ಮಾಜಿ ಬಾಯ್ ಫ್ರೆಂಡ್ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು ಗೊತ್ತೆ ?

By Infoflick Correspondent

Updated:Sunday, March 13, 2022, 16:55[IST]

ಮಾಜಿ ಬಾಯ್ ಫ್ರೆಂಡ್ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು ಗೊತ್ತೆ ?

ಅನೇಕ ನಟ-ನಟಿಯರು ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಇತ್ತೀಚಿಗಂತು ತಮ್ಮ ಪ್ರತಿಯೊಂದು ಮಾಹಿತಿಯನ್ನು , ದಿನಚರಿಗಳನ್ನು, ಹಲವಾರು ವಿಷಯಗಳನ್ನು ತಮ್ಮ ಅಭಿಮಾನಿಗಳ ಜೊತೆ ಯೂಟ್ಯೂಬ್​ ಚಾನೆಲ್​ ಮೂಲಕ ಹಂಚಿಕೊಳ್ಳುತ್ತಿದ್ದಾರೆ.  ಹಣ ಗಳಿಕೆಗೆಯ ಜೊತೆ ಅಭಿಮಾನಿಗಳನ್ನು ರಂಜಿಸಲು ಇದು ಉತ್ತಮ ಮಾಧ್ಯಮವಾಗಿದೆ‌. 

ಇದೀಗ ಕೊಡಗಿನ ಬೆಡಗಿ, ಹಲವು ಭಾಷಾ ತಾರೆ ರಶ್ಮಿಕಾ ಮಂದಣ್ಣ ಸಹ  ಹೊಸ ಯೂಟ್ಯೂಬ್​ ಚಾನೆಲ್​ ಪ್ರಾರಂಭಿಸಿದ್ದಾರೆ. ಇಷ್ಟು ದಿನ ಕೇವಲ ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ಟ್ವಿಟರ್​ ಮುಂತಾದ ಸೋಶಿಯಲ್​ ಮೀಡಿಯಾದಲ್ಲಿ ಆಯಕ್ಟೀವ್​ ಆಗಿದ್ದ  ರಶ್ಮಿಕಾ ಈಗ ಯೂಟ್ಯೂಬ್​ ಚಾನೆಲ್​ ಗೆ ಹೆಜ್ಜೆ ಇಟ್ಟಿದ್ದಾರೆ.   

ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂಬುದು ಅಭಿಮಾನಿಗಳ ಆಸೆ. ಅದಕ್ಕಾಗಿಯೇ ರಶ್ಮಿಕಾ ಈ ಚಾನೆಲ್​ ಶುರು ಮಾಡಿದ್ದಾರೆ. ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ ಒಂದೇ ದಿನಕ್ಕೆ ರಶ್ಮಿಕಾ ಚಾನಲ್ ಗೆ 38 ಸಾವಿರಕ್ಕೂ ಅಧಿಕ ಮಂದಿ ಚಂದಾದಾರರಾಗಿದ್ದಾರೆ. ಪ್ರಾರಂಭದ ದಿನವೇ ಯೂಟ್ಯೂಬ್ ಚಾನಲ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋ ಈಗ ಭಾರಿ ಸದ್ದು ಮಾಡುತ್ತಿದೆ. 56 ಸೆಕೆಂಡ್​ಗಳ ಈ ವಿಡಿಯೋದಲ್ಲಿ ರಶ್ಮಿಕಾ ಅವರ ಚುಟುಕು ಸಂದರ್ಶನ ಇದೆ. ವಿಡಿಯೋದ ಸಂದರ್ಶನದಲ್ಲಿ ಏನಿದೆ?  ಗೊತ್ತೆ ಒಂದು ದಿನ ಕಳೆಯುವುದರೊಳಗೆ ಎರಡು ಲಕ್ಷಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆ ಕಂಡಿದೆ. 

ಸಂದರ್ಶಕಿ:ನಿಮಗೆ ಆಯಕ್ಟಿಂಗ್ ​ ಅಂದರೆ ಯಾಕೆ ಇಷ್ಟ ?
ರಶ್ಮಿಕಾ :ನನ್ನನ್ನು ನಾನು ಕಂಡುಕೊಳ್ಳಲು ಇದು ನನಗೆ ಸಹಾಯ ಮಾಡುತ್ತದೆ. 

ಸಂದರ್ಶಕಿ: ಪ್ರವಾಸ ಮಾಡುವುದು ನಿಮಗೆ ಯಾಕೆ ಇಷ್ಟ ?
ರಶ್ಮಿಕಾ: ಯಾಕೆಂದರೆ ನನಗೆ ನೆನಪುಗಳನ್ನು ಕೂಡಿಡುವುದು ಎಂದರೆ ಇಷ್ಟ. 

ಸಂದರ್ಶಕಿ:ಡ್ಯಾನ್ಸ್ ​ ಎಂದರೆ ನಿಮಗೆ ಯಾಕೆ ಇಷ್ಟ ?
ರಶ್ಮಿಕಾ: ಯಾಕೆಂದರೆ ಶಾಲಾ ದಿನಗಳಿಂದಲೂ ನಾನು ಡ್ಯಾನ್ಸ್​ ಮಾಡುತ್ತಾ ಬಂದಿದ್ದೇನೆ. 

ರಶ್ಮಿಕಾ : ತಮಗೆ ಸಿಹಿ ತಿಂಡಿ ಇಷ್ಟ. ಅದಕ್ಕಾಗಿಯೇ ತಾವು ಜಿಮ್​ನಲ್ಲಿ ವರ್ಕೌಟ್​ ಮಾಡುವುದಾಗಿ ರಶ್ಮಿಕಾ ಹೇಳಿದ್ದಾರೆ. 

ಸಂದರ್ಶಕಿ : ಸಾಮಾನ್ಯವಾಗಿ ಜನರು Ex-​(ಮಾಜಿ)ಗಳ ಬಗ್ಗೆ ಮಾತಾಡುತ್ತಾರೆ. ಆದರೆ ನಾವು ಇವತ್ತು ನಿಮ್ಮ Y-(ಯಾಕೆ)ಗಳ ಬಗ್ಗೆ ಮಾತಾಡುತ್ತೇವೆ.
ರಶ್ಮಿಕಾ: ನನಗೆ EX ಗಳ ಬಗ್ಗೆ ಪ್ರಶ್ನೆಗಳಿಗಿಂತ Y  ಪ್ರಶ್ನೆಗಳೇ ಇಷ್ಟ ಕೇಳಿ ಎಂದ್ದಿದ್ದಾರೆ. 

ಹೀಗೆ ಪ್ರಶ್ನೆ ಉತ್ತರಗಳು ಸಾಗುತ್ತಾ. ನನಗೆ EX(ಮಾಜಿ)  ಗಳ ಬಗ್ಗೆ ಬರುವ ಪ್ರಶ್ನೆಗಳು ಇಷ್ಟ ಇಲ್ಲ ಎಂಬುದನ್ನು ತಮ್ಮ ಮೊದಲ ವಿಡಿಯೋದಲ್ಲೇ ಸೂಕ್ಷ್ಮವಾಗಿ ಹೇಳಿದ್ದಾರೆ ರಶ್ಮಿಕಾ.