Pavithra Lokesh :ಕಣ್ಣೀರಿಟ್ಟ ರಮ್ಯಾ ಹೇಳಿದ್ದು ಏನು ನೋಡಿ..! ನರೇಶ್ ಮತ್ತು ಪವಿತ್ರಾ ಹೋಟೆಲ್ ನಲ್ಲಿ ಸಿಕ್ಕಿಕೊಂಡಾಗ..!

By Infoflick Correspondent

Updated:Tuesday, July 5, 2022, 12:38[IST]

Pavithra Lokesh :ಕಣ್ಣೀರಿಟ್ಟ ರಮ್ಯಾ ಹೇಳಿದ್ದು ಏನು ನೋಡಿ..! ನರೇಶ್ ಮತ್ತು ಪವಿತ್ರಾ ಹೋಟೆಲ್ ನಲ್ಲಿ ಸಿಕ್ಕಿಕೊಂಡಾಗ..!

ಕನ್ನಡ ಚಿತ್ರರಂಗದ ಹಿರಿಯ ನಟ ಮೈಸೂರ್ ಲೋಕೇಶ್ ಅವರ ಪುತ್ರಿ ಪವಿತ್ರ ಲೋಕೇಶ್ ಅವರು ಇದೀಗ ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಅಭಿನಯದ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಹಾಗೆ ಸ್ಟಾರ್ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚದೇ ಇದ್ದರೂ ಕೂಡ ಪೋಷಕ ಪಾತ್ರಗಳಲ್ಲಿ ಸಹಾಯಕ ಪಾತ್ರಗಳಲ್ಲಿ ಅಭಿನಯ ಮಾಡಿ ಪವಿತ್ರ ಲೋಕೇಶ್ ಅವರು ತುಂಬಾನೇ ಗಮನ ಸೆಳೆದಂತವರು. ಈಗ ತೆಲುಗು ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ಕೆಲವು ವಿಚಾರಗಳು ನಿಮಗೂ ಕೂಡ ಗೊತ್ತಾಗಿವೆ ಅಂದುಕೊಂಡಿದ್ದೇನೆ. ದಿನೇ ದಿನೇ ಏನೆಲ್ಲ ನಡೆಯುತ್ತಿದೆ ಎಂಬುದಾಗಿ ನಿಮಗೂ ಮಾಹಿತಿ ಇದೆ..     

ಇದೆಲ್ಲದರ ನಡುವೆ ಮೊನ್ನೆ ಮೈಸೂರಿನ ಹೋಟೆಲ್ ರೂಮ್ ಒಂದರಲ್ಲಿ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್ ಅವರು ತಂಗಿದ್ದರು. ಆ ಮಾಹಿತಿ ಬರುತ್ತಿದ್ದಂತೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಯವರು ರಾತ್ರಿಯೇ ಒಂದು ಗಂಟೆಗೆ ಬೆಂಗಳೂರು ಬಿಟ್ಟು ಮೈಸೂರಿಗೆ ಬಂದಿದ್ದಾರೆ. ಅಲ್ಲೇ ನಿಂತು ಅವರಿಗೆ ತೊಂದರೆ ಕೊಟ್ಟರೆ ರಾತ್ರಿ ಸಮಯ ಬೇರೆ ಚೆನ್ನಾಗಿ ಕಾಣಿಸುವುದಿಲ್ಲ ಎಂದು ಬೆಳಕು ಹರಿಯುವವರೆಗೂ ಕಾದು ರೂಮು ತಟ್ಟಿದ್ದು ತದನಂತರ ಅವರಿಬ್ಬರೂ ಹೊರಗಡೆ ಬಂದ ಬಳಿಕ ಕಣ್ಣೀರು ಸುರಿಸಿದ್ದಾರೆ ರಮ್ಯಾ. ಹೌದು ರಮ್ಯಾ ಅವರು ಹೇಳಿದ ಹಾಗೆ ನೀವೇ ನೋಡಿದಿರಲ್ಲ ಸರ್ ಅವರು ಕೂಗಿಕೊಂಡು ಹೋಗಿದ್ದೆ ನನ್ನ ಜಯ, ನನಗೆ ಡಿವೊರ್ಸ್ ನೋಟಿಸ್ ಬಂದಿದೆ. ಅದರ ವಿರುದ್ಧ ಹೋರಾಡಬೇಕು. ನನಗೆ ಮಗ ಇದ್ದಾನೆ, ಅವನನ್ನು ಸಂತೋಷವಾಗಿಡಬೇಕು ಅವನನ್ನು ಕಣ್ಣೀರು ಹಾಕಿಸಬೇಡ ಎಂದು ಇವನಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಅವನು ಡೇ ಅಂಡ್ ನೈಟ್ ಅಳೋದು ನನ್ನ ಕಣ್ಣಿನಲ್ಲಿ ನೋಡೋಕೆ ಆಗುತ್ತಿಲ್ಲ.

ನನ್ನ ಮದುವೆಯಾಗಿದ್ದೆ ರಾಜಕೀಯ ಉದ್ದೇಶದಿಂದ ಇವನು. ಅದು ನಂತರದ ದಿನಗಳಲ್ಲಿ ವರ್ಕ್ ಔಟ್ ಆಗಲಿಲ್ಲ, ಅಂದು ನೀನು ರಾಜಲಕ್ಷ್ಮಿ ಈಗ ದರಿದ್ರ ಲಕ್ಷ್ಮಿಯಾಗಿದ್ದೀಯಾ ಎಂದು ನನ್ನನ್ನು ಹೆಚ್ಚು ಬಾರಿ ನಿಂದಿಸಿದ್ದಾನೆ.ಮದುವೆಯಾದ ಒಂದು ವರ್ಷ ಮಾತ್ರ ಚೆನ್ನಾಗಿದ್ದ, ಹತ್ತು ವರ್ಷದಿಂದ ಇದೆ ಆಗಿದೆ. ನನ್ನ ಕ್ಯಾರೆಕ್ಟರ್ ಬಗ್ಗೆ ನನ್ನ ಶೀಲದ ಬಗ್ಗೆ ಅವನು ಈ ರೀತಿ ಮಾತನಾಡಿದಾಗ ನಾನು ಎದ್ದು ಕೂಡಲೇ ಬೇಕು, ನನಗೆ ಅನ್ಯಾಯ ಆಗಿದೆ ನಾನೇ ನ್ಯಾಯ ಕೇಳಬೇಕು. ಪವಿತ್ರ ಲೋಕೇಶ್ ಒಂದು ಬಾರಿ ನನ್ನ ಮನೆಗೆ ಬಂದಿದ್ದರು. ಆಗ ನಾನು ಸಾಮಾನ್ಯವಾಗಿ ಯಾವುದೇ ಹೆಣ್ಣು ಬಂದರೂ ಸೀರೆ ಕೊಟ್ಟು ಕುಂಕುಮ ಇಟ್ಟು ಕಳಿಸುತ್ತಿದ್ದೆ. ಅಂದು ಸೀರೆಗಳು ಸ್ಟಾಕ್ ಇರಲಿಲ್ಲ, ಅದನ್ನು ಕೊಡದೆ ಇದ್ದಿದ್ದೆ ನಿಜಕ್ಕೂ ಒಳ್ಳೆಯದಾಯಿತು.

ಯಾಕೆಂದರೆ ಇಂದು ಅವಳು ಏನು ಎಂಬುದಾಗಿ ನೋಡಿದೆ. ಫ್ರೆಂಡ್ಸ್ ಎಂದು ಹೇಳಿಕೊಂಡು ಒಂದು ರೂಮಿನ ಒಳಗೆ ಅವರಿಬ್ಬರಿದ್ದಾರೆ. ನಾನೇನು ಹೇಳಬೇಕು ಸರ್ ಇವರನ್ನು ಸುಮ್ಮನೆ ಬಿಡುವುದಿಲ್ಲ, ನನಗೆ ನ್ಯಾಯ ಸಿಗುವವರೆಗೂ ಹೊರಾಡುತ್ತೇನೆ ಎಂದು ಕಣ್ಣೀರು ಸುರಿಸಿದ್ದಾರೆ ರಮ್ಯಾ ರಘುಪತಿ ಅವರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು....