ರಾಘಣ್ಣ ಆರೋಗ್ಯದ ಸ್ಥಿತಿ-ಗತಿ ಬಗ್ಗೆ  ಪ್ರಥಮ್ ಹೇಳಿದ ಮಾತು ಇಲ್ಲಿದೆ ನೋಡಿ

By Infoflick Correspondent

Updated:Sunday, April 24, 2022, 20:10[IST]

ರಾಘಣ್ಣ ಆರೋಗ್ಯದ ಸ್ಥಿತಿ-ಗತಿ ಬಗ್ಗೆ  ಪ್ರಥಮ್ ಹೇಳಿದ ಮಾತು ಇಲ್ಲಿದೆ ನೋಡಿ

ಜನತೆಯ ದೃಷ್ಟಿ ಈಗ ದೊಡ್ಮನೆಯ ಮೇಲೆ ಇದೆ. ಹಲವರು ಕಾಳಜಿಯಿಂದ ಇನ್ನು ಕೆಲವರು ಕುತೂಹಲದಿಂದ ದೊಡ್ಮನೆಯ ಯೋಗ ಕ್ಷೇಮವನ್ನು ವಿಚಾರಿಸುತ್ತಿದ್ದಾರೆ. ಪುನೀತ್ ಆಕಸ್ಮಿಕ ನಿಧನದಿಂದ ಜನ ಹೊರಬಂದಿಲ್ಲ ಮತ್ತೆ ಮೊನ್ನೆ ತಾನೇ ಶಿವಣ್ಣ ಆಸ್ಪತ್ರೆಗೆ ಹೋಗಿ ಬಂದಿದ್ದರು ಇದರಿಂದ ಅಭಿಮಾನಿಗಳು ಕ್ಷಣ ಕಾಲ ಕಂಗಾಲಾಗಿದ್ದರು‌. ನಂತರ ಶಿವಣ್ಣನ ಆರೋಗ್ಯ ಚೆನ್ನಾಗಿದೆ ಎಂದು ತಿಳಿದು ನಿರಾಳರಾದರು. 

ಇದೀಗ ರಾಘಣ್ಣನ ಆರೋಗ್ಯದ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇದರಿಂದ ಜನತೆ ಗೊಂದಲಕ್ಕೆ ಒಳಗಾಗಿದ್ದಾರೆ. ಆದರೇ ಪ್ರಥಮ್ ರಾಘವೇಂದ್ರ ರಾಜಕುಮಾರ್ ಆರೊಗ್ಯದ ಬಗ್ಗೆ ಹೊಸ ಮತ್ತು ನಿಖರ ಮಾಹಿತಿ ಕೊಟ್ಟಿದ್ದಾರೆ.  

ಪ್ರಥಮ್ ರಾಘಣ್ಣ ಅವರ ಜೊತೆ ಕರ್ನಾಟಕದ ಅಳಿಯ ಎಂಬ ಸಿನಿಮಾ ಮಾಡುತ್ತಿದ್ದು ಅವರಿಬ್ಬರ ಒಡನಾಟ ನಿಕಟವಾಗಿದೆ. ಒಳ್ಳೆ ಹುಡುಗ ಎಲ್ಲರ ಮನೆಮಗನಾದ ಪ್ರಥಮ್ ಇದ್ದ ವಿಚಾರವನ್ನು ಇರುವಂತೆ ನೇರವಾಗಿ ಹೇಳುತ್ತಾರೆ. ಅವರದ್ದು ನೇರ ನುಡಿ. ಈಗ ರಾಘಣ್ಣನ ಆರೋಗ್ಯದ ಬಗ್ಗೆ ನೇರವಾಗಿ ಅಭಿಮಾನಿ ದೇವರುಗಳಿಗೆ ಹೇಳಿದ್ದಾರೆ. 

ಪ್ರಥಮ್ ಅವರಿಗೆ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯದ ಬಗ್ಗೆ ಹಲವಾರು ಕರೆಗಳು ಬರುತ್ತಿದ್ದು. ಜನತೆಯ ಗೊಂದಲ‌ ದೂರವಾಗಿ ಎಂದು ನಿಖರವಾದ ಮಾಹಿತಿ ನೀಡಿದ್ದಾರೆ. ಅವರು ಹೇಳಿದ ಮಾತು ಹೀಗಿದೆ ಓದಿ; 

ರಾಘಣ್ಣ ಸರ್ ಆರೋಗ್ಯವಾಗಿ, ಚೆನ್ನಾಗಿದ್ದಾರೆ. ಸದ್ಯ ಶೂಟಿಂಗ್ ಕೆಲಸದಲ್ಲಿದ್ದು ಶೂಟಿಂಗ್ ಕೂಡ ಯಶಸ್ವಿಯಾಗಿ ಮುಗಿಸಿದ್ದಾರೆ. ಅಪ್ಪಾಜಿ ಹುಟ್ಟುಹಬ್ಬದ ನಿಮಿತ್ತ ಗಾಜಿನೂರಿಗೆ ಹೋಗಿ  ಅಪ್ಪು ಸರ್ ಹಾಗು ಅಣ್ಣವ್ರ ಜ್ಯೋತಿಯನ್ನು ತರುತ್ತಿದ್ದಾರೆ. ನೀವು ಗೌರವ ಹಾಗು ಪ್ರೀತಿಯಿಂದ ಅದನ್ನು ಸ್ವಾಗತಿಸಿ ಎಂದಿದ್ದಾರೆ. 

ರಾಘಣ್ಣ ಅವರ ಆರೋಗ್ಯದ ಕುರಿತಾಗಿ ಅಭಿಮಾನಿಗಳಿಗೆ ಇದ್ದ ಆತಂಕ ಗೊಂದಲಗಳಿಗೆ ಪ್ರಥಮ್ ಉತ್ತರ ನೀಡಿದ್ದಕ್ಕೆ ಜನತೆ ನಿರಾಳವಾಗಿದ್ದು ಧನ್ಯವಾದ ಸಮರ್ಪಿಸುತ್ತಿದೆ.