ಅಂತೆ ಕಂತೆಗಳ ಸುದ್ದಿಗೆ ಗುದ್ದು ಕೊಟ್ಟ ರಾಕಿಭಾಯ್ ; ಸಂಭಾವನೆ ಬಗ್ಗೆ ಯಶ್ ಉತ್ತರವೇನು ?

By Infoflick Correspondent

Updated:Tuesday, April 12, 2022, 16:39[IST]

ಅಂತೆ ಕಂತೆಗಳ ಸುದ್ದಿಗೆ ಗುದ್ದು ಕೊಟ್ಟ ರಾಕಿಭಾಯ್ ; ಸಂಭಾವನೆ ಬಗ್ಗೆ ಯಶ್ ಉತ್ತರವೇನು ?

ಇದೀಗ 'ಕೆಜಿಎಫ್ 2' ಸಿನಿಮಾ ನಟರ ಸಂಭಾವನೆ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಲೇ ಇರುತ್ತೆ.  ಯಶ್ ಈ ಸಿನಿಮಾಗಾಗಿ ಎಷ್ಟು ಸಂಭಾವನೆ ಪಡೆದಿರಬಹುದು? ಮೂರು ವರ್ಷದ ಶ್ರಮಕ್ಕಾಗಿ ಯಶ್ ಪಡೆದಿರುವ ಸಂಭಾವನೆ ಎಷ್ಟು ಎಂಬ ಪ್ರಶ್ನೆ ಜನರಿಗೆ ಆಗಾಗ ಕಾಡುತ್ತಲೇ ಇದೆ.  

ಯಶ್ ಹಾಲಿವುಡ್ ಬಗೆಯ ಸಿನಿಮಾಗಳನ್ನು ಮಾಡುತ್ತಿದ್ದು, ಹಾಲಿವುಡ್ ಗೆ ಯಶ್ ಜಿಗಿಯಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಈ ಕುರಿತಾಗಿಯೂ ಯಶ್ ಉತ್ತರಿಸಿದ್ದಾರೆ‌. ಯಶ್ ಉತ್ತರ ಏನು ಇಲ್ಲಿದೆ ನೋಡಿ. 

ಚಿತ್ರದ ಬಗ್ಗೆ ದೇಶಾದ್ಯಂತ ನಿರೀಕ್ಷೆ ಇರುವ ಕಾರಣಕ್ಕೆ ಚಿತ್ರತಂಡ ಅಬ್ಬರದ ಪ್ರಚಾರ ನಡೆದಿದೆ. ಮಾಧ್ಯಮದವರು ನೀವು ಹಾಲಿವುಡ್ ಗೆ ಹೋಗುತ್ತಿರಾ ಎಂಬ ಗಾಳಿ ಸುದ್ದಿ ಎಂದು ಕೇಳಿದಾಗ ಯಶ್ ಹೌದಾ ! ನನಗೇ ಗೊತ್ತಿಲ್ಲವಲಾ ?! ಎಂದಿದ್ದಾರೆ. 

ಕೆಜಿಎಫ್ 2' ಚಿತ್ರಕ್ಕೆ ನಟ ಯಶ್ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂದು ಹುಡುಕಿದರೆ ಲೆಕ್ಕ ಸಿಗಲ್ಲ. ಯಾಕೆಂದರೆ ಅವರು ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ ಎಂದು ಬಲ್ಲಮೂಲಗಳ ಮಾಹಿತಿ ದೊರೆತಿದೆ. ಸಿನಿಮಾದಲ್ಲಿ ಅವರು ಸಂಭಾವನೆ ಬದಲಿಗೆ ಶೇರ್ ಪಡೆದುಕೊಳ್ಳುತ್ತಾರೆ. ಚಿತ್ರದಲ್ಲಿ ಎಷ್ಟೇ ಲಾಭ ಬಂದರು ಇಂತಿಷ್ಟು ಪರ್ಸೆಂಟ್ ಶೇರ್ ಅವರಿಗೆ ಹೋಗ ಬೇಕು ಎಂಬ ಒಪ್ಪಂದವಾಗಿದೆ ನಟ ಯಶ್ ಚಿತ್ರಕ್ಕೂ ಮೊದಲೇ ಇಷ್ಟು ಅಂತ ಸಂಭಾವನೆ ಪಡೆಯುವುದಿಲ್ಲ. ಬದಲಿಗೆ ಅವರು ಚಿತ್ರದಲ್ಲಿ ಶೇರ್ ಪಡೆದುಕೊಳ್ಳುತ್ತಾರೆ. ಎಂಬ ಸುದ್ದಿ ಹರಿದಾಡುತ್ತಿದೆ. 

ಸಂಭಾವನೆ ಬಗ್ಗೆ ಹಾಗಂತೆ ಹೀಗಂತೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಯಶ್ ನಗುತ್ತಲೇ ಹಾಗಂತೆ ಹಿಗಂತೆ ಬಿಡಿ ನಿಮಗೆ ಈಗ ಏನು ಉತ್ತರ ಬೇಕು ಎಂದು ನಗುತ್ತಲೇ ಉತ್ತರವನ್ನು ಹಾರಿಸಿದ್ದಾರೆ.