ಬಿಗ್ ಬಾಸ್ ಓಟಿಟಿ ಮನೆಯಲ್ಲಿರುವ ಆ ಮೂರ್ತಿಯ ಅರ್ಥವೇನು? ಈ ಕುರಿತು ವಾಸುಕಿ ಸುದೀಪ್ ಹೇಳಿದ್ದೇನು

By Infoflick Correspondent

Updated:Saturday, August 6, 2022, 10:25[IST]

ಬಿಗ್ ಬಾಸ್ ಓಟಿಟಿ ಮನೆಯಲ್ಲಿರುವ ಆ ಮೂರ್ತಿಯ ಅರ್ಥವೇನು? ಈ ಕುರಿತು ವಾಸುಕಿ ಸುದೀಪ್ ಹೇಳಿದ್ದೇನು

ಬಿಗ್ ಬಾಸ್​ ಒಟಿಟಿ' ಆರಂಭಕ್ಕೂ ಮೊದಲು ದೊಡ್ಮನೆ ಹೇಗಿದೆ ಎಂಬುದನ್ನು ತೋರಿಸಲಾಗಿದೆ. ಸುದೀಪ್  ಹಾಗೂ 'ಬಿಗ್ ಬಾಸ್' ಮಾಜಿ ಸ್ಪರ್ಧಿ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಮನೆ ಹೇಗಿದೆ ಎಂಬ ಝಲಕ್ ತೋರಿಸಲಾಗಿದೆ.

ಕಿಚ್ಚ ಸುದೀಪ್ ಹಾಗೂ ವಾಸುಕಿ ವೈಭವ್ ಅವರು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಇಡೀ ಮನೆಯ ಜಾಗ ಯಾವಾಗ ಯಾವ ರೀತಿಯಲ್ಲಿ ಬಳಕೆ ಆಗುತ್ತದೆ ಎಂಬುದನ್ನು ವಾಸುಕಿ ವೈಭವ್ ಅವರು ವಿವರಿಸಿದ್ದಾರೆ. ಈ ಮೂಲಕ ಸುದೀಪ್​ಗೆ ಅವರು ಸಾತ್ ನೀಡಿದ್ದಾರೆ. ಈ ಬಾರಿ ಮನೆ ಹೇಗಿದೆ ಎಂಬುದನ್ನು ತೋರಿಸುವ ಉದ್ದೇಶದಿಂದ ಇಬ್ಬರೂ 'ಬಿಗ್ ಬಾಸ್​' ಮನೆ ಒಳಗೆ ಬಂದಿದ್ದಾರೆ.

ಬಿಗ್ ಬಾಸ್' ಮನೆಯನ್ನು ರಿವೀಲ್ ಮಾಡುವ ಉದ್ದೇಶದಿಂದ ವೂಟ್ ಆಯಪ್​ನಲ್ಲಿ ಹೊಸ ವಿಡಿಯೋ ಹಂಚಿಕೊಳ್ಳಲಾಗಿದೆ. ಕಿಚ್ಚ ಸುದೀಪ್ ಹಾಗೂ ವಾಸುಕಿ ವೈಭವ್ ಅವರು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಇಡೀ ಮನೆಯ ಜಾಗ ಯಾವಾಗ ಯಾವ ರೀತಿಯಲ್ಲಿ ಬಳಕೆ ಆಗುತ್ತದೆ ಎಂಬುದನ್ನು ವಾಸುಕಿ ವೈಭವ್ ಅವರು ವಿವರಿಸಿದ್ದಾರೆ.


 'ಜಗತ್ತಿನಲ್ಲಿ ಅತಿ ಹೆಚ್ಚು ಯುದ್ಧಗಳು ಬಹುಶಃ ಇಲ್ಲಿಯೇ ನಡೆದಿರಬೇಕು' ಎಂದು ಮನೆಯ ಗಾರ್ಡನ್​ ಏರಿಯಾ ಬಗ್ಗೆ ವಾಸುಕಿ ತಮ್ಮದೇ ವಿವರಣೆ ನೀಡಿದ್ದಾರೆ. ಮನೆಯೊಳಗೆ ಒಂದು ಗೊಂಬೆಯ ಕಣ್ಣನ್ನು ಹಾಗೂ ಕುತ್ತಿಗೆಯನ್ನು 2 ಕೈಗಳು ಹಿಡಿರುವ ಮೂರ್ತಿ ಇದ್ದು ಇದು ತುಂಬಾ ವಿಶೇಷವಾಗಿದೆ.

ಈ ಬಾರಿ ದೊಡ್ಮನೆಯಲ್ಲಿ ಒಂದು ಮೂರ್ತಿಯನ್ನು ಇರಿಸಲಾಗಿದೆ. ಆ ಮೂರ್ತಿ ಒಂದು ಕೈಯಲ್ಲಿ ಕಣ್ಣನ್ನು ಮುಚ್ಚಿಕೊಂಡಿದೆ, ಮತ್ತೊಂದು ಕೈ ಕತ್ತಿನ ಮೇಲಿದೆ. ಇದನ್ನು ನೋಡಿದರೆ ಸುದೀಪ್​​ಗೆ ತಮ್ಮನ್ನೇ ನೋಡಿದಂತೆ ಭಾಸವಾಗುತ್ತಿದೆಯಂತೆ. 'ಇಲ್ಲಿ ನಡೆಯೋದು ನನ್ನ ಕಣ್ಣಿಗೆ ಕಾಣುತ್ತಿರುತ್ತದೆ. ಆದರೆ, ಏನು ಗೊತ್ತಿಲ್ಲದ ರೀತಿಯಲ್ಲಿ ನಾನು ಇರಬೇಕು. ಇನ್ನು, ಕುತ್ತಿಗೆಯ ಭಾಗದಲ್ಲಿ ಇರುವ ಕೈ ಆನ್​​ಲೈನ್​ಲ್ಲಿ ವೀಕ್ಷಿಸುತ್ತಿರುವ ಜನರು ಹಾಗೂ ಒಳಗಿರುವ ಸ್ಪರ್ಧಿಗಳದ್ದು. ಅವರು ನನ್ನ ಕುತ್ತಿಗೆಗೆ ಕೈ ಹಾಕಿಕೊಂಡಿರುತ್ತಾರೆ. ಈ ಮೂರ್ತಿಗೆ ಕೂದಲು ಮೀಸೆ ಇದ್ದಿದ್ದರೆ ನನ್ನ ರೀತಿಯೇ ಕಾಣುತ್ತಿತ್ತು. ತುಂಬಾ ಸಿಂಬಾಲಿಕ್ ಆಗಿದೆ' ಎಂದಿದ್ದಾರೆ ಸುದೀಪ್.