ಆಗಿನ ಕಾಲದ ಚಾಕಲೇಟ್ ಹೀರೋ ರಾಮ್ ಕುಮಾರ್ ಸಿನಿಮಾರಂಗ ಬಿಡಲು ಕಾರಣ ಯಾರು ಗೊತ್ತಾ..?

By Priya

Updated:Saturday, November 27, 2021, 06:21[IST]

ಆಗಿನ ಕಾಲದ ಚಾಕಲೇಟ್ ಹೀರೋ ರಾಮ್ ಕುಮಾರ್ ಸಿನಿಮಾರಂಗ ಬಿಡಲು ಕಾರಣ ಯಾರು ಗೊತ್ತಾ..?

ಡಾ.ರಾಜ್ ಕುಮಾರ್ ಅವರ ಮಗಳು ಪೂರ್ಣಿಮಾ ಅವರನ್ನು ನಟ ರಾಮ್ ಕುಮಾರ್ ಮದುವೆಯಾಗಿದ್ದಾರೆ. ನಟ ರಾಮ್ ಕುಮಾರ್ ಅವರ ತಂದೆಯು ಕೂಡ ಸಿನಿಮಾರಂಗದಲ್ಲಿ ಇದ್ದವರು. ರಾಮ್ ಕುಮಾರ್ ಅವರ ತಂದೆಯ ಹೆಸರು ಶೃಂಗಾರ್. ಶೃಂಗಾರ್ ಅವರು ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ತಂದೆಯೇ ನಿರ್ಮಾಪಕರಾಗಿದ್ದರಿಂದ ರಾಮ್ ಕುಮಾರ್ ಅವರಿಗೆ ಸಿನಿಮಾ ರಂಗಕ್ಕೆ ಬರಲು ಸುಲಭವಾಯಿತು.

ರಾಮ್ ಕುಮಾರ್ ಸಿನಿಮಾರಂಗದಲ್ಲಿ ಇದ್ದಾಗ ಚಾಕ್ಲೇಟ್ ಬಾಯ್ ಎಂದೆ ಫೇಮಸ್ ಆಗಿದ್ದರು. ನಟಿ ಶೃತಿ ಹಾಗೂ ನಟ ರಾಮ್ ಕುಮಾರ್ ಅವರ ಜೋಡಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ನಟ ರಾಮ್ ಕುಮಾರ್ ಅವರು ಹದಿಹರೆಯದ ಹುಡುಗಿಯರ ನಿದ್ದೆಯನ್ನು ಕೆಡಿಸಿದ್ದರು. ಡಾ. ರಾಜ್ ಕುಮಾರ್ ಅವರ ಮಗಳು ಪೂರ್ಣಿಮಾಳನ್ನು ನಟ ರಾಮ್ ಕುಮಾರ್ ಮದುವೆಯಾದರು. ಸದ್ಯ ರಾಮ್ ಕುಮಾರ್ ಅವರಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿದೆ. ಆವೇಶ ಸಿನಿಮಾದ ಮೂಲಕ ರಾಮ್ ಕುಮಾರ್ ಅವರು ಸಿನಿ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ತವರಿನ ತೊಟ್ಟಿಲು, ಕಾವ್ಯಾ ಎಂಬ ಸಿನಿಮಾಗಳಲ್ಲಿ ನಟಿಸಿ ಹಿಟ್ಟಾದರು ಸಿನಿಮಾರಂಗದಲ್ಲಿ ಆ ಕಾಲಕ್ಕೆ ಒಳ್ಳೆ ಸಕ್ಸಸ್ ಕಂಡ ನಟ ರಾಮ್ ಕುಮಾರ್ ಬಹಳ ಹಿಟ್ ಸಿನಿಮಾಗಳನ್ನು ನೀಡಿದರು.  

ಆದರೆ 2010ರಿಂದ ರಾಮ್ ಕುಮಾರ್ ನಟಿಸಿದ ಚಿತ್ರಗಳು ಅಷ್ಟೇನೂ ಸಕ್ಸಸ್ ಕಾಣಲಿಲ್ಲ. 2013ರಲ್ಲಿ ಶ್ರೀ ಆದಿಚುಂಚನಗಿರಿ ಎಂಬ ಸಿನಿಮಾದಲ್ಲಿ ನಟ ರಾಮ್ ಕುಮಾರ್ ನಟಿಸುತ್ತಾರೆ. ಇದು ಅವರ ನಟನೆಯ ಕೊನೆಯ ಚಿತ್ರ. ಈ ಚಿತ್ರವು ಕೂಡ ಸಕ್ಸಸ್ ಕಾಣುವುದಿಲ್ಲ. ಆಗ ಬೇಸರಗೊಂಡ ನಟ ರಾಮ್ ಕುಮಾರ್ ಅವರಿಗೆ ಪತ್ನಿ ಪೂರ್ಣಿಮಾ ಹೇಳುತ್ತಾರೆ. ಸಿನಿಮಾ ರಂಗವೇ ಬೇಡ ಸಾಕು ಬಿಟ್ಟುಬಿಡಿ ಎಂದು. ಪತ್ನಿ ಪೂರ್ಣಿಮಾ ಹೇಳಿದಂತೆ ಸಿನಿಮಾ ಇಂಡಸ್ಟ್ರಿಯನ್ನು ನಟ ರಾಮ್ ಕುಮಾರ್ ಬಿಟ್ಟು ಬಿಡುತ್ತಾರೆ. ಸದ್ಯ ಇವರ ಮಗಳು ಧನ್ಯರಾಮ್ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿಗಷ್ಟೇ ನಿನ್ನ ಸನಿಹಕೆ ಎಂಬ ಹಿಟ್ ಚಿತ್ರದಲ್ಲಿ ಧನ್ಯ ರಾಮ್ ಅವರು ನಟಿಸಿದ್ದಾರೆ. ನಿನ್ನ ಸನಿಹಕೆ ಸಿನಿಮಾದ ಮೂಲಕ ರಾಮ್ ಕುಮಾರ್ ರವರ ಮಗಳು ಧನ್ಯರಾಮ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.