ದಕ್ಷಿಣಭಾರತದ ಖ್ಯಾತ ನಟಿಯರ ಸಂಭಾವನೆ ಎಷ್ಟು ಗೊತ್ತೆ ? ಇವರೇ ಹೆಚ್ಚು ಸಂಭಾವನೆ ಪಡೆಯುವ ನಟಿಯರು

By Infoflick Correspondent

Updated:Friday, June 17, 2022, 18:29[IST]

ದಕ್ಷಿಣಭಾರತದ ಖ್ಯಾತ ನಟಿಯರ ಸಂಭಾವನೆ ಎಷ್ಟು ಗೊತ್ತೆ ? ಇವರೇ ಹೆಚ್ಚು ಸಂಭಾವನೆ ಪಡೆಯುವ ನಟಿಯರು

ಸಿನಿರಂಗದಲ್ಲಿ ಸ್ಟಾರ್ ನಟರ ಸಂಭಾವನೆ, ಆ ಸಿನಿಮಾದ ಬಜೆಟ್, ಲಾಭ ಎಲ್ಲವೂ ಚರ್ಚೆಯಾಗುತ್ತೆ. ಆದರೆ ನಟಿಯರ ಸಂಭಾವನೆ ಕುರಿತು ಸಿನಿ ಅಭಿಮಾನಿಗಳು ಅಷ್ಟಾಗಿ ಗಮನ ಹರಿಸಲ್ಲ. ಬೇಡಿಕೆ ಇದ್ದವರಿಗೆ ಮಾತ್ರ ಇಂಡಸ್ಟ್ರಿಯಲ್ಲಿ ಒಳ್ಳೆಯ ಸಂಭಾವನೆ ಕೊಡಲಾಗುತ್ತೆ 

ದಕ್ಷಿಣ ಭಾರತದ ಹಲವು ಹೀರೋಯಿನ್‌ಗಳು ಬಾಲಿವುಡ್‌ನ ನಟಿಯರಿಗೆ ಏನೂ ಕಡಿಮೆಯಿಲ್ಲ ಎಂಬ ಥರಾ ಡಿಮ್ಯಾಂಡ್ ಹೊಂದಿದ್ದಾರೆ. ಅವರ ಸಂಭಾವನೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ.

ಬಲ್ಲ ಮೂಲಗಳ ಪ್ರಕಾರ, ದಕ್ಷಿಣ ಭಾರತದಲ್ಲಿ ನಯನತಾರಾ ನಂಬರ್​ ಒನ್​. ಲೇಡಿ ಸೂಪರ್​ ಸ್ಟಾರ್​ ಎಂದು ಕರೆಸಿಕೊಳ್ಳುವ ಅವರು ಈಗ ಪ್ರತಿ ಸಿನಿಮಾಗೆ ಬರೋಬ್ಬರಿ 10 ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಟಿ ಪೂಜಾ ಹೆಗ್ಡೆ ಅವರು ಬ್ಯಾಕ್​ ಟು ಬ್ಯಾಕ್​ ಸ್ಟಾರ್​ ಸಿನಿಮಾಗಳಿಗೆ ನಾಯಕಿ ಆಗುತ್ತಿದ್ದಾರೆ. ಅವರಿಗೆ ಸಖತ್​ ಬೇಡಿಕೆ ಇದೆ. ಅವರು ಈಗ 5 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಾರೆ ಎಂದು ವರದಿ ಆಗಿದೆ

ನಟಿ ಸಮಂತಾ 3ರಿಂದ 5 ಕೋಟಿ ರೂಪಾಯಿ ಕೇಳುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಖ್ಯಾತ ನಟಿ ಅನುಷ್ಕಾ ಶೆಟ್ಟಿ ಪ್ರತಿ ಚಿತ್ರಕ್ಕೆ 4 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡುತ್ತಾರೆ. 

ರಶ್ಮಿಕಾ ಮಂದಣ್ಣ ಅವರು ಬಹುಭಾಷೆಯಲ್ಲಿ ಮಿಂಚುತ್ತಿದ್ದು 3 ಕೋಟಿ ರೂಪಾಯಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ವರದಿ ಆಗಿದೆ. ಸಮಂತ ಅಕ್ಕಿನೇನಿ ಅವರು ಒಂದು ಚಲನಚಿತ್ರಕ್ಕೆ 2 ಕೋಟಿ ರೂ. ಪಡೆಯುತ್ತಾರೆ. ಶ್ರುತಿ ಹಾಸನ್‌ ತುಂಬಾ ಟ್ಯಾಲೆಂಟೆಡ್ ನಟಿ. ಇವರು ಚಿತ್ರವೊಂದಕ್ಕೆ 2.5 ಕೋಟಿ ಚಾರ್ಜ್ ಮಾಡುತ್ತಾರೆ.