ನಟ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್ ? ಸ್ಪಷ್ಟನೆ ನೀಡಿದ ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್‌

By Infoflick Correspondent

Updated:Saturday, August 20, 2022, 11:08[IST]

ನಟ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್ ? ಸ್ಪಷ್ಟನೆ ನೀಡಿದ ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್‌

 ಡಾ.ವಿಷ್ಣುವರ್ಧನ್​​ ಅಳಿಯ ಅನಿರುದ್ಧ್​ ಕಿರಿಕ್​​​ ಮಾಡಿಕೊಂಡಿರುವ ಹಿನ್ನೆಲೆ ಅನಿರುದ್ಧ್​​​​​ ಎರಡು ವರ್ಷ ಬ್ಯಾನ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಜೊತೆ ಜೊತೆಯಲಿ ತಂಡದಲ್ಲಿ ಮನಸ್ತಾಪ ಕೇಳಿ ಬಂದಿದೆ . ನಿನ್ನೆ ಏಕಾಏಕಿ ಶೂಟಿಂಗ್ ನಿಂದ ಅನಿರುದ್ಧ್ ಹೊರ ನಡೆದಿದ್ದು ಇದರಿಂದ ಧಾರವಾಹಿ ತಂಡ ಅಸಮಾಧಾನ ಗೊಂಡಿದೆ. 

ಸ್ಕ್ರಿಪ್‌ ವಿಚಾರಕ್ಕೆ ನಿರ್ದೇಶಕ ಮಧು ಅವರಿಗೆ ಮೂರ್ಖ ಎಂದು ಕರೆದು, ನಿಂದಿಸಿದ್ದಾರೆ.ಧಾರವಾಹಿ ದೃಶ್ಯ ಬದಲಾವಣೆ ಮಾಡುವಂತೆ ಜಗಳವಾಡಿದ್ದಾರೆ. ಇದರಿಂದಾಗಿ ನಟ ಅನಿರುದ್ಧ ಧಾರವಾಹಿ ಸೆಟ್‌ನಿಂದ ಹೊರಗೆ ನಡೆದಿದ್ದಾರೆ. ಕಿರುತೆರೆ ನಿರ್ಮಾಪಕರ ಸಂಘಕ್ಕೆ ಜೊತೆ ಜೊತೆಯಲಿ ನಿರ್ದೇಶಕ ದೂರು ಕೊಟ್ಟಿದ್ದು, ಸೀರಿಯಲ್​​ ನಿರ್ಮಾಪಕರೂ ಆಗಿರುವ ಅರೂರ್ ಜಗದೀಶ್ ದೂರು ನೀಡಿದ್ದಾರೆ. ದೂರು ಹಿನ್ನೆಲೆಯಲ್ಲಿ ಸಭೆ ನಡೆಸಿ 2 ವರ್ಷ ಬ್ಯಾನ್​ ನಿರ್ಧಾರ ಕೈಗೊಳ್ಳಲಾಗಿದೆ. ಎಂಬ ಸುದ್ದಿ ಹೊರಬಿದ್ದಿದ್ದು ಈ ಕುರಿತು ಜೊತೆಜೊತೆಯಲಿ ಧಾರಾವಾಹಿಯ ನಿರ್ದೇಶರು ಹಾಗು ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್‌ ಮಾತನಾಡಿದ್ದಾರೆ.   


ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಜೊತೆ ಜೊತೆಯಲಿ ಧಾರವಾಹಿಯ ನಿರ್ದೇಶಕ ಹಾಗೂ ನಿರ್ಮಾಪಕರು ಆಗಿರುವ ಆರೂರು ಜಗದೀಶ್, 'ಜೊತೆ ಜೊತೆಯಲಿ ಧಾರಾವಾಹಿಗೆ ಕಥೆಯೇ ಹೀರೋ ಹಾಗೂ ಹಿರೋಯಿನ್. ಯಾರೇ ಇರಲಿ, ಇರದೇ ಇರಲಿ ಧಾರಾವಾಹಿ ನಡೆಯಲೇಬೇಕು. ಈ ಧಾರಾವಾಹಿ ನಂಬಿಕೊಂಡು ನನ್ನನ್ನೂ ಸೇರಿದಂತೆ ಹಲವರು ಇದ್ದಾರೆ. ಹಾಗಾಗಿ ಚಿತ್ರೀಕರಣ ಮುಂದುವರೆಸಲೇಬೇಕಿದೆ' ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಅನಿರುದ್ಧ ಅವರು ವಾಪಸ್ಸು ಬರದೇ ಇದ್ದರೂ, ಯಾರೇ ಬಂದರೂ ಶೂಟಿಂಗ್ ನಡೆಯಲಿದೆ ಎಂದಿದ್ದಾರೆ.

ಅನಿರುದ್ಧ್ ಅವರ ವರ್ತನೆಯನ್ನು ಪರಿಗಣಿಸಿ ಎರಡು ದಿನ ಚರ್ಚೆ ಮಾಡಿದ್ದೇವೆ. ಕಿರುತೆರೆಯ ಎಲ್ಲಾ ನಿರ್ಮಾಪಕರ ಒಕ್ಕೊರಲಿನ ನಿರ್ಧಾರದಂತೆ ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಯಾವುದೇ ಧಾರಾವಾಹಿ ಹಾಗೂ ರಿಯಾಲಿಟಿ ಶೋನಲ್ಲಿ ಹಾಕಿಕೊಳ್ಳುವಂತಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ನಟ ಅನಿರುದ್ಧನನ್ನು ಬ್ಯಾನ್‌ ಮಾಡಿಲ್ಲʼ 2 ವರ್ಷಗಳ ಕಾಲ ದೂರ ಇಟ್ಟಿದ್ದೇವೆ ಮಾಧ್ಯಮಗಳೊಂದಿಗೆ ಮಾತನಾಡಿ ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್‌ ಸ್ಪಷ್ಟನೆ ನೀಡಿದ್ದಾರೆ.