ರಾಜ್‌ ಕುಂದ್ರಾ ಅಶ್ಲೀಲ ಫಿಲಂ ಶೂಟಿಂಗ್‌ ಬಗ್ಗೆ ಮಾಡೆಲ್‌ ಹೇಳಿದ್ದೇನು?:‌ ಆಕೆ ಬಟ್ಟೆ ಇಲ್ಲದ ಫೋಟೋ ಹಾಕಿದ್ದೇಕೆ..?

Updated: Tuesday, September 14, 2021, 09:44 [IST]

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಆಪ್‌ಗಳಲ್ಲಿ ಅಪ್‌ಲೋಡ್ ಮಾಡುವ ಆರೋಪದಡಿ ಜೈಲು ಪಾಲಾಗಿದ್ದಾರೆ. ರಾಜ್ ಕುಂದ್ರಾ ಅಶ್ಲೀಲ ಫೀಲಂ ಮೂಲಕ ಹಣ ಗಳಿಸುವಂತೆ ದಂಧೆಯನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಅಶ್ಲೀಲ ಚಿತ್ರಗಳನ್ನು ಲೈವ್ ಪ್ರಸಾರ ಮಾಡಲು ನಿರ್ಧರಿಸಿದ್ದರು. ಇದರ ಯೋಜನೆ ರೂಪಿಸಿದ ವಾಟ್ಸಪ್ ಚಾಟ್ ಪೊಲೀಸರ ಕೈಗೆ ಸಿಕ್ಕ ಹಿನ್ನೆಲೆ ಕಂಬಿ ಎಣಿಸುತ್ತಿದ್ದಾರೆ. 

ಇದೀಗ ರಾಜ್‌ ಕುಂದ್ರಾ ಪರ ಮಾಡೆಲ್‌ ಗೆಹನಾ ವಶಿಷ್ಠ ಬ್ಯಾಟ್‌ ಬೀಸಿದ್ದಾರೆ. ಬೆಡ್‌ ಮೇಲೆ ಟಾಪ್‌ ಲೆಸ್‌ ಫೋಟೋವನ್ನು ಗೆಹನಾ ಸಾಮಾಜಿಕ ಜಾಲಾತಾಣದಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಪೋನೋಗ್ರಫಿ ಬಗ್ಗೆ ಬರೆದುಕೊಂಡಿದ್ದಾರೆ. ಪೊನೋಗ್ರಫಿಯನ್ನು ಹೇಗೆ ಶೂಟ್‌ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಶೂಟಿಂಗ್‌ ವೇಳೆ ಅಲ್ಲಿ 20 ಮಂದಿ ಇದ್ದೆವು. ಅಲ್ಲಿ ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ. ನಾನು ಯಾವುದೇ ಜೂಸ್‌ ಕುಡಿದಿರಲಿಲ್ಲ. ಆಟೋದಲ್ಲಿ ಬಂದು ಆಟೋದಲ್ಲೇ ಹೋದೆ. ನಾನು 18 ವರ್ಷ ಮೇಲ್ಪಟ್ಟವಳಾದ್ದರಿಂದ ರೆಗ್ಯೂಲರ್‌ ಆರ್ಟಿಸ್ಟ್‌ ಆಗಿದ್ದೆ. ಹೀಗಾಗಿ ರಾಜ್‌ ಕುಂದ್ರಾ ಅವರ ಮೇಲೆ 354, 370, 376 ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಅಶ್ಲೀಲ ಫಿಲಂ ಅನ್ನ ದೊಡ್ಡ ಉದ್ಯಮವನ್ನಾಗಿ ಮಾಡಿಕೊಳ್ಳುವುದು ರಾಜ್ ಕುಂದ್ರಾ ಯೋಜನೆಯಾಗಿತ್ತು. ಇದರಿಂದ ಸಾಕಷ್ಟು ಹಣ ಗಳಿಸುವ ಯೋಜನೆಯನ್ನ ರಾಜ್ ಕುಂದ್ರಾ ಹಾಕಿಕೊಂಡಿದ್ದರು. ಹಾಟ್‌ಶಾಟ್ಸ್ ಆಪ್‌ನಲ್ಲಿ ನೀಲಿ ಚಿತ್ರಗಳನ್ನು ಸ್ಟ್ರೀಂಮಿಂಗ್‌ ಮಾಡುವಲ್ಲಿ ರಾಜ್ ಕುಂದ್ರಾ ಪಾಲ್ಗೊಂಡಿದ್ದರು. ಈ ಅಪ್ಲಿಕೇಶನ್ ಮೂಲಕ ರಾಜ್ ಕುಂದ್ರಾ ಖಾತೆಗೆ ಹಣ ಕೂಡ ಸಂದಾಯವಾಗಿತ್ತು. ಇನ್ನು ದಿನವೊಂದಕ್ಕೆ ರಾಜ್ ಕುಂದ್ರಾ ಹೆಚ್ಚು ಕಡಿಮೆ 7 ಲಕ್ಷ ರೂಪಾಯಿ ಹಣವನ್ನು ಸಂಪಾದಿಸುತ್ತಿದ್ದರು ಎಂದು ಹೇಳಲಾಗಿದೆ. ರಾಜ್ ಕುಂದ್ರಾ ಹತ್ತಾರು ಕಂಪನಿಗಳಿಗೆ ಡೈರೆಕ್ಟರ್ ಆಗಿದ್ದಾರೆ. ಶಿಲ್ಪಾ ಶೆಟ್ಟಿ ಯೋಗ ಪ್ರೈವೆಟ್‌ ಲಿಮಿಟೆಡ್, ಬ್ಯಾಸ್ಟೇನ್ ಹಾಸ್ಪಿಟಾಲಿಟಿ, ವಿಯಾನ್ ಇಂಡಸ್ಟ್ರಿ, ಸಿನಿಮೇಷನ್ ಮೀಡಿಯಾ ವರ್ಕ್ಸ್, ಕುಂದ್ರಾ ಕನೆಕ್ಷನ್ಸ್, ಅಕ್ವಾ ಎನರ್ಜಿ ಬ್ರೆವರ್ಜೀಸ್ ಸೇರಿದಂತೆ ಹಲವು ಕಂಪೆನಿಗಳನ್ನು ಹೊಂದಿದ್ದಾರೆ.