ಮೈಸೂರು ಅರಮನೆಗೆ ಮಳೆ ತಂದ ಆಪತ್ತು: ಶಿಥಿಲಾವಸ್ಥೆಯಲ್ಲಿ ರಾಜವಂಶಸ್ಥರು ವಾಸವಿರೋ ಮನೆ: ಅರಮನೆ ಸ್ಥಿತಿ ಹೇಗಿದೆ ನೋಡಿ..

Updated: Thursday, November 25, 2021, 19:57 [IST]

ಮೈಸೂರು ಅರಮನೆಗೆ ಮಳೆ ತಂದ ಆಪತ್ತು: ಶಿಥಿಲಾವಸ್ಥೆಯಲ್ಲಿ ರಾಜವಂಶಸ್ಥರು ವಾಸವಿರೋ ಮನೆ: ಅರಮನೆ ಸ್ಥಿತಿ ಹೇಗಿದೆ ನೋಡಿ..

ಕಳೆದ ಒಂದು ತಿಂಗಳಿಂದ ವಾಯುಭಾರ ಕುಸಿತ ಹಿನ್ನೆಲೆ ನಿರಂತರವಾಗಿ ಸುರಿದ ಮಳೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಅವಾಂತರವನ್ನು ಸೃಷ್ಟಿ ಮಾಡಿದೆ. ಚೆನ್ನೈನಲ್ಲಿ ಮನೆಗಳು ನೀರಿನಲ್ಲಿ ಮುಳುಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.  ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ರಾಗಿ ತೆನೆಗಳೆಲ್ಲಾ ತುಂತುರು ಮಳೆಗೆ ನೆಲಕ್ಕೆ ಬಾಗಿ ಮೊಳಕೆ ಹೊಡೆದಿವೆ. ಹೂವಿನ ಗಿಡಗಳು ನೀರಿನ ಹೆಚ್ಚಳದಿಂದ ಕೊಳೆತಿವೆ. ಇತರೆ ತರಕಾರಿ, ಸೊಪ್ಪು, ಹಣ್ಣು ಎಲ್ಲವೂ ಮಳೆಗೆ ಕೊಳೆತು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿವೆ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. 

ಇದೆಲ್ಲವೂ ಎಲ್ಲರಿಗೂ ಗೊತ್ತಿರುವ ವಿಚಾರವೇ. ನಿತ್ಯ ನ್ಯೂಸ್ ಗಳಲ್ಲಿ ನೋಡಿ ತಿಳಿದುಕೊಂಡಿದ್ದೀರಾ. ಆದರೆ ನಾವೀಗ ಹೇಳೋಕೆ ಹೊರಟಿರುವ ವಿಚಾರವೇ ಬೇರೆ. ಈ ಮಳೆಯಿಂದ ಹಲವರ ಮನೆಗಳು ಹಾನಿಗೀಡಾಗಿವೆ. ಇದಕ್ಕೆ ಮೈಸೂರು ಅರಮನೆ ಏನು ಹೊರತಾಗಿಲ್ಲ. ಸೈಕ್ಲೋನ್ ನಿಂದ ಎಡಬಿಡದೆ ಸುರಿದ ಮಳೆಗೆ ಅರಮನೆಯೂ ಕೂಡ ಹಾನಿಗೊಳಗಾಗಿದೆ. ಅರಮನೆಯ ಯಾವ ಭಾಗದಲ್ಲಿ ಏನಾಗಿದೆ.? ಮಳೆಯಿಂದ ಅರಮನೆಯಲ್ಲಿ ಆಗಿರೋ ಅವಾಂತರವಾದರೂ ಏನು.? ಎಂಬುದನ್ನು ವಿವರವಾಗಿ ನೋಡೋಣ ಬನ್ನಿ..   

ನಿರಂತರ ಸೈಕ್ಲೋನ್ ಮಳೆ ಹಿನ್ನೆಲೆ ಮೈಸೂರು ಅರಮನೆಗೂ ಆಪತ್ತು ಎದುರಾಗಿದೆ. ಅರಮನೆಯ ಛಾವಣಿ ಕುಸಿಯುವ ಹಂತ ತಲುಪಿದೆ. ರಾಜವಂಶಸ್ಥರು ವಾಸವಿರುವ ಖಾಸಗಿ ಅರಮನೆ ಭಾಗಕ್ಕೆ ಅತಿ ಹೆಚ್ಚು ಹಾನಿಯಾಗಿದೆ. ನಿರಂತರ ಮಳೆಗೆ ಅರಮನೆಯ ಮೇಲ್ಛಾವಣಿಯ ಗಾರೆ ಚಕ್ಕೆ ಚಕ್ಕೆಯಾಗಿ ಉದುರುತ್ತಿದೆ. ಪಾಚಿ ಕಟ್ಟಿರುವ ಅರಮನೆಯ ಕೆಲ ಭಾಗಗಳಲ್ಲಿ ಬಿರುಕು ಕೂಡ ಕಾಣಿಸಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಅರಮನೆ ಭಾಗವೂ ಶಿಥಿಲಗೊಂಡಿದೆ. 

ಇದರ ರಿಪೇರಿ ಮಾಡಲು ಸರ್ಕಾರ, ರಾಜವಂಶಸ್ಥರ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕಾಣುತ್ತದೆ. ಹಲವು ವರ್ಷಗಳ ಹಿಂದೆಯೇ ಪಾಚಿ ಕಟ್ಟಿರುವ ಕಟ್ಟಡಗಳು ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆದರೆ ರಿಪೇರಿ ಮಾತ್ರ ಆಗಿಲ್ಲ. ಸದ್ಯಕ್ಕೆ ಆಯ್ದ ಭಾಗವನ್ನು ಪುನಶ್ಚೇತನಗೊಳಿಸಲು ಪ್ರಮೋದಾದೇವಿ ಒಡೆಯರ್ ಮುಂದಾಗಿದ್ದಾರೆ. ಒಟ್ನಲ್ಲಿ ಈ ಮಳೆಯಿಂದಾಗಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸು ಪರೀಸ್ಥಿತಿ ಬಂದು ಒದಗಿದೆ. ಸದ್ಯ ಕೊಂಚ ಬಿಡುವು ಕೊಟ್ಟಿರು ಮಳೆರಾಯ ಮತ್ತೆ ಯಾವಾಗ ಾರ್ಭಟಿಸಲು ಶುರು ಮಾಡುತ್ತಾನೋ ಕಾದು ನೋಡಬೇಕಿದೆ.