ಈ ವೀಡಿಯೋದಲ್ಲಿ ನಟಿ ವಿಜಯ್‌ ಲಕ್ಷ್ಮೀ ಹಾಗೂ ನಟ ಸೀಮನ್‌ ಒಟ್ಟಿಗೆ ಹೇಗಿದ್ದಾರೆ ನೋಡಿ.. ಈ ವೀಡಿಯೋದಲ್ಲಿ ಸೀಮನ್‌ ಹೇಗಿದ್ದಾರೆ ಅಂತ ನೀವೇ ನೋಡ್ಬೇಕು..

Updated: Wednesday, October 20, 2021, 14:09 [IST]

ಈ ವೀಡಿಯೋದಲ್ಲಿ ನಟಿ ವಿಜಯ್‌ ಲಕ್ಷ್ಮೀ ಹಾಗೂ ನಟ ಸೀಮನ್‌ ಒಟ್ಟಿಗೆ ಹೇಗಿದ್ದಾರೆ ನೋಡಿ.. ಈ ವೀಡಿಯೋದಲ್ಲಿ ಸೀಮನ್‌ ಹೇಗಿದ್ದಾರೆ ಅಂತ ನೀವೇ ನೋಡ್ಬೇಕು..

ಇದೇ ವರ್ಷ ಜುಲೈ 26 ರಂದು ನಟಿ ವಿಜಯ್‌ ಲಕ್ಷ್ಮೀ ಅವರು ತಮಿಳು ನಟ ಸೀಮನ್‌ ಮೇಲೆ ಗಂಭಿರ ಆರೋಪವನ್ನು ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಈ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಅವರು ಆತ್ಮಹತ್ಯೆಗೆ ಪ್ರಯತ್ನಿಸಲು ಕಾರಣ ನಟ ಸೀಮನ್‌ ಅವರೇ.  ಯಾಕೆಂದರೆ ನಟ ಸೀಮನ್‌ ಅವರುವಿಜಯ್‌ ಲಕ್ಷ್ಮೀ ಅವರಿಗೆ ಮೋಸ ಮಾಡಿದ್ದರಂತೆ. ಹಾಗಾಗಿ ವಿಜಯ್‌ ಲಕ್ಷ್ಮೀ ಅವರು ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಈ ವಿಚಾರ ಏನೂ ಅಂತ ಸಂಪೂರ್ಣವಾಗಿ ನೋಡೋಣ ಬನ್ನಿ..

ವಿಜಯ್‌ ಲಕ್ಷ್ಮೀ ಅವರು ತಮಿಳು ನಟ ಸೀಮನ್‌ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಒಮ್ಮೆ ಸುದ್ದಿಯಾಗಿತ್ತು. ಬಳಿಕ ನಟ ಸೀಮನ್‌ ತಮಗೆ ಮೋಸ ಮಾಡಿದ್ದಾರೆ ಎಂದು ವೀಡಿಯೋವನ್ನೂ ಮಾಡಿದ್ದರು. ಅಲ್ಲದೇ, ಸೀಮನ್‌ ತಮಗೆ ತುಂಬಾ ಕಾಟ ಕೊಟ್ಟಿದ್ದಾನೆ. ಈಗಲೂ ಹಿಂಸೆ ಮಾಡಿ ಹಲವು ರೀತಿಯಲ್ಲಿ ಕಾಟ ಕೊಡುತ್ತಿದ್ದಾನೆ. ನನಗೆ ಅವನು ಮೋಸ ಮಾಡಿದ್ದಾನೆ. ಇನ್ನು ಅವನ ಕಾಟವನ್ನು ಸಹಿಸಲಾರೆ. ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರು. ಈ ವೇಳೆ ಹರಿನಾಡರ್‌ ಎಂಬುವರ ಹೆಸರನ್ನೂ ಸಹ ಉಲ್ಲೇಖಿಸಿದ್ದರು. ಮೂರು ಮಾತ್ರೆಗಳನ್ನು ತೆಗೆದುಕೊಂಡಿರುವುದಾಗಿ ವೀಡಿಯೋವನ್ನು ಮಾಡಿದ್ದರು. ಈ ವೀಡಿಯೋ ನೋಡಿನ ಮನೆಯವರು ವಿಜಯ್‌ ಲಕ್ಷ್ಮೀ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಬಿಪಿ ಲೋ ಆಗಿ ವಿಜಯ್‌ ಲಕ್ಷ್ಮೀ ಕೊನೆಗೆ ಚೇತರಿಸಿಕೊಂಡಿದ್ದರು. 

 

ಇದೀಗ ನಟ ಸೀಮನ್‌ ಅವರ ವೀಡಿಯೋ ಒಂದು ವೈರಲ್‌ ಆಗಿದೆ. ಅದರಲ್ಲಿ ನಟ ಸೀಮನ್‌ ಅವರು, ವಿಜಯ್‌ ಲಕ್ಷ್ಮೀ ಅವರಿಗೆ ಏಯ್‌, ಎನ್‌ ಪೊಂಡಾಟಿ ನಾನ್‌ ಕೆಟ್ಟವನ್‌ ಅಲ್ಲಡಿ ಎಂದು ಹೇಳಿದ್ದಾರೆ. ಇನ್ನೊಂದರಲ್ಲಿ ವಿಜಯ್‌ ಲಕ್ಷ್ಮೀ ಅವರು ಆಕ್ಷನ್‌ ಎನ್ನುತ್ತಾರೆ. ಆಗ ಸೀಮನ್‌ ಮಾತನಾಡುತ್ತಾರೆ. ಈ ವೀಡಿಯೋ ಸದ್ಯ ವೈರಲ್‌ ಆಗಿದೆ. ಒಟ್ನಲ್ಲಿ ನಟಿ ವಿಜಯ್‌ ಲಕ್ಷ್ಮೀ ಅವರು ಏಪ್ರಿಲ್‌ ತಿಂಗಳಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ನಿತ್ಯ ವೀಡಿಯೋ ಮಾಡುತ್ತಿದ್ದಾರೆ. ಒಂದೊಂದು ವೀಡಿಯೋದಲ್ಲೂ ಒಂದೊಂದು ಸಮಸ್ಯೆಗಳನ್ನು ತಂದೊಡ್ಡುತ್ತಿದ್ದಾರೆ. ಎಲ್ಲರನ್ನು ಬೈಯುತ್ತಾ, ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಇದರಿಂದ ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರೂ ಬೇಸರಗೊಂಡಿದ್ದಾರೆ.

VIDEO COURTESY : ZOOM TV KANNADA