Satish vajra : ನಟ ಸತೀಶ್ ವಜ್ರ ಸಾಯುವ ಮುನ್ನ ಆಗಿದ್ದೇನು ? ಮಹತ್ವದ ತಿರುವು ಪಡೆದುಕೊಂಡ ಪ್ರಕರಣ
Updated:Sunday, June 19, 2022, 17:31[IST]

ಚಂದನ ವನದ ಯುವ ನಟನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದೆ. ಕೊಲೆಯಾಗುವ ಮುನ್ನ ಏನೆಲ್ಲ ಘಟನೆ ನಡೆದಿತ್ತು ? ಈಗ ಪ್ರಕರಣದಲ್ಲಿ ಏನು ತಿರುವು ದೊರೆಯಿತು ? ಇಲ್ಲಿದೆ ಎಲ್ಲಾ ಕುತೂಹಲಕಾರಿ ಮಾಹಿತಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಸತೀಶ್ ವಜ್ರ ಪತ್ನಿ ಸುಧಾ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದರು. ತನ್ನ ತಂಗಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲವೆಂದು ಬಾವ ಸತೀಶ್ ಮೇಲೆ ಅಂದಿನಿಂದಲೂ ಸುದರ್ಶನ್ ಕೋಪಗೊಂಡಿದ್ದ. ಇದಲ್ಲದೇ ಸುಧಾ ಸಾವನ್ನಪ್ಪಿದ ಬಳಿಕ ಮಗು ಯಾರ ಬಳಿ ಇರಬೇಕು ಎಂಬ ವಿಚಾರಕ್ಕೆ ಬಾವ-ಬಾಮೈದನ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ಶುಕ್ರವಾರ ರಾತ್ರಿ 10.30ರ ವೇಳೆ ತನ್ನ ಸಂಬಂಧಿ ನಾಗೇಂದ್ರನ ಜೊತೆ ಸತೀಶ್ ಮನೆಗೆ ಬಂದಿದ್ದ ಸುದರ್ಶನ್, ಸಹೋದರಿಯ ಸಾವಿನ ವಿಚಾರವಾಗಿ ಮತ್ತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಸುದರ್ಶನ್ ತನ್ನ ಬಾವನನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ಕೊಲೆ ಬಳಿಕ ಆರೋಪಿಗಳು ಸತೀಶ್ ಬೈಕ್ ಸಮೇತ ಎಸ್ಕೇಪ್ ಆಗಿದ್ದರು.
ಯುವ ನಟ ಸತೀಶ್ ವಜ್ರ ಕೊಲೆ ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಸತೀಶ್ ಬಾಮೈದ ಸುದರ್ಶನ್ ಹಾಗೂ ಆತನ ಸಹೋದರ ಸಂಬಂಧಿ ನಾಗೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ಸದ್ಯ ಇಬ್ಬರನ್ನೂ ವಿಚಾರಣೆ ನಡೆಸುತ್ತಿರುವ ಪೊಲೀಸರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.