ಹೊಸ ಹೊಸ ದಾಖಲೆ ಬರೆಯುತ್ತಿದೆ ಜೇಮ್ಸ್: ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ

By Infoflick Correspondent

Updated:Thursday, March 17, 2022, 19:30[IST]

ಹೊಸ ಹೊಸ ದಾಖಲೆ ಬರೆಯುತ್ತಿದೆ ಜೇಮ್ಸ್: ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ

ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಎಲ್ಲಾ ಟಿಕೆಟ್ ಗಳು ಸೇಲ್ ಆಗಿ ದಾಖಲೆಯನ್ನು ಬರೆದಿತ್ತು. ನಂತರ ಕಾವೇರಿ ಥಿಯೇಟರ್ ನಲ್ಲಿ 5 ಸಾವಿರಕ್ಕೂ ಹೆಚ್ಚು ಟಿಕೆಟ್ ಗಳು ಸಲ್ ಆಗಿ ಕಮಾಯಿ ಮಾಡಿತ್ತು. ಇದೀಗ ಮತ್ತೊಂದಪ ದಾಖಲೆಯನ್ನು ಮಾಡಿದೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಇಂದು ಜೇಮ್ಸ್ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಲು ಥಿಯೇಟರ್ ಗಳಿಗೆ ಮುಗಿಬಿದ್ದಿದ್ದರು. ಎಲ್ಲಾ ಥಿಯೇಟರ್ ಗಳ ಎದುರು ಪುನೀತ್ ರಾಜಕುಮಾರ್ ಅವರ ದೊಡ್ಡ ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿ ಜೇಮ್ಸ್ ಜಾತ್ರೆಯಲ್ಲಿ ಆಚರಿಸಿದರು. 

ಅದಾಗಲೇ ಜೇಮ್ಸ್ ಚಿತ್ರ ಬಾಕ್ಸ್ ಆಫೀಸಿನಲ್ಲಿ 20 ಕೋಟಿಗೂ ಅಧಿಕ ಹಣ ಸಂಗ್ರಹಿಸಿ ದಾಖಲೆ ಬರೆದಿದೆ. ಜೇಮ್ಸ್ ಚಿತ್ರದ ಟಿವಿ ರೈಟ್ಸ್ ಕೂಡ ಸೇಲ್ ಆಗಿದೆ. ಕನ್ನಡ, ಮಳೆಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಜೇಮ್ಸ್ ಚಿತ್ರದ ಪ್ರಸಾರದ ಹಕ್ಕನ್ನು ಪಡೆದುಕೊಂಡಿವೆ. ಸರಿ ಸುಮಾರು 80 ಕೋಟಿಗೂ ಅಧಿಕ ಹಣವನ್ನು ಕೊಟ್ಟು ಎಲ್ಲಾ ಭಾಷೆಗಳ ಟಿವಿ ರೈಟ್ ಸೇಲ್ ಆಗಿದೆ ಎಂದು ಸುದ್ದಿಯಾಗುತ್ತದೆ. 

ಕನ್ನಡದಲ್ಲಿ ಸುವರ್ಣ ವಾಹಿನಿ 13.80 ಕೋಟಿಗೆ ಪ್ರಸಾರದ ಹಕ್ಕನ್ನು ಪಡೆದಿದೆ. ಇನ್ನು ಸೋನಿ ಡಿಜಿಟಲ್ 40 ಕೋಟಿ ರೂಪಾಯಿ ಕೊಟ್ಟು ಚಿತ್ರದ ಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ. ತೆಲುಗಿನ ಮಾ ಟಿವಿ 5.70 ಕೋಟಿ ಕೊಟ್ಟು ಚಿತ್ರ ಪ್ರಸಾರದ ರೈಟ್ಸ್ ಪಡೆದಿದೆ. ಹಿಂದಿಯ ಸೋನಿ ಟಿವಿ 2.70 ಕೋಟಿ ಹಣವನ್ನು ನೀಡಿದೆ. ಮಲಯಾಳಂ 1.2 ಕೋಟಿಗೆ ಖರೀದಿಸಿದೆ. ಹೀಗೆ ಸರಿಸುಮಾರು ಜೇಮ್ಸ್ ಚಿತ್ರ ನೂರು ಕೋಟಿ ಹಣ ಕಲೆಕ್ಲನ್ ಆಗಿದೆ ಎಂದು ಹೇಳಲಾಗುತ್ತಿದೆ. ಬಿಡುಗಡೆಯ ದಿನವೇ ಕ್ಲಬ್ ಗೆ 100 ಕೋಟಿ ಹಣ ಸೇರಿರುವುದು ನಿಜಕ್ಕೂ ಹೆಗ್ಗಳಿಕೆಯ ವಿಷಯ. ಜೊತೆಗೆ ದಾಖಲೆಯನ್ನು ಬರೆದಿದೆ ಎಂದು ವರ್ಣಿಸಲಾಗಿದೆ.