ಮೇಘನಾ ರಾಜ್ ಮತ್ತೆ ಸರ್ಜಾ ಮನೆಗೆ ಹೋಗುತ್ತಾರಾ ಅನ್ನೋ ಅನುಮಾನ ಮನೆ ಮಾಡಿದೆ: ಇದಕ್ಕೆ ಮೇಘನಾ ಹೇಳಿದ್ದೇನು..? 

Updated: Tuesday, September 14, 2021, 15:46 [IST]

ದಿವಂಗತ ಚಿರಂಜೀವಿ ಸರ್ಜಾ ಇಹಲೋಕ ತ್ಯೆಜಿಸಿ ವರ್ಷ ಕಳೆದಿದೆ. ಕಳೆದ ಜೂನ್‌ 2020ರಿಂದ ಮೇಘನಾ ರಾಜ್‌ ತಮ್ಮ ತವರು ಮನೆಯಲ್ಲೇ ಇದ್ದಾರೆ. ರಾಯನ್‌ ಹುಟ್ಟಿ 11 ತಿಂಗಳಾಗುತ್ತಾ ಬಂದಿದೆ. ಮೇಘನಾ ಅವರ ಬಾಣಂತನವೂ ಮುಗಿಯುವ ಹಂತದಲ್ಲಿದೆ. ಇಷ್ಟು ದಿನವಾದರೂ ಇನ್ನು ಮೇಘನಾ ಸರ್ಜಾ ಮನೆಗೆ ಹೋಗುವ ಯೋಚನೆಯನ್ನೇ ಮಾಡಿಲ್ಲವಂತೆ. 

ಇತ್ತೀಚೆಗಷ್ಟೇ ಮಗನ ನಾಮಕರಣವನ್ನು ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಮಾಡಲಾಗಿತ್ತು. ಈ ವೇಳೆ, ಮೇಘನಾ ರಾಜ್‌ ಕುಟುಂಬ ಹಾಗೂ ಸರ್ಜಾ ಕುಟುಂಬ ಒಂದೆಡೆ ಭಾಗಿಯಾಗಿತ್ತು. ಇನ್ನು ಮೇಘನಾ ರಾಜ್‌ ಹಾಗೂ ಚಿರಂಜೀವಿ ಸರ್ಜಾ ಮಗುವಿಗೆ ರಾಯನ್‌ ರಾಜ್‌ ಸರ್ಜಾ ಎಂದು ಹೆಸರಿಡಲಾಗಿದೆ. ರಾಯನ್‌ ಎಂಬ ಹೆಸರು ಕ್ರೈಸ್ತ ಧರ್ಮದ ಹೆಸರಿನಂತಿದೆ ಎಂಬ ವಿವಾದವೂ ಸೃಷ್ಟಿಯಾಗಿತ್ತು. ಈ ವೇಳೆ,  ಮಗನ ಹೆಸರಿನ ಬಗ್ಗೆ ಮಾತನಾಡಿದ್ದ ಮೇಘನಾ ರಾಜ್‌, ಕತ್ತಲೆಯಲ್ಲಿದ್ದ ನಮಗೆ ಬೆಳಕು ಕೊಟ್ಟ. ಅವನಿಂದ ನಮ್ಮೆರಡೂ ಮನೆಯಲ್ಲಿ ನಗು, ಖುಷಿ, ಸಂತಸ ಮನೆ ಮಾಡಿದೆ. ಅವನು ಎಂದಿಗೂ ರಾಯನ್.‌ ಹಾಗಾಗಿ ಅವನಿಗೆ ಈ ಹೆಸರು ಇಟ್ಟಿದ್ದೇವೆ ಎಂದು ಹೇಳಿದ್ದರು. 

ಇನ್ನು ಮಗನ ನಾಮಕರಣ ಕಾರ್ಯಕ್ರಮದ ಬಳಿಕ ಮಾಧ್ಯಮವೊಂದಕ್ಕೆ ಮೇಘನಾ ರಾಜ್‌ ಸಂದರ್ಶನ ನೀಡಿದ್ದರು. ಈ ವೇಳೆ, ನೀವು ಸರ್ಜಾ ಮನೆಗೆ ಯಾವಾಗ ಹೋಗುತ್ತೀರಾ ಎಂದು ಪ್ರಶ್ನೆ ಕೇಳಲಾಯ್ತು. ಈ ಪ್ರಶ್ನೆಗೆ ಉತ್ತರಿಸಿದ ಮೇಘನಾ, ನಾನು ಇನ್ನು ಬಾಣಂತನದಲ್ಲಿದ್ದೇನೆ. ಹಾಗಾಗಿ ತವರು ಮನೆಯಲ್ಲಿರುವೆ. ಇನ್ನು ಸರ್ಜಾ ಮನೆಗೆ ಹೋಗುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ಎಂದರು. ಅಲ್ಲದೇ, ನಾನೀಗ ಸರ್ಜಾ ಕುಟುಂಬದ ಕುಡಿಗೆ ತಾಯಿಯಾಗಿದ್ದೇನೆ. ಆ ಕುಟುಂಬದ ರಕ್ತ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದೂ ಕೂಡ ಹೇಳಿದ್ದಾರೆ. 

ಆದರೆ, ಮೇಘನಾ ರಾಜ್‌ ಅವರ ಹೇಳಿಕೆಯಿಂದ ಹಲವರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ನಿಜಕ್ಕೂ ಸರ್ಜಾ ಮನೆಗೆ ಮೇಘನಾ ಹೋಗುತ್ತಾರಾ ಎಂಬ ಪ್ರಶ್ನೆ ಉಂಟಾಗಿದೆ. ಹಾಗೊಂದು ವೇಳೆ, ಮೇಘನಾ ಸರ್ಜಾ ಅವರ ಮನೆಗೆ ಹೋಗದಿದ್ದರೆ ಹೇಗೆ..? ನಿಜಕ್ಕೂ ಅವರ ಕುಟುಂಬದಲ್ಲಿ ಎಲ್ಲವೂ ಸರಿ ಇದೆಯಾ..? ನಾಮಕರಣ ಕಾರ್ಯಕ್ರಮಕ್ಕೆ ಅರ್ಜುನ್‌ ಸರ್ಜಾ ಕುಟುಂಬ ಬಾರದಿರಲು ಕಾರಣವೇಣು ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿವೆ.