ಸ್ವಂತ ಆಸ್ತಿಯನ್ನು ಮಾರಾಟ ಮಾಡಿ ವಿನೋದ್ ರಾಜ್ ಮಾಡಿರುವ ಕೆಲಸವೇನು ಗೊತ್ತಾ..?

By Infoflick Correspondent

Updated:Sunday, May 8, 2022, 09:59[IST]

ಸ್ವಂತ ಆಸ್ತಿಯನ್ನು ಮಾರಾಟ ಮಾಡಿ ವಿನೋದ್ ರಾಜ್ ಮಾಡಿರುವ ಕೆಲಸವೇನು ಗೊತ್ತಾ..?

ಅಮ್ಮನನ್ನು ಮಗುವಿನಂತೆ ನೋಡಿಕೊಳ್ಳುವ ನಟ ವಿನೋದ್ ರಾಜ್ ಮಾಡಿರುವ ಕೆಲಸದ ಬಗ್ಗೆ ತಿಳಿದರೆ ನೀವು ನಿಜಕ್ಕೂ ಬೇಸರ ಮಾಡಿಕೊಳ್ಳುತ್ತೀರಾ. ಹಿರಿಡ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರು ತಾಯಿಯಂತೆಯೇ ದಾನ ಧರ್ಮ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ವಿನೋದ್ ರಾಜ್ ಅವರು ತಮ್ಮ ತಾಯಿ ಜೊತೆಗೆ ವಾಸವಿದ್ದು, ಇಂದಿಗೂ ಮದುವೆನೇ ಆಗಿಲ್ಲ. ಈ ಹಿಂದೆ ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ಕೇಳಿದ್ದಕ್ಕೆ, ನನ್ನ ತಾಯಿಯಿಂದ ದೂರಾಗಲು ನಾನು ಬಯಸೊಲ್ಲ, ಅವಳಿಗಾಗಿ ನನ್ನ ಬದುಕು ಮುಡಿಪು ಎಂದಿದ್ದರು. ಸದಾ ಅವರ ತಾಯಿ ಜೊತೆ ಇರುವ ವಿನೋದ್ ರಾಜ್, ತಮ್ಮ ತಾಯಿ ಜೊತೆಗೆ ಅರಾಮವಾಗಿ ಜೀವನ ನಡೆಸುತ್ತಿರುವುದಾಗಿ ಹೇಳುತ್ತಾರೆ.

ಅಮ್ಮನಿಗೆ ವಯಸ್ಸಾಗಿದೆ. ನಾನು ಮಗುವಾಗಿದ್ದಾಗ ನನ್ನನ್ನು ಕಾರಿನಲ್ಲಿ ಮಲಗಿಸಿ ನಟಿಸಿ ಬರುತ್ತಿದ್ದಳು. ಈಗ ಆಕೆಯನ್ನು, ಆಕೆಯ ಆಸೆಯಂತೆ ನೋಡಿಕೊಳ್ಳುವುದು ಬಿಟ್ಟು ನನಗೆ ಬೇರೇನೂ ಕೆಲಸವಿಲ್ಲ ಎಂದು ಹೇಳುವ ವಿನೋದ್ ರಾಜ್, ಈಗ ಹಳ್ಳಿ ಜನರ ಸಹಾಯಕ್ಕಾಗಿ ಮುಂದೆ ಬಂದಿದ್ದಾರೆ. ನೆಲಮಂಗಲದಲ್ಲಿ ಲೀಲಾವತಿ ಹಾಗೂ ವಿನೋದ್ ರಾಜ್ ವಾಸವಿದ್ದಾರೆ. ಸೋಲದೇವನಹಳ್ಳಿಯಲ್ಲಿ ಈ ಹಿಂದೆ ಲೀಲಾವತಿ ಅವರು ಚಿಕ್ಕದೊಂದು ಆಸ್ಪತ್ರೆಯನ್ನು ನಿರ್ಮಿಸಿ ಸುತ್ತಳ್ಳಿಞದಸಯ ಜನಕ್ಕೆ ಸಹಾಯ ಮಾಡಿದ್ದರು. ಇದೇ ದಾರಿಯಲ್ಲೇ ವಿನೋದ್ ರಾಜ್ ಕೂಡ ನಡೆಯುತ್ತಿದ್ದಾರೆ.

ತಮಿಳುನಾಡಿನದಲ್ಲಿ ವಿನೋದ್ ರಾಜ್ ಅವರು ತಮ್ಮ ಆಸ್ತಿಯನ್ನು ಮಾರಾಟ ಮಾಡಿ, ಈಗ ನೆಲಮಂಗಲದ ಬಳಿ ದೊಡ್ಡ ಪ್ರಾರ್ಥಮಿಕ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಕಳೆದೆರಡು ತಿಂಗಳ ಹಿಂದಷ್ಟೇ ಇದರ ಭೂಮಿ ಪೂಜೆ ನೆರವೇಸಿದ್ದು, ಐವತ್ತು ಲಕ್ಷ ಹಣದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇನ್ನು ನಟಿ ಲೀಲಾವತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಭೂಮಿ ಪೂಜೆಗೆ ಅವರನ್ನು ಕರೆದುಕೊಮಡು ಬರಲು ಆಗಲಿಲ್ಲ ಎಂದು ಹೇಳಲಾಗಿದೆ. ನೋಡಿ, ವಿನೋದ್ ರಾಜ್ ಹಾಗೂ ಅವರ ತಾಯಿ ಜನಸೇವೆಯೇ ಜನಾರ್ಧನನ ಸೇವೆ ಅಂತ ನಂಬಿ ಬದುಕು ನಡೆಸುತ್ತಿದ್ದಾರೆ.