Chiranjeevi Sarja :ಚಿರು ಸ್ಮೋಕ್ ಮಾಡಿದಾಗ ಅರ್ಜುನ್ ಸರ್ಜಾ ಮಾಡಿದ್ದೇನು ಗೊತ್ತೆ ? ಇದನ್ನು ಕೇಳಿದ ಜನ ದಂಗಾಗುತ್ತಾರೆ
Updated:Monday, June 13, 2022, 11:02[IST]

ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನಗಲಿ ಇಂದಿಗೆ ಎರಡು ವರ್ಷ ತುಂಬಿದೆ. 2020ರ ಜೂನ್ 7ರಂದು ಹೃದಯಾಘಾತದಿಂದ ಚಿರು ಕೊನೆಯುಸಿರೆಳೆದಿದ್ದರು. ಚಿರು ಅಗಲಿಕೆಯ ನೋವಿನಿಂದ ಅವರ ಕುಟುಂಬ ಸದಸ್ಯರು, ಅಭಿಮಾನಿಗಳು ಈಗಲೂ ಹೊರಬಂದಿಲ್ಲ. ಚಿರು ಸರ್ಜಾ ಎರಡನೇ ವರ್ಷದ ಪುಣ್ಯತಿಥಿಗೆ ಮಾವ ಅರ್ಜುನ್ ಸರ್ಜಾ ಕೂಡಾ ಆಗಮಿಸಿದ್ದರು. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಚಿರು ಸಮಾಧಿಗೆ ಇಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಚಿರಂಜೀವಿ ಮಾವ ಅರ್ಜುನ್ ಸರ್ಜಾ ಚಿರು ಜತೆಗೆ ತಾವು ಕಳೆದ ದಿನಗಳನ್ನು ಮೆಲುಕು ಹಾಕಿದರು.
ಚಿರು ಜೊತೆಗೆ ನಾನು ಯಾವಾಗಲೂ ಗಟ್ಟಿಯಾಗಿಯೇ ಮಾತನಾಡುತ್ತಿದ್ದೆ. 'ಏನು ಹೀಗಿದಿಯಾ..? ಜಿಮ್ ಮಾಡ್ತಿಲ್ವಾ..' ಅಂತೆಲ್ಲ ಗಟ್ಟಿಯಾಗಿ ಕೇಳುತ್ತಿದ್ದೆ. ಆದರೆ ಮನಸ್ಸಿನೊಳಗೆ ತುಂಬ ಪ್ರೀತಿ ಇರೋದು. ಈಗ ಆ ಪ್ರೀತಿಯನ್ನೆಲ್ಲ ಹೇಳಿಕೊಳ್ಳಬೇಕು ಎನಿಸುತ್ತದೆ. ಆದರೆ ಈಗ ಅದು ಸಾಧ್ಯವಿಲ್ಲ. ಚಿರು ಬಗ್ಗೆ ಅವನ ಸ್ನೇಹಿತರ ಒಳ್ಳೆಯದನ್ನು ಹೇಳುತ್ತಲೇ ಇರುತ್ತಾರೆ. ಅದನ್ನು ಕೇಳುವಾಗ ನಮಗೆ ಹೆಮ್ಮೆ ಆಗುತ್ತದೆ. ಚಿರುಗೆ ನಾನು ತಂದೆಯ ರೀತಿಯಲ್ಲೇ ಇದ್ದೆ. ನಮಗೆ ಏನಾದರೂ ಅನ್ನಿಸಿದಾಗ ಆಗಲೆ ಹೇಳಿಬಿಡಬೇಕು. ಆಮೇಲೆ ಹೇಳೋಣ ಅಂತ ತಡಮಾಡಬಾರದು. ಅಂದುಕೊಂಡಾಗಲೇ ಹೇಳಿಬಿಡಬೇಕು. ದೇವರು ಮರೆವು ಅನ್ನೋ ಗಿಫ್ಟ್ ನೀಡಿದ್ದಾನೆ ಅಂತಾರೆ. ಆದರೆ ಚಿರು ಇಲ್ಲ ಅನ್ನೋ ಸತ್ಯವನ್ನು ನಾವು ಮರೆಯೋಕೆ ಆಗಲ್ಲ. ಪ್ರತಿದಿನ, ಪ್ರತಿಗಳಿಗೆ ಅವನನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತವೆ.
ಚಿರುನ ಎತ್ತಿ ಆಡಿಸಿದ್ದೆ, ನಾನೇ ಶಾಲೆಗೆ ಬಿಟ್ಟು ಬರುತ್ತಿದ್ದೆ. ಆಕ್ಟಿಂಗ್ ಸ್ಕೂಲ್ಗೆ ಕಳುಹಿಸಿದ್ದೆ. ಈಗ ಅವನು ನಮ್ಮ ಜತೆ ಇಲ್ಲ ಎಂದರೆ ನಂಬಲಿಕ್ಕೇ ಆಗುತ್ತಿಲ್ಲ ಎಂದರು.
ಚಿರು ಒಂದು ದಿನ ಸ್ಮೋಕ್ ಮಾಡುವುದನ್ನು ನೋಡಿದ್ದೆ. ಬೆಲ್ಟ್ನಿಂದ ಹೊಡೆದಿದ್ದೆ. ಆ ದಿನ ಇಂದಿಗೂ ನನ್ನ ಕಣ್ಣಮುಂದೆ ಇದೆ ಎಂದು ಅರ್ಜುನ್ ಸರ್ಜಾ ಭಾವುಕರಾಗಿ ಹೇಳಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಚಿರು ಪುತ್ರ ರಾಯನ್ ಬಗ್ಗೆ ಮಾತನಾಡಿರುವ ಅರ್ಜುನ್ ಸರ್ಜಾ 'ಚಿರು ಮಗ ನಮಗೆ ನೆಮ್ಮದಿ ಕೊಡುತ್ತಿದ್ದಾನೆ. ಚಿರು ಇಲ್ಲ ಎನ್ನುವ ಕೊರಗು ಸ್ವಲ್ಪ ಕಡಿಮೆ ಮಾಡಿದ್ದಾನೆ. ಚಿರುವನ್ನು ನಾವೇ ಲಾಂಚ್ ಮಾಡಿದ್ದೆವು. ನನ್ನ ಅಣ್ಣನೇ ಚಿರು ಸಿನಿಮಾ ನಿರ್ದೇಶನ ಮಾಡಿದ್ದು, ನಾನು ಆ ಸಿನಿಮಾ ನಿರ್ಮಾಣ ಮಾಡಿ ವಾಯುಪುತ್ರ ಮೂಲಕ ಲಾಂಚ್ ಮಾಡಿದ್ವಿ ಈಗ ಅವನ ಮಗನನ್ನೂ ನಾವೇ ಲಾಂಚ್ ಮಾಡುತ್ತೇವೆ' ಎಂದಿದ್ದಾರೆ ಅರ್ಜುನ್ ಸರ್ಜಾ.( video credit ; public tv)