ಅನಾಥಶ್ರಾಮ ಸೇರಿದ ಅನುಶ್ರೀ ತಂದೆ: ಈ ಬಗ್ಗೆ ಜಯರಾಜ್ ನಾಯ್ಡು ಹೇಳಿದ್ದೇನು..?

By Infoflick Correspondent

Updated:Monday, April 11, 2022, 13:50[IST]

ಅನಾಥಶ್ರಾಮ ಸೇರಿದ ಅನುಶ್ರೀ ತಂದೆ: ಈ ಬಗ್ಗೆ ಜಯರಾಜ್ ನಾಯ್ಡು ಹೇಳಿದ್ದೇನು..?

ಆಂಕರ್ ಅನುಶ್ರೀ ಅವರ ತಂದೆ ಎಂದು ಹೇಳಿಕೊಂಡು ಬಂದಿರುವ ಸಂಪತ್ ಕುಮಾರ್ ಅವರನ್ನು ಸದ್ಯ ಆಸರೆ ಅನಾಥಾಶ್ರಮದವರು ಕರೆದುಕೊಂಡು ಹೋಗಿದ್ದಾರೆ. ಆಸರೆ ಫೌಂಡೇಶನ್ ಸೇರಿದ ಮೇಲೆ ಹಲವರು ಕಮೆಂಟ್ ಮಾಡಿದರು. ಈ ಬಗ್ಗೆ ಆಸರೆ ಫೌಂಡೇಶನ್ ನ ಜಯರಾಜ್ ನಾಯ್ಡು ಅವರು ಮಾತನಾಡಿದ್ದಾರೆ. ಜಯರಾಜ್ ನಾಯ್ಡು ಅವರು ಏನ್ ಹೇಳಿದ್ದಾರೆ ಎಂದು ನೋಡೋಣ ಬನ್ನಿ.. 

ಸಾಕಷ್ಟು ಜನ ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ನಾವು ಸಂಪತ್ ಕುಮಾರ್ ಅವರಿಗೆ ಆಸರೆ ನೀಡಿರುವುದಕ್ಕೂ ಅನುಶ್ರೀ ಅವರ ತಂದೆ ಎಂದು ಹೇಳಿರುವುದಕ್ಕೂ ಸಂಬಂಧವಿಲ್ಲ. ಮಾನವೀಯತೆ ದೃಷ್ಟಿಯಿಂದ ನಾವು ಸಂಪತ್ ಅವರಿಗೆ ಆಸರೆ ನೀಡಲು ಮುಂದಾಗಿದ್ದೇವೆ. ನಟಿ ವಿಜಯ್ ಲಕ್ಷ್ಮೀ ಅವರಿಗೆ ಆಶ್ರಯ ನೀಡಿದಾಗಿನಿಂದ ನಮಗೆ ಸೆಲಬ್ರಿಟಿಗಳ ಸಹವಾಸವೇ ಬೇಡ ಎಂಬಂತಾಗಿದೆ. ನಮಗೆ ಪಬ್ಲಿಸಿಟಿ ಅವಶ್ಯಕತೆ ಇಲ್ಲ ಎಂದು ಜಯರಾಜ್ ನಾಯ್ಡು ಅವರು ಹೇಳಿದ್ದಾರೆ.  

ಇನ್ನು ಕಳೆದ ವಾರ ಸಂಪತ್ ಕುಮಾರ್ ಅವರು ಮಾಧ್ಯಮಕ್ಕೆ ಮಾತನಾಡಿದ್ದರು. ಈ ವೇಳೆ, ನನ್ನ ನೋಡುವುದಕ್ಕೆ ಕಳೆದ ವರ್ಷ ನನ್ನ ಮಗ ಅಭಿಜಿತ್ ಬಂದಿದ್ದ. ಕಳೆದ ವಾರ ನನ್ನ ಭಾಮೈದುನನಿಗೆ ಕರೆ ಮಾಡಿದ್ದೆ. ಮಗಳು ಇನ್ನೂ ಒಳ್ಳೆಯ ಸ್ಥಾನಕ್ಕೇರಲಿ. ನಾನು ಸತ್ತ ಮೇಲೆ  ಬಂದು ಮಣ್ಣು ಹಾಕಲಿ ಅಷ್ಟೇ ಸಾಕು. ನಾನು ನನ್ನ ಮಕ್ಕಳಿಂದ ಏನನ್ನೂ ಆಸೆ ಪಡುತ್ತಿಲ್ಲ. ಮಕ್ಕಳು ಹಾಳಾಗಲಿ ಅಂತ ಯಾವ ತಂದೆಯೂ ಬಯಸುವುದಿಲ್ಲ. ಆದರೆ ಅಪ್ಪ ಬದುಕಿರುವಾಗಲೇ ಇಲ್ಲ ಎಂದು ಹೇಳಿದರೆ ನನಗೆ ಹೇಗೆ ಆಗಬೇಡ. ನಾನು ಎಷ್ಟು ಸಂಕಟ ಅನುಭವಿಸಿರುವುದಿಲ್ಲ ಎಂದು ಹೇಳಿದ್ದರು.