ಅಪ್ಪುವಿನ ಮುದ್ದಿನ ಪತ್ನಿಯ ಹುಟ್ಟುಹಬ್ಬಕ್ಕೆ ಶಿವಣ್ಣ ಮಾಡಿದ ಕಾರ್ಯವೇನು ಗೊತ್ತೆ ? ಇಲ್ಲಿದೆ ನೋಡಿ

By Infoflick Correspondent

Updated:Wednesday, March 16, 2022, 10:16[IST]

ಅಪ್ಪುವಿನ ಮುದ್ದಿನ ಪತ್ನಿಯ ಹುಟ್ಟುಹಬ್ಬಕ್ಕೆ ಶಿವಣ್ಣ ಮಾಡಿದ ಕಾರ್ಯವೇನು ಗೊತ್ತೆ ? ಇಲ್ಲಿದೆ ನೋಡಿ

ಅಶ್ವಿನಿಯವರ ಹುಟ್ಟುಹಬ್ಬದ ದಿನದಿಂದ ಇಂದಿನವರೆಗೆ ಅಶ್ವಿನಿ ಮತ್ತು ಪುನೀತ್ ಇಬ್ಬರು ಸೇರಿ ಕಳೆದ ವರ್ಷ ಆಚರಿಸಿದ ಸಂತಸದ ಕ್ಷಣದ ವಿಡಿಯೋ ಗಳು ಎಲ್ಲೆಡೆ ವೈರಲ್ ಆಗುತ್ತಿದೆ‌. ಆದರೆ ಈ ವರ್ಷ ಅಪ್ಪು ನಮ್ಮೊಡನೆ ಇಲ್ಲ. ಅಶ್ವಿನಿ ಒಂಟಿಯಾಗಿ ಎಲ್ಲವನ್ನೂ ಎದುರಿಸುತ್ತಿದ್ದಾರೆ. ಆದರೆ ಅಪ್ಪು ಇಲ್ಲದ ಅಶ್ವಿನಿ ಒಬ್ಬಂಟಿಯಲ್ಲ. ಅವರಿಗೆ ಗೀತಕ್ಕ ಮತ್ತು ಶಿವಣ್ಣ ಜೊತೆಗಿದ್ದಾರೆ ಎಂಬುದನ್ನು ಸಾಬೀತು ಪಡೆಸಿದ್ದಾರೆ.

ಅಣ್ಣನಾಗಿ ನಿತ್ತು ಶಿವಣ್ಣ ಪುನೀತ್ ಮತ್ತು ಅಶ್ವಿನಿ ಮದುವೆ ಮಾಡಿಸಿದ್ದರು. ಇಬ್ಬರ ಪ್ರೀತಿಯ ವಿಷಯ ಮನೆಯಲ್ಲಿ ಮೊದಲು ಅಪ್ಪು ಇವರಿಗೇ ಹೇಳಿದ್ದರು. ತಮ್ಮನಿಲ್ಲದ ನೋವಿನಲ್ಲೂ ಅಶ್ವಿನಿಗೆ ಯಾರಿಲ್ಲ ಎನಿಸಬಾರದೆಂದು ಅಶ್ವಿನಿ ದೊಡ್ಮನೆ ಕುಟುಂಬದ ಮುದ್ದಿನ ಸೊಸೆ ಸದಾ ನಗುನಗುತಾ ಇರುವಂತೆ ನೋಡಿಕೊಳ್ಳಬೇಕೆಂದು ಶಿವಣ್ಣ ಗೀತಕ್ಕ ಏನು ಮಾಡಿದಾರೆ ನೀವೆ ನೋಡಿ 

ಪುನೀತ್ ಇದ್ದಾಗ ಪತ್ನಿ ಅಶ್ವಿನಿ ಅವರ ಹುಟ್ಟುಹಬ್ಬವನ್ನು ಬಹಳ ಅರ್ಥ ಪೂರ್ಣವಾಗಿ ಆಚರಣೆ ಮಾಡುತಿದ್ದರು. ಪ್ರತಿವರ್ಷ ಕೂಡ ಅಶ್ವಿನಿ ಅವರ ಹುಟ್ಟುಹಬ್ಬಕ್ಕೆ ಅಪ್ಪು ಅವರು ಅಶ್ವಿನಿ ಅವರನ್ನು ಒಂದು ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ವೃದ್ಧರಿಗೆ ಊಟ, ಸಿಹಿ ತಿಂಡಿ, ಬಟ್ಟೆಗಳನ್ನು ಹಂಚಿಸುತಿದ್ದರು. ಆದರೆ ಈಗ ಅಪ್ಪು ಅವರು ನಮ್ಮ ಜೊತೆಯಲ್ಲಿ ಇಲ್ಲ! ಈ ಸಮಯದಲ್ಲಿ ಶಿವಣ್ಣ ಮತ್ತು ಗೀತಕ್ಕ ಅಶ್ವಿನಿ ಹುಟ್ಟುಹಬ್ಬಕ್ಕೆ  ಏನೆಲ್ಲಾ ಮಾಡಿದ್ದಾರೆ ಗೊತ್ತಾ?  

ಅಶ್ವಿನಿ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಶಿವಣ್ಣ ಹಾಗು ಪತ್ನಿ ಗೀತಕ್ಕ ಅಶ್ವಿನಿ ಅವರ ಮನೆಗೆ ಭೇಟಿ ಕೊಟ್ಟು, ಅವರಿಗೆ ಗೀತಾ ಅವರು ಮನೆಯಲ್ಲೇ ತಯಾರಿಸಿದ ವಿಶೇಷವಾದ ಸಿಹಿತಿಂಡಿಯನ್ನು ಕೊಟ್ಟು, ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ.ಅಶ್ವಿನಿ ಅವರನ್ನು ಒಂದು ಅನಾಥಾಶ್ರಮಕ್ಕೆ ಕರೆದುಕೊಂಡು ಹೋಗಿ ಅಪ್ಪು ಅವರ ಹೆಸರಿನಲ್ಲಿ ಸಾಕಷ್ಟು ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ. ಅಲ್ಲಿರುವ ಮಕ್ಕಳಿಗೆ ಊಟ ಹಾಗು ಬಟ್ಟೆಗಳನ್ನು ಕೊಟ್ಟು ಅಶ್ವಿನಿ ಅವರ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ. 

ಶಿವಣ್ಣ ಅವರು ಅಶ್ವಿನಿ ಅವರಿಗೆ ಹುಟ್ಟುಹಬ್ಬಕ್ಕೆ ಅಪ್ಪು ಹಾಗು ಅಶ್ವಿನಿ ಅವರ ಒಂದು ಅಪರೂಪದ ಫೋಟೋ ಫ್ರೆಮನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿದ ಅಶ್ವಿನಿ ಅವರು ಅಪ್ಪು ಅವರನ್ನು ನೆನೆದು ಬಹಳ ಭಾವುಕರಾಗಿದ್ದಾರೆ. 
ಹುಟ್ಟು ಹಬ್ಬದ ದಿನ ಅಶ್ವಿನಿ ಅವರು ಶಿವಣ್ಣ ದಂಪತಿಗಳ ಜೊತೆ ಅಪ್ಪು ಅವರ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲಿ ಅಪ್ಪು ಅವರ ಫೋಟೋ ಮುಂದೆ ನಿಂತು  ಅಶ್ವಿನಿ ಅವರು ಪೂಜೆ ಸಲ್ಲಿಸಿ ನಂತರ ಶಿವಣ್ಣ ದಂಪತಿಗಳ ಜೊತೆ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.