ಮಗಳ ಹುಟ್ಟುಹಬ್ಬದಂದು ಮನೆಗೆ ಬಂದ ಕುಮಾರಸ್ವಾಮಿಗೆ ತಕ್ಕ ಶಾಸ್ತಿ ಮಾಡಿದ ನಟಿ ರಾಧಿಕಾ..?

Updated: Wednesday, June 9, 2021, 15:16 [IST]

ಇಂದು ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಬರ್ತ್ ಡೇ. ಹಾಗಾಗಿ ಮಗಳ ಹುಟ್ಟು ಹಬ್ಬಕ್ಕೆ ವಿಷ್ ಮಾಡಲೆಂದು ಮಾಜಿ ಸಿಎಂ ಕುಮಾರಸ್ವಾಮಿ ರಾಧಿಕಾ ಮನೆಗೆ ಹೋಗಿದ್ದರು. ಆಗ ರಾಧಿಕಾ ನಡೆದುಕೊಂಡ ರೀತಿ ಕೇಳಿದ್ರೆ ನಿಮಗೆ ಶಾಕ್ ಆಗೋದು ಗ್ಯಾರೆಂಟಿ. 

ಕಳೆದ ಜನವರಿ ತಿಂಗಳಿನಲ್ಲಿ ಸ್ವಾಮಿ ಯುವರಾಜ್ ಪ್ರಕರಣ ಸಂಬಂಧ ರಾಧಿಕಾ ಗೆ ಸಿಸಿಬಿ ನೊಟೀಸ್ ಜಾರಿ ಮಾಡಿತ್ತು. ಈ ಬಗ್ಗೆ ಮಾಧ್ಯಮದವರು ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿತು. ಇದಕ್ಕೆ ಪ್ರತಿಕ್ರಯಿಸಿದ ಕುಮಾರಸ್ವಾಮಿ ಅವರು, ಯಾರದು, ನನಗೆ ಗೊತ್ತಿಲ್ಲದವರ ಬಗ್ಗೆ ಏನನ್ನೂ ಕೇಳಬೇಡಿ ಎಂದು ಉತ್ತರಿಸಿದ್ದರು. ಇದು ಎಲ್ಲೆಡೆ ವೈರಲ್ ಆಗಿತ್ತು. ಇದರ ಬೇಸರವಿದ್ದ ರಾಧಿಕಾ ಇಂದು ಕುಮಾರಸ್ವಾಮಿ ಅವರನ್ನು ಮನೆಗೆ ಸೇರಿಸಲಿಲ್ಲವಂತೆ.    

ಇನ್ನು ಕೊರೊನಾ ಸಂಕಷ್ಟದಲ್ಲಿ ನಟಿ ರಾಧಿಕಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರಂತೆ. ರಾಧಿಕಾ ಕುಮಾರಸ್ವಾಮಿ ಬಡವರಿಗೆ ಸಹಾಯ ಮಾಡಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಧಿಕಾ ಕುಮಾರಸ್ವಾಮಿ ಸುಮಾರು 1200 ಮನೆಗಳಿಗೆ ದಿನಸಿ ಹಂಚಿದ್ದಾರೆ. ಬೆಂಗಳೂರು ನಗರದ ಕೆಂಗೇರಿ, ಮಾಗಡಿ ರೋಡ್, ನಾಯಂಡಹಳ್ಳಿ ಮುಂತಾದ ಏರಿಯಾಗಳಲ್ಲಿ ದಿನಸಿ ಹಂಚಿದ್ದಾರೆ.