ಕೇಳಿಬರುತ್ತಿದೆ ರಾಜ್ ಬಿ ಶೆಟ್ಟಿ ಹಾಗು ರಮ್ಯಾ ಬಗ್ಗೆ ಗುಸು ಗುಸು- ಪಿಸು ಪಿಸು ಆದರೆ ಯಾವುದು ಸತ್ಯ

By Infoflick Correspondent

Updated:Saturday, August 13, 2022, 08:43[IST]

ಕೇಳಿಬರುತ್ತಿದೆ ರಾಜ್ ಬಿ ಶೆಟ್ಟಿ ಹಾಗು ರಮ್ಯಾ ಬಗ್ಗೆ ಗುಸು ಗುಸು- ಪಿಸು ಪಿಸು ಆದರೆ ಯಾವುದು ಸತ್ಯ

ಒಂದು ಮೊಟ್ಟೆಯ ಕಥೆ , ಗರುಡ ಗಮನ ವೃಷಧ ವಾಹನ ಸಿನಿಮಾಗಳ ಮೂಲಕ ನಟ ಹಾಗೂ ನಿರ್ದೇಶಕನಾಗಿ ಯಶಸ್ಸು ಕಂಡ ರಾಜ್ ಬಿ ಶೆಟ್ಟಿ ಅವರು ಇದೀಗ ಸ್ಯಾಂಡಲ್ ವುಡ್ ನ ಮೋಹಕ ತಾರೆಗೆ ಆಕ್ಷನ್ ಕಟ್ ಹೇಳಲಿದ್ಧಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡ್ತಿದೆ

ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶನದ ಸಿನಿಮಾದ ಮೂಲಕ ನಟಿ ರಮ್ಯಾ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ರಮ್ಯಾ ಸಿನಿಮಾಗಾಗಿ ಕಾಯ್ತಿರೋ ಅಭಿಮಾನಿಗಳಿಗೆ ಈ ಸುದ್ದಿ ಕೇಳೀ ಖುಷಿಯಾಗಿದ್ದು ರಮ್ಯಾರನ್ನ ಸ್ಕ್ರೀನ್ ಮೇಲೆ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಇತ್ತೀಚೆಗಷ್ಟೇ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಭೇಟಿಯಾಗಿದ್ದು, ಈ ವೇಳೆ ರಾಜ್ ಬಿ ಶೆಟ್ಟಿ ರಮ್ಯಾಗೆ ಕಥೆ ಹೇಳಿದ್ದಾರೆ.ಕಥೆ ಇಷ್ಟಪಟ್ಟಿರುವ ರಮ್ಯಾ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿ ರಮ್ಯಾ ಅಭಿಮಾನಿಗಳು ಥ್ರಿಲ್ ಆಗಿದ್ದು, ರಾಜ್.ಬಿ.ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ರಮ್ಯಾ ಅಭಿನಯಿಸುವುದರ ಜೊತೆ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ನಟಿಸಲು ರಮ್ಯಾ ಒಪ್ಪಿಗೆ ಸೂಚಿಸಿರುವುದು ನಿಜವೇ? ಸಿನಿಮಾ ನಿರ್ಮಿಸ್ತಾರಾ? ಇಲ್ಲಿದೆ ಉತ್ತರ.

ಕೇಳಿ ಬರುತ್ತಿರುವ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ರಾಜ್‌ ಬಿ. ಶೆಟ್ಟಿ "ನಾನು ರಮ್ಯಾ ಅವರಿಗೆ ಸಿನಿಮಾ ಮಾಡುತ್ತೀನಿ ಅನ್ನುವುದೆಲ್ಲಾ ಸುಳ್ಳು. ಯಾವುದೇ ಕಥೆಯನ್ನು ಹೇಳಿಲ್ಲ, ರಮ್ಯಾ ಅವರೊಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಈ ಸುದ್ದಿ ಹೇಗೆ ಹುಟ್ಟಿಕೊಳ್ತು ಅನ್ನುವುದೇ ಗೊತ್ತಾಗುತ್ತಿಲ್ಲ" ಎಂದಿದ್ದಾರೆ.