ಇಲ್ಲಿದೆ ಯಾರೂ ತಿಳಿಯದ ಖ್ಯಾತ ನಿರೂಪಕಿ ಅನುಪಮಾ ಜೀವನ ಕಥೆ; ಮದುವೆಯ ಬಗ್ಗೆ ಅನು ಹೇಳಿದ್ದೇನು ?

By Infoflick Correspondent

Updated:Tuesday, March 29, 2022, 14:51[IST]

ಇಲ್ಲಿದೆ ಯಾರೂ ತಿಳಿಯದ ಖ್ಯಾತ ನಿರೂಪಕಿ ಅನುಪಮಾ ಜೀವನ ಕಥೆ; ಮದುವೆಯ ಬಗ್ಗೆ ಅನು ಹೇಳಿದ್ದೇನು ?

ಬಿಗ್ ಬಾಸ್ ಮಾಜಿ ಸ್ಪರ್ಧಿ, ಖ್ಯಾತ ನಿರೂಪಕಿ ಅನುಪಮಾ ಗೌಡ  (anupama gowda) ಎಂದರೆ ಹಲವರಿಗೆ ಅಚ್ಚು ಮೆಚ್ಚು, ಅವರ ನಿರೂಪಣಾ ಶೈಲಿಗೆ, ಸಿನಿಮಾ ಅಭಿನಯಕ್ಕೆ  ತಮ್ಮದೇ ಆದ ಅಭಿಮಾನಿಗಳನ್ನು ಗಳಿಸಿದ್ದಾರೆ ಅನುಪಮಾ, ತೆರೆ ಮುಂದೆ ಮುದ್ದಾಗಿ ನಿರೂಪಣೆ ಮಾಡುವ ಅನುಪಮಾ ಅವರ ಹಿಂದೆ ಯಾರೂ ತಿಳಿಯದ ಜೀವನ ಕಥೆಗಳಿವೆ. 

ಅನುಪಮಾ ತಂದೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿತ್ರರಂಗದಲ್ಲಿ ಏನೂ ಲಾಭ ಸಿಗುತ್ತಿಲ್ಲ ಹಾಗಾಗಿ ಮಗಳು ಚಿತ್ರರಂಗಕ್ಕೆ ಬರಲೇಬಾರದು ಎಂದು ಅವರ ತಂದೆ ಸ್ಟ್ರಿಕ್ಟ್ ಆಗಿ ಹೇಳಿದ್ದರು. ಮನೆಯಲ್ಲಿ ಕಲಾವಿದೆಯಾಗಲು ಅನುಪಮಾಗೆ ಯಾವುದೇ ಬೆಂಬಲ ಆರಂಭದಲ್ಲಿ ಸಿಕ್ಕಿರಲಿಲ್ಲ.  

ತಂದೆ ಕೆಲಸ ಮಾಡುತ್ತಿರಲಿಲ್ಲ, ತಂದೆಗೆ ಚಿತ್ರರಂಗದಲ್ಲಿ ಹಣ ಸಿಗುತ್ತಿರಲಿಲ್ಲ, ಸಿಕ್ಕಿದರೂ ಆ ಹಣದಲ್ಲಿ ತಂದೆ ಮದ್ಯಪಾನ ಮಾಡುತ್ತಿದ್ದರು. ತಾಯಿ ಗಾರ್ಮೆಂಟ್ಸ್‌ನಲ್ಲಿ ಹಗಲು ರಾತ್ರಿ ಕೆಲಸ ಮಾಡಿ, ಅನುಪಮಾರ ಜೀವನ ನೋಡಿಕೊಳ್ಳುತ್ತಿದ್ದರಂತೆ. 
ಅನುಪಮಾ ಬೆಳ್ಳಿತೆರೆಯಲ್ಲಿ ಮಿಂಚಲೂ ಆ ಒಂದು ಘಟನೆ ಕಾರಣವಾಯಿತು ಅದನ್ನು ಅವರ ತಾಯಿ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ .ಡಾ ರಾಜ್‌ಕುಮಾರ್ ಸತ್ತದಿನ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಬೇರೆಯವರ ಮನೆಗೆ ಟಿವಿ ನೋಡಲು ಹೋದರೆ ಆಗ ನಮ್ಮ ಮನೆಗೆ ಎಂಎಲ್‌ಎ ಬರುತ್ತಾರೆ ಎಂದರು. ಆ ದಿನ ಬಹಳ ಬೇಸರವಾಯಿತು. ನಮ್ಮ ಸ್ವಂತದವರು ಈ ಮಾತನಾಡಿದ್ದು ಬಹಳ ದುಃಖ ನೀಡಿತು. ನಂತರ ನಾನು ಅವಳಿಗೆ ನಿನಗೆ ಇಷ್ಟವಾಗಿದ್ದು ಮಾಡು ಎಂದು ಚಿತ್ರರಂಗಕ್ಕೆ ಹೋಗಲು ಅನುಮತಿ ನೀಡಿದೆ. ಈ ಹಂತಕ್ಕೆ ಬಂದು ಬೆಳೆಯುತ್ತಾಳೆ ಎಂದು ಅಂದುಕೊಂಡಿರಲಿಲ್ಲ, ನಿಜಕ್ಕೂ ಗ್ರೇಟ್ ಎಂದು ಅನುಪಮಾ ತಾಯಿ ಭಾವುಕರಾಗಿ ಹಂಚಿಕೊಂಡರು.    

ತಂದೆ ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದರು ಆದರೆ ಇಂಡಸ್ಟ್ರಿಗೆ ಬರೋದು ಅಂದ್ರೆ ಇಷ್ಟ ಇರಲಿಲ್ಲ. ನನಗೆ ಅಮ್ಮನೇ ಎಲ್ಲಾ ಅಪ್ಪನೂ ಇಲ್ಲ. ಅವರಿಗೋಸ್ಕರ ನಾನು ಇವತ್ತು ಇರೋದು. ನನಗೆ ಜೀವನದಲ್ಲಿ ಏನೂ ಗುರಿ ಇಲ್ಲ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಷ್ಟೆ. ಎಷ್ಟೊಂದು ಜನ ಮದ್ವೆ ಆಗೋಲ್ವ ಅಂತ ಕೇಳುತ್ತಾರೆ. ನನಗೆ ಮದ್ವೆ ಆಗಬೇಕು ಅನ್ನೋ ಇಂಟ್ರೆಸ್ಟ್‌ ಇಲ್ಲ. ನಮಗೆ ಎಲ್ಲಾ ಬಂದಂತ ಸಮಯದಲ್ಲಿ ಏನೂ ಅನುಭವಿಸದೆ ಅಪ್ಪ ಹೋಗ್ಬಿಟ್ರು ಆದರೆ ಅಮ್ಮಂಗೆ ಕೆಲವೊಂದು ಆಸೆ ಇದೆ ಅದನ್ನು ನೆರವೇರಿಸಬೇಕು ಅನ್ನೋದೆ ನನ್ನ ಗುರಿ ಅದು ಬಿಟ್ಟು ಬೇರೆ ಏನೂ ಇಲ್ಲ ಎಂದು ಅನುಪಮಾ ಹೇಳಿದ್ದಾರೆ.