ರಂಗಣ್ಣನ ಮಗಳ ಮದುವೆಯಲ್ಲಿ ಯಶ್..! ಯಶ್ ಕೊಟ್ಟ ಉಡುಗೊರೆ ನೋಡಿ ರಂಗಣ್ಣ ಭಾವುಕ..!!

Updated: Thursday, November 25, 2021, 13:00 [IST]

ರಂಗಣ್ಣನ ಮಗಳ ಮದುವೆಯಲ್ಲಿ ಯಶ್..! ಯಶ್ ಕೊಟ್ಟ ಉಡುಗೊರೆ ನೋಡಿ ರಂಗಣ್ಣ ಭಾವುಕ..!!

ಹೌದು ಸ್ನೇಹಿತರೆ ಸುದ್ದಿ ಮಾಧ್ಯಮ ಲೋಕದ ಅತಿ ಹೆಚ್ಚು ಅಭಿಮಾನಿಗಳ ಹೊಂದಿರುವ ಪತ್ರಕರ್ತ ಹಾಗೂ ನೇರನುಡಿಯಿಂದಲೇ ಸಾಕಷ್ಟು ಜನರ ಸಮಸ್ಯೆಯನ್ನು ಬಗೆಹರಿಸುವ, ಮತ್ತು ಎಲ್ಲ ವಿಷಯವನ್ನು ಮುಟ್ಟಿಸುವ, ಅವರದೇ ಆದ ಮಾತಿನ ಶೈಲಿಯ ಮೂಲಕ ಎಲ್ಲರ ಮನೆಮಾತಾಗಿರುವ ಪಬ್ಲಿಕ್ ಟಿವಿ ರಂಗಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕ್ಷಣ ಪಬ್ಲಿಕ್ ಟಿವಿಯಲ್ಲಿ ರಂಗಣ್ಣ ಅವರು ಬಂದರೆ, ಏನಾದ್ರೂ ಒಂದು ಹೊಸ ವಿಷಯ, ಹೊಸತನ ಇದ್ದೆ ಇರುತ್ತದೆ. ರಂಗಣ್ಣ ಅವರ ಮಾತಿನ ನೇರ ನುಡಿಗಳನ್ನು ಕೇಳುವುದೇ ಒಂದು ಹಿತ.

ಹಾಗೆ ಕೆಲವೊಂದು ಬಾರಿ ರಂಗಣ್ಣ ತುಂಬಾ ದೊಡ್ಡದಾದ ವಿಷಯವನ್ನು ಕಾಮಿಡಿ ಮೂಲಕ ಹೇಳುವ ಪರಿ ಆ ದಾಟಿ ಇಷ್ಟ ಆಗುತ್ತದೆ. ಹಾಗೆ ನೀವು ಮಾಡಿದ್ದು ತಪ್ಪು ಎಂದು ಹೇಳುವ ಉಚ್ಚಾರ ಅವರ ಸ್ಟೈಲ್ ನೆಟ್ಟಿಗರಿಗೆ ಕೂಡ ತುಂಬಾ ಖುಷಿ ನೀಡುತ್ತದೆ. ಹೌದು ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ರಂಗಣ್ಣ ಅವರ ಮಗಳ ಮದುವೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆಯಿತು.ನಿಖಿಲ್ ಎಂಬವರನ್ನು ರಂಗಣ್ಣನ ಮಗಳು ಮದುವೆಯಾಗಿದ್ದಾರೆ. ಹೌದು ರಂಗಣ್ಣ ಅವರ ಮಗಳ ಮದುವೆಯಲ್ಲಿ ತುಂಬಾ ಭಾವುಕರಾದ ಕ್ಷಣಗಳನ್ನು ಮತ್ತು ಕೆಲ ಫೋಟೋಗಳನ್ನು ನೀವು ನೋಡಿದ್ದೀರಾ.

ರಂಗಣ್ಣ ಅವರ ಮಗಳ ಮದುವೆ ಸಮಾರಂಭಕ್ಕೆ ಸಾಕಷ್ಟು ರಾಜಕೀಯ ಗಣ್ಯರು, ಹಾಗೆ ಸಿನಿಮಾರಂಗದ ಕಲಾವಿದರು ಬಂದಿದ್ದರು. ಹಾಗೆ ಜೋಡಿಗೆ ಶುಭ ಹಾರೈಸಿ ಆಶೀರ್ವದಿಸಿದರು. ಹೌದು ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ರಂಗಣ್ಣ ಅವರ ಮಗಳ ಮದುವೆಗೆ ಧಾವಿಸಿದ್ದರು. ಹೌದು ನಟ ಯಶ್ ಒಂದು ಸುಂದರವಾದ ಹೂವಿನ ಬೊಕ್ಕೆ ನೀಡಿ ಜೊತೆಗೆ ಉಡುಗೊರೆಯಾಗಿ ಬೆಲೆಬಾಳುವ ಬಂಗಾರದ ಒಂದು ಉಂಗುರವನ್ನು ಈ ಜೋಡಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಈ ಸಮಯದಲ್ಲಿ ರಂಗಣ್ಣ ಅವರು ಭಾವುಕರಾಗಿದ್ದರು ಎಂದು ಕೇಳಿಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ನೀವು ಕೂಡ ರಂಗಣ್ಣ ಅವರ ಮಗಳ ಮದುವೆಗೆ ಶುಭಕೋರಿ ಧನ್ಯವಾದಗಳು...