ರಘು ದೀಕ್ಷಿತ್‌ ಹಾಗೂ ಮಯೂರಿ ಡಿವೋರ್ಸ್‌ ಪಡೆಯಲು ಇದೇ ಕಾರಣ

By Infoflick Correspondent

Updated:Tuesday, June 7, 2022, 09:53[IST]

ರಘು ದೀಕ್ಷಿತ್‌ ಹಾಗೂ ಮಯೂರಿ ಡಿವೋರ್ಸ್‌ ಪಡೆಯಲು ಇದೇ ಕಾರಣ

ಖ್ಯಾತ ಗಾಯಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ಪ್ರೀತಿಸಿ, ಇಷ್ಟಪಟ್ಟು ಮದುವೆಯಾದ ಜೋಡಿ. ಮಯೂರಿ ಅವರು ಸದಾ ಕಾರ್ಯಕ್ರಮ ಒಂದರಲ್ಲಿ ರಘು ದೀಕ್ಷಿತ್‌ ಅವರ ಗುಣಗಾನ ಮಾಡುತ್ತಿದ್ದರು. ಇಬ್ಬರೂ ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟುಕೊಟ್ಟವರಲ್ಲ. ಆದರೆ ಅದೇನಾಯ್ತೋ ಇದ್ದಕ್ಕಿದ್ದಂತೆ ಈ ಜೋಡಿ ಬೇರೆಯಾದರು. ಕಾನೂನಿ ಮೂಲಕ ವಿಚ್ಛೇಧನವನ್ನೂ ಪಡೆದರು. ರಘು ದೀಕ್ಷಿತ್‌ ಅವರು ಡಿಪ್ರೆಷನ್‌‌ಗೆ ಕೂಡ ಹೋಗಿದ್ದಾರು. ಬನ್ನಿ ಹಾಗಿದ್ದರೆ, ಈ ಜೋಡಿ ಡಿವೋರ್ಸ್‌ ಪಡೆಯಲು ಕಾರಣವೇನು.? ಇವರ ಬದುಕಲ್ಲಿ ಬೀಸಿದ ಬಿರುಗಾಳಿ ಯಾವುದು ಎಂದು ತಿಳಿಯೋಣ ಬನ್ನಿ..

ಕಳೆದ ನಾಲ್ಕು ವರ್ಷದಿಂದ ರಘು ದೀಕ್ಷಿತ್ ಮತ್ತು ಮಯೂರಿ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಇದಕ್ಕೆ ಕಾರಣ ಆ ಮೀಟೂ ಪ್ರಕರಣ. ಹೌದು ವಿಚ್ಛೇಧನಕ್ಕೂ ಕೆಲ ತಿಂಗಳ ಹಿಂದೆ ಮೀಟೂ ಆರೋಪ ರಘು ದೀಕ್ಷಿತ್‌ ಅವರ ಮೇಲೆ ಕೇಳಿ ಬಂದಿತ್ತು. ಆಗಲೇ ದಂಪತಿಯ ಮಧ್ಯೆ ಮನಸ್ತಾಪ ಶುರುವಾಯಿತು. ನಂತರ ಇಬ್ಬರೂ ಬೇರೆಯಾದರು.  

ಗಾಯಕಿ ಚಿನ್ಮಯಿ ಶ್ರೀಪಾದ ಎಂಬುವರು ರಘು ದೀಕ್ಷಿತ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಚಿನ್ಮಯಿ ಅವರು ರಘು ದೀಕ್ಷಿತ್‌ ಅವರ ಬಳಿ ಆದ ಕೆಟ್ಟ ಅನುಭವದ ಬಗ್ಗೆ ತಮ್ಮ ಸ್ನೇಹಿತರಿಗೆ 2 ಪತ್ರಗಳ ಮೂಲಕ ಟ್ವೀಟ್‌ ಮಾಡಿದ್ದರು. ಆಗ ಈ ಟ್ವೀಟ್‌‌ಗೆ ಪ್ರತಿಕ್ರಿಯಿಸಿದ ರಘು ದೀಕ್ಷಿತ್, ಚಿನ್ಮಯಿ ಶ್ರೀಪಾದ್ ಕಾರ್ಯವನ್ನು ಶ್ಲಾಘಿಸಿದ್ದರು. ಅಲ್ಲದೇ, ಚಿನ್ಮಯಿ ಅವರು ಹೇಳಿದ್ದರಲ್ಲಿ ಕೆಲ ಭಾಗ ನಿಜವಿದ್ದರೂ, ಎಲ್ಲವೂ ನಿಜವಲ್ಲ ಎಂದಿದ್ದರು. 

ಅಂದು ನಾನು ಆಕೆಯನ್ನ ತಬ್ಬಿಕೊಂಡು ಕಿಸ್ ಮಾಡಲು ಯತ್ನಿಸಿದ್ದು ನಿಜವೇ ಆದರೆ, ಅದಕ್ಕೆ ಈಗಾಗಲೇ ನಾನು ಕ್ಷಮೆ ಕೇಳಿದ್ದೇನೆ. ಈಗಲೂ ಕೂಡ ಕ್ಷಮೆ ಕೇಳುತ್ತೇನೆ ಎಂದಿದ್ದರು. ಈ ಆರೋಪ ಬರುತ್ತಿದ್ದಂತೆಯೇ ಪತ್ನಿ ಮಯೂರಿ ಅವರು ಕಿರುಕಳಕ್ಕೆ ಒಳಗಾದವರ ಪರ ಟ್ವೀಟ್‌ ಮಾಡಿದ್ದರು. ಇದಾದ ಬಳಿಕ ರಘು ದೀಕ್ಷಿತ್‌ ಹಾಗೂ ಮಯೂರಿ ಮಧ್ಯೆ ಮನಸ್ತಾಪ ಉಂಟಾಗಿ, ಬೇರೆಯಾದರು.