ವಿಕ್ರಾಂತ್ ರೋಣದ ಬಗ್ಗೆ ರಾಜಮೌಳಿ ಕೊನೆಘಳಿಗೆಯಲ್ಲಿ ಹೇಳಿದ್ದೇನು

By Infoflick Correspondent

Updated:Friday, July 29, 2022, 12:58[IST]

ವಿಕ್ರಾಂತ್  ರೋಣದ ಬಗ್ಗೆ ರಾಜಮೌಳಿ  ಕೊನೆಘಳಿಗೆಯಲ್ಲಿ ಹೇಳಿದ್ದೇನು

ವಿಕ್ರಾಂತ್ ರೋಣ' ಸಿನಿಮಾ ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನವೇ ಸಿಕ್ಕಾಪಟ್ಟೆ ಕಮಾಯಿ ಗಳಿಸಿದೆ. ಹಲವಾರು ಸೆಲಬ್ರಿಟಿಗಳು ಶುಭಕೋರುತ್ತಿದ್ದಾರೆ. ಇದರ ಜೊತೆ ರಾಜಮೌಳಿ ಅವರ ಅವರು ಒಂದು ಟ್ವೀಟ್​ನಿಂದ 'ವಿಕ್ರಾಂತ್​ ರೋಣ' ತಂಡಕ್ಕೆ ಹೊಸ ಬಲ ಸಿಕ್ಕಂತೆ ಆಗಿದೆ.

ವಿಕ್ರಾಂತ್ ರೋಣ' ಬಿಡುಗಡೆಗೂ ಮುನ್ನ ಮೂವಿ ಮಾಂತ್ರಿಕ ರಾಜಮೌಳಿ ಟ್ವೀಟ್ ಮಾಡಿದ್ದರು. ವಿಕ್ರಾಂತ್ ರೋಣ' ಸಿನಿಮಾ ಹಾಗೂ ಕಿಚ್ಚ ಸುದೀಪ್ ಬಗ್ಗೆ ರಾಜಮೌಳಿ ಟ್ವೀಟ್ ಮಾಡಿದ್ದು, ಸಿನಿಮಾ ತಂಡಕ್ಕೆ ಕೊನೆಯ ಕ್ಷಣದಲ್ಲಿ ಹೊಸ ಹುರುಷು ಬಂದಂತಾಗಿದೆ.

ಸುದೀಪ್ ಹಾಗೂ ರಾಜಮೌಳಿ ನಡುವೆ ಒಳ್ಳೆಯ ಬಾಂಧವ್ಯ ಇದೆ. ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮಾಡಿದ್ದ ನೆಗೆಟಿವ್ ಶೇಡ್​​ನ​ ಪಾತ್ರ ಸಾಕಷ್ಟು ಹೈಲೈಟ್ ಆಗಿತ್ತು. ಆ ಬಳಿಕ 'ಬಾಹುಬಲಿ' ಚಿತ್ರದಲ್ಲಿ ಸುದೀಪ್ ಒಂದು ಅತಿಥಿ ಪಾತ್ರ ಮಾಡಿದ್ದರು. ಇವರ ಬಾಂಧವ್ಯ ಈಗಲೂ ಮುಂದುವರಿದಿದೆ. 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್​ಗೂ ಒಂದು ದಿನ ಮೊದಲು (ಜುಲೈ 27) ರಾಜಮೌಳಿ ಅವರು ಸುದೀಪ್​ಗೆ ಈ ಮಾತುಗಳನ್ನು ಹೇಳಿದ್ದಾರೆ.

ಪ್ರಯೋಗಗಳನ್ನು ಮಾಡುವಲ್ಲಿ ಮತ್ತು ಸವಾಲುಗಳನ್ನು ಸ್ವೀಕರಿಸುವಲ್ಲಿ ಸುದೀಪ್ ಯಾವಾಗಲೂ ಮೊದಲಿಗರು. 'ವಿಕ್ರಾಂತ್ ರೋಣ' ಚಿತ್ರದಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ. ವಿಶ್ಯುವಲ್ಸ್​ ಅದ್ಭುತವಾಗಿದೆ. ಸುದೀಪ್​ ಹಾಗೂ ಅವರ ತಂಡಕ್ಕೆ ನನ್ನ ಶುಭಾಶಯ' ಎಂದು ರಾಜಮೌಳಿ ಹೇಳಿದ್ದಾರೆ.