KGF 2 : ಜ್ಯೂ.ಎನ್​ಟಿಆರ್​ ಖ್ಯಾತ ನಿರ್ದೇಶಕರಿಗೆ "ಕೆಜಿಎಫ್2 ನೋಡಿ ಕಲಿತುಕೊಳ್ಳಿ" ಎನ್ನಲು ಇಲ್ಲಿದೆ ಬಲವಾದ ಕಾರಣ!

By Infoflick Correspondent

Updated:Saturday, May 7, 2022, 11:21[IST]

KGF 2 : ಜ್ಯೂ.ಎನ್​ಟಿಆರ್​ ಖ್ಯಾತ ನಿರ್ದೇಶಕರಿಗೆ

ಟಾಲಿವುಡ್ ನಲ್ಲಿ ಜ್ಯೂ. NTR ಸೂಪರ್ ಸ್ಟಾರ್. ಸ್ಯಾಂಡಲ್. ಭಾರತದಾದ್ಯಂತ ದೊಡ್ಡ ಅಭಿಮಾನಿಗಳ ಬಳಗವಿದೆ. ಇತ್ತೀಚೆಗೆ RRR ಸಿನಿಮಾ ಬಳಿಕ ಎನ್ ಟಿ ಆರ್ ಕ್ರೇಜ್ ಹೆಚ್ಚಾಗಿದೆ. ಇದೆ ಜೊತೆ ಕೆಜಿಎಫ್2 ಹವಾ ಕೂಡ ಮುಗಿಲು ಮುಟ್ಟಿದೆ. ಈ ಸಿನಿಮಾ ವಿಶ್ವಾದ್ಯಂತ ಜನಮನ ಗೆದ್ದಿದೆ.  

ಎನ್​ಟಿಆರ್​ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಸಿನಿಮಾ ಹೇಗೆ ಮೂಡಿ ಬರಲಿದೆ ಅನ್ನೋದು ಸದ್ಯದ ಕುತೂಹಲದ ವಿಷಯ ಆದರೆ ಎನ್​ಟಿಆರ್​ ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರಿಗೆ ಕನ್ನಡದ ಒಂದು ಸಿನಿಮಾವನ್ನು ನೋಡಿ ವೃತ್ತಿ ಜೀವನದಲ್ಲಿ ಕೆಲವು ಅಂಶಗಳನ್ನು ಕಲಿಯಲು ಹೇಳಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕನ್ನಡದ ಸಿನಿಮಾ ಇತರ ಭಾಷೆಯವರಿಗೆ ಮಾರ್ಗಸೂಚಿ ಎಂದರೆ ಹೆಮ್ಮೆ ಪಡುವ ಸಂಗತಿ. ಅದು ಯಾವ ನಿರ್ದೇಶಕರಿಗೆ ಯಾವ ಸಿನಿಮಾ ಏಕೆ ಹೀಗೆ ಹೇಳಿದರು  ಎಂಬುದು ಇಲ್ಲಿದೆ  ನೋಡಿ 

ಕೆಜಿಎಫ್ 2' ಹಾಗೂ 'ಆರ್​ಆರ್​ಆರ್​' ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಹೀಗಾಗಿ, ಈ ಸಿನಿಮಾಗಳನ್ನು ನೋಡಿ ಆ ಚಿತ್ರಗಳು ಗೆಲುವಿನ ಕಾರಣಗಳನ್ನು ಅರ್ಥೈಸಿಕೊಳ್ಳುವಂತೆ ಜ್ಯೂ.ಎನ್​ಟಿಆರ್​ ಅವರು ಕೊರಟಾಲ ಶಿವಗೆ ಸೂಚನೆ ನೀಡಿದ್ದಾರೆ ಎಂದು ಬಲ್ಲಮೂಲಗಳಿಂದ ವರದಿ ಆಗಿದೆ. 

ಕೊರಟಾಲ ಶಿವ ನಿರ್ದೇಶನದ ಮುಂದಿನ ಸಿನಿಮಾಗೆ ಜ್ಯೂ.ಎನ್​ಟಿಆರ್ ಹೀರೋ. ಕೊರಟಾಲ ಶಿವ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ.ಆದರೆ ಕೊರಟಾಲ ಶಿವ ನಿರ್ದೇಶನದ 'ಆಚಾರ್ಯ' ಸಿನಿಮಾ  ಹೀನಾಯವಾಗಿ ಸೋತಿದೆ.ಆದ್ದರಿಂದ  ಮುಂದಿನ ಸಿನಿಮಾದ ಸ್ಕ್ರಿಪ್ಟ್​ ಬಗ್ಗೆ ಗಮನ ಹರಿಸಲು ಅವರು ಕೊರಟಾಲ ಶಿವಗೆ ಸೂಚನೆ ನೀಡಿದ್ದಾರೆ.