ಮಂಡ್ಯ ರವಿ ಅವರು ತಮ್ಮ ಸಾವನ್ನು ಸಾವೇ ತಂದುಕೊಂಡಿದ್ದು ಎಷ್ಟು ಸರಿ..?

By Infoflick Correspondent

Updated:Friday, September 16, 2022, 15:41[IST]

ಮಂಡ್ಯ ರವಿ ಅವರು ತಮ್ಮ ಸಾವನ್ನು ಸಾವೇ ತಂದುಕೊಂಡಿದ್ದು ಎಷ್ಟು ಸರಿ..?

ಮಂಡ್ಯ ರವಿ.. ಯಾರಿಗೆ ಗೊತ್ತಿಲ್ಲ ಹೇಳಿ ಕಳೆದ 2 ದಶಕದಿಂದ ಕಿರುತೆರೆಯಲ್ಲಿದ್ದವರು. ಒಳ್ಳೊಳ್ಳೆಯ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದರು. ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಮಂಡ್ಯ ರವಿ ಅವರು ಮೊನ್ನೆ ನಿಧನರಾದರು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಅವರ ನಿಧನದಿಂದ ಬಣ್ಣದ ಲೋಕಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಒಂದೊಳ್ಳೆಯ ಕಲಾವಿದನನ್ನು ಕಳೆದುಕೊಂಡಿದ್ದಕ್ಕೆ ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ.

ಮಲ್ಟಿಪಲ್ ಆರ್ಗನ್ಸ್ ಡ್ಯಾಮೇಜ್ ಆದ ಕಾರಣ ಇಹಲೋಕ ತ್ಯಜಿಸಿದ್ದಾರೆ. ಹಲವಾರು ಸೀರಿಯಲ್ ಹಾಗು ಸಿನಿಮಾ ಮೂಲಕ ಮನೆ ಮಾತಾಗಿದ್ದ ರವಿ ಕಣ್ಮರೆಯಾಗಿದ್ದಾರೆ. ರವಿ ಅಗಲಿಕೆಗೆ ಕಲಾವಿದರು ಕಂಬನಿ ಮಿಡಿದಿದ್ದಾರೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಮಂಡ್ಯ ರವಿ ನಿಧನರಾಗಿದ್ದರು. ಈ ಸಾವಿಗೆ ಸ್ವತಃ ಅವರೇ ಕಾರಣ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

ಅದೇನೆಮದರೆ ಮಂಡ್ಯ ರವಿ ಅವರು ನಿತ್ಯ ಕುಡಿಯುತ್ತಿದ್ದರಂತೆ. ಅವರು ಕುಡಿಯುವುದನ್ನು ನೋಡಿದರೆ ಎಲ್ಲರಿಗೂ ಭಯವಾಗುತ್ತಿತ್ತಂತೆ. ಕುಡಿಯಬೇಡಿ ಎಂದು ಹೇಳಿದರೂ ಕೇಳದ ಅವರು, ನಿತ್ಯ ಕುಡಿಯುತ್ತಲೇ ಇದ್ದರು. ಹೀಗಾಗಿ ಅವರ ಲಿವರ್‌ ಡ್ಯಾಮೇಜ್‌ ಆಗಿತ್ತಂತೆ. ರವಿ ಅವರಿಗೆ ಜಾಂಡೀಸ್‌ ಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯ್ತಂತೆ. ವೈದ್ಯರು ಬೈದರೂ ಕೇಳದ ರವಿ ಅವರು ತಮ್ಮ ಪ್ರಾಣವನ್ನು ತಾವೇ ಕಳೆದುಕೊಳ್ಳುವಂತೆ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.

VIDEO CREDIT : THIRD EYE