನ್ನು ಎತ್ತರಕ್ಕೆ ನಿಖಿಲ್ ಬೆಳೆಯುತ್ತಾರೆ ಎಂದು ಗುರೂಜಿ ಹೇಳಿದ್ದಾರೆ. ಶಾಸಕರಾಗುವ ಅದೃಷ್ಟವೂ ಇದೆಯಂತೆ. ಇನ್ನು ನಿಖಿಲ್-ರೇವತಿಗೆ ಗಂಡು ಮಗು ಆಗುತ್ತದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.    

ಕಳೆದ ವರ್ಷ ಲಾಕ್ ಡೌನ್ ವೇಳೆ ನಿಖಿಲ್-ರೇವತಿ ಏಪ್ರಿಲ್ ೧೭, ೨೦೨೦ ರಂದು ಬಿಡದಿ ತೋಟದ ಮನೆಯಲ್ಲಿ ಸಪ್ತಪದಿ ತುಳಿದಿದ್ದರು. ನಿಖಿಲ್ ಕುಮಾರಸ್ವಾಮಿ-ರೇವತಿ ದಂಪತಿ ಸದ್ಯದಲ್ಲೇ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಾತನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. 

ಇನ್ನು ಹಲವು ದಿನಗಳ ನಂತರ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೂ ಹೊರ ಬಿದ್ದಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದು ಮೂಡಿಬರುತ್ತಿದೆ. ಇದರಲ್ಲಿ ನಿಖಿಲ್ ಕುಮಾರಸ್ವಾಮಿ ನಾಯಕರಾಗಿ ನಟಿಸಲಿದ್ದು,  ಫಸ್ಟ್ ಲುಕ್ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ. ಅಲ್ಲದೇ, ಸಿನಿಮಾಗೆ ಇನ್ನೂ ನಾಮಕರಣ ಮಾಡಿಲ್ಲ ಎಂದು ತಿಳಿದು ಬಂದಿದೆ.