ಬುಲೆಟ್ ಪ್ರಕಾಶ್ ನಿಧನರಾದಾಗ ಕುಟುಂಬಕ್ಕೆ ದರ್ಶನ್ ಹೇಳಿದ್ದೇನು ಈಗ ಮಾಡುತ್ತಿರುವುದೇನು

By Infoflick Correspondent

Updated:Thursday, July 7, 2022, 10:07[IST]

ಬುಲೆಟ್ ಪ್ರಕಾಶ್ ನಿಧನರಾದಾಗ ಕುಟುಂಬಕ್ಕೆ ದರ್ಶನ್ ಹೇಳಿದ್ದೇನು  ಈಗ  ಮಾಡುತ್ತಿರುವುದೇನು

ಬುಲೆಟ್ ಪ್ರಕಾಶ್ ಮತ್ತು ದರ್ಶನ್ ಕಲಾಸಿಪಾಳ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬುಲೆಟ್ ಪ್ರಕಾಶ್ ಮತ್ತು ದರ್ಶನ್ ಆಪ್ತ ಸ್ನೇಹಿತರಾಗಿದ್ದರು. ದರ್ಶನ  ಸಿನಿಮಾ ದಲ್ಲಿ ಬುಲೆಟ್ ಗೆ ಒಂಧು ಪಾತ್ರ ಫಿಕ್ಸ್ ಎಂಬ ಮಾತು  ಇತ್ತು. ಆದರೆ ಕೆಲವು ವರ್ಷದ ಹಿಂದೆ ಅನಾರೋಗ್ಯದಿಂದ ಬುಲೇಟ್ ಪ್ರಕಾಶ್ ಇಹಲೋಕ ತ್ಯಜಿಸಿದರು.

ಬುಲೆಟ್ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಮಗಳು ಹಾಗೂ ಒಬ್ಬ ಮಗ ಬುಲೆಟ್ ಪ್ರಕಾಶ್ ನಿಧನದ ನಂತರ ಕಂಗಾಲಾದ ಕುಟುಂಬಕ್ಕೆ ದರ್ಶನ್ ಅಭಯ ನೀಡಿದ್ದರು. ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂದು ದರ್ಶನ್ ಹೇಳಿದ್ದರು.

ಬುಲೆಟ್ ಪ್ರಕಾಶ್‌ಗೆ ತಮ್ಮ ಮಗನನ್ನು ಹೀರೋ ಮಾಡ್ಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಮಗನಿಗೆ ತಯಾರಿ ಸಹ ಕೊಡ್ತಿದ್ದರು. ಜಿಮ್, ಡ್ಯಾನ್ಸ್‌ನಲ್ಲಿ ಮಗನನ್ನ ಪಳಗಿಸುತ್ತಿದ್ದರು. ದುರಾದೃಷ್ಟವಶಾತ್ ಮಗನ ಯಶಸ್ಸು ನೋಡುವ ಮೊದಲೇ ಬುಲೆಟ್ ಪ್ರಕಾಶ್ ಇಹಲೋಕ ತ್ಯಜಿಸಬೇಕಾಯಿತು.

ದರ್ಶನ್ ಅವರು ರಕ್ಷಕ್ ಬುಲೆಟ್ ಅವರಿಗೆ ಒಳ್ಳೆ ರೀತಿಯಲ್ಲಿ ಗೈಡ್ ಮಾಡುತ್ತಾ ತಪ್ಪು ಮಾಡಿದ್ದಾಗ ತಿದ್ದುತ್ತಾ, ಸ್ವಂತ ಮಗನಷ್ಟೇ ಪ್ರೀತಿ ತೋರಿಸಿ ನೋಡಿಕೊಳ್ಳುತ್ತಿದ್ದಾರಂತೆ. ಸದ್ಯಕ್ಕೆ ಬುಲೆಟ್ ಪ್ರಕಾಶ್ ಮಗನಾದ ರಕ್ಷಕ ಬುಲೆಟ್ ಅವರು ನಂದ ಕಿಶೋರ್ ಅವರ ನಿರ್ದೇಶನದ ಅಧ್ಯಕ್ಷ ಖ್ಯಾತಿಯ ಶರಣ್ ಅವರ ಅಭಿನಯದ ಗುರು ಶಿಷ್ಯರು ಎನ್ನುವ ಸಿನಿಮಾದಲ್ಲಿ ಶಿಷ್ಯನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅಕ್ಕನ ಮದುವೆಗೆ ಈಗಾಗಲೇ ಸಾಕಷ್ಟು ಹಣದ ಸಹಾಯ ಮಾಡಿದ್ದಾರೆ ರಂದು ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹೇಳಿಕೊಂಡಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಅವರ ಡಿ ಬಾಸ್ ನನ್ನನ್ನ ಅವರ ಮಗನ ಹಾಗೆ ನೋಡಿಕೊಳ್ಳುತ್ತಾರೆ, ನಿಜ ಹೇಳಬೇಕು ಅಂದರೆ ಅವರ ಮಗನಿಗಿಂತ ಚನ್ನಾಗಿ ನೋಡಿಕೊಳ್ಳುತ್ತಾರೆ ಎಂದು ರಕ್ಷಕ್ ಅವರು ಹೇಳಿದ್ದಾರೆ. ನಾನು ಅವರ ಮನೆಗೆ ಹೋದರೆ ಅವರು ಪ್ರತಿಯೊಂದು ಐಟಂ ತರಿಸುತ್ತಾರೆ ಮತ್ತು ಎಲ್ಲರು ಕೂಡ ಕುಳಿತುಕೊಂಡು ತಿನ್ನುತ್ತೇವೆ, ನಾವು ಅವರ ಮನೆಗೆ ಹೋದಾಗ ಸಿನಿಮಾ ವಿಷಯ ಮಾತನಾಡಲ್ಲ ಮತ್ತು ಅವರು ಫ್ರೆಂಡ್ ಜೊತೆ ಹಾಗಿರಬೇಕು ಹೀಗಿರಬೇಕು ಎಂದು ಮಾತನಾಡುತ್ತಾರೆ ಎಂದು ರಕ್ಷಕ್ ಹೇಳಿದ್ದಾರೆ.