ಅಪ್ಪು ಬಗ್ಗೆ ಕಣ್ಣೀರಿಡುತ್ತಲೇ ಮಾತಾಡಿದ ವಿನೋದ್ ರಾಜ್..! ನನ್ನ ಕಂದನಿಗೆ ಆಗ ಏನಾಗಿರಬೇಡ;

Updated: Thursday, November 25, 2021, 11:58 [IST]

ಅಪ್ಪು ಬಗ್ಗೆ ಕಣ್ಣೀರಿಡುತ್ತಲೇ ಮಾತಾಡಿದ ವಿನೋದ್ ರಾಜ್..! ನನ್ನ ಕಂದನಿಗೆ ಆಗ ಏನಾಗಿರಬೇಡ;

ಹೌದು ಬಂಧುಗಳೇ ನಮ್ಮ ನಿಮ್ಮೆಲ್ಲರ ಪ್ರೀತಿಯ ನೆಚ್ಚಿನ ಅಪ್ಪು ಅವರು ಈಗ ಕೇವಲ ನಮ್ಮ ಜೊತೆಗೆ ನೆನಪಾಗಿ ಉಳಿದಿದ್ದಾರೆ. ಅವರು ಬದುಕಿದ ಆದರ್ಶದ ಬದುಕು, ಎಲ್ಲರಿಗೂ ಹೆಚ್ಚು ಮಾದರಿಯಾಗುತ್ತದೆ. ಸಮಾಜಮುಖಿ ಕೆಲಸಗಳು ನಮ್ಮ ಪುನೀತ್ ಅವರು ಇದ್ದಿದ್ದರೆ ಇನ್ನು ಎಷ್ಟು ದಿನದವರೆಗೆ ನಡೆಯುತ್ತಿದ್ದವೋ ಹಾಗೆ ಇನ್ನೆಷ್ಟು ಒಳ್ಳೆಯ ಕೆಲಸಗಳು ಅವರ ಕೈಯಿಂದ ಆಗುತ್ತಿದ್ದವೋ ದೇವರೇ ಬಲ್ಲ. ಆ ದೇವರಿಗೂ ಅಸೂಯೆ ಬಂತು ಅಂತ ಕಾಣಿಸುತ್ತೆ, ಪುನೀತ್ ಅವರನ್ನು ಬೇಗ ನಮ್ಮಿಂ ದ ದೂರ ಮಾಡಿಬಿಟ್ಟ. ಹೌದು ಎಲ್ಲರೂ ಕೂಡ ಪುನೀತ್ ಅವರಿಗೆ ಸಂತಾಪ ಸೂಚಿಸಿದ್ದಾರೆ. ಪುನೀತ್ ಅಗಲಿಕೆಯಿಂದ ಯಾರು ಕೂಡ ಇನ್ನೂ ಹೊರಗಡೆ ಬಂದಿಲ್ಲ.   

ಇದೀಗ ನಟ ಪುನೀತ್ ಅವರ ಬಗ್ಗೆ ಲೀಲಾವತಿ ಮತ್ತು ವಿನೋದ್ ರಾಜ್ ಅವರು ಮಾತನಾಡಿದ್ದಾರೆ. 2 ನಕ್ಷತ್ರ ಸಿನಿಮಾದಲ್ಲಿ ನನ್ನ ಮಗನಾಗಿ ಪಾತ್ರ ಮಾಡಿದ್ದ, ನನ್ನ ಬಳಿ ಬಂದು ನೀವು ಎಷ್ಟು ಅತ್ಯದ್ಭುತ ಅಭಿನಯ ಮಾಡುತ್ತೀರಿ ಎಂದು ತುಂಬಾ ಚೆನ್ನಾಗಿ ಮಾತನಾಡ್ತಿದ್ದ, ಆದರೆ ಇದೀಗ ಆತನಿಲ್ಲ, ಪುನೀತ ಶ್ರೇಷ್ಠ ವ್ಯಕ್ತಿ, ಒಳ್ಳೆಯ ಹೃದಯವಂತ ಆತನನ್ನು ದೇವರು ಇಷ್ಟು ಬೇಗನೇ ಕರೆದುಕೊಂಡು ಹೋಗಬಾರದಿತ್ತು. ವಿಧಿ ಎಷ್ಟರಮಟ್ಟಿಗೆ ಪ್ರಬಲವಾಗಿದೆ ಎಂದು ಎಲ್ಲರಿಗೂ ತೋರಿಸಲು ಇಂತಹ ದೊಡ್ಡ ಚಾಲೆಂಜ್ ಮಾಡಬಾರದಿತ್ತು ಎಂದು ಹೇಳಿ ಲೀಲಾವತಿ ಅಮ್ಮ ತುಂಬಾ ನೋವಾಗುತ್ತಿದೆ ಎಂದು ಕಣ್ಣೀರು ಹಾಕಿದರು.

ಜೊತೆಗೆ ವಿನೋದ್ ರಾಜ್ ಅವರು ಪುನೀತ್ ಅವರ ಬಗ್ಗೆ ಮಾತನಾಡಿ, ಆತ ನನ್ನ ಕಂದ, ಅಣ್ಣಾವ್ರು ಕಸ್ತೂರಿ ನಿವಾಸ ಸಿನಿಮಾದಲ್ಲಿ ಹೇಗೆ ದಾನ ರೂಪದಲ್ಲಿ ಸಹಾಯ ಮಾಡಿ ಬರಿ ಕೈಯಲ್ಲಿ ಆಗುತ್ತಾರೋ ಪ್ರೀತಿ ಗಳಿಸಿ, ಅದೇ ರೀತಿ ಪುನೀತ್ ಸಹ ಸಮಾಜದ ಕೆಲಸಗಳನ್ನು ಮಾಡಿ ಎಲ್ಲಾ ಮಾಡಿ ಜನರಿಗೆ ಮಾದರಿಯಾದ. ಆದ್ರೆ ಈ ರೀತಿ ಕಣ್ಣೀರಲ್ಲೇ ಕೈ ತೊಳೆಯುವ ಹಾಗೆ ದೂರ ಆಗಿಬಿಟ್ಟ. ನಗುನಗುತ್ತಲೇ ತಾನ ದೂರವಾಗಿ ಎಲ್ಲರಿಗೂ ಕಣ್ಣೀರು ಕೊಟ್ಟುಬಿಟ್ಟ. ಹೌದು ಪುನೀತ್ ಎದೆ ನೋವು ಆಗಿತ್ತು ಎಂದರೆ, ಆತನಿಗೆ ಆ ಸಮಯದಲ್ಲಿ ಎಷ್ಟು ನೋವು ಆಗಿರಬಾರದು, ತಾನು ಬದುಕುತ್ತಿನೋ ಇಲ್ಲವೋ ಎಂದು ಆ ಸಮಯದಲ್ಲಿ ಅಪ್ಪುಗೆ ಹೇಗೆ ಆಗಿರಬಾರದು.

ದೇವರು ತುಂಬಾ ಕ್ರೂರಿ ತುಂಬಾ ಮೋಸ ಮಾಡಿದ  ಎಂದು ಕಣ್ಣೀರು ಹಾಕಿ, ನನ್ನಿಂದ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದು ವಿನೋದ್ ರಾಜ್ ಅವರು ನೋವ ಹಂಚಿಕೊಂಡರು. ಇನ್ನು ಕೆಲ ವಿಷಯಗಳನ್ನು ಲೀಲಾವತಿ ಹಾಗೂ ವಿನೋದ್ ರಾಜ್ ಹಂಚಿಕೊಂಡಿದ್ದು. ಈ ವಿಡಿಯೋದಲ್ಲಿ ನೀವು ಆ ಪೂರ್ತಿ ಮಾಹಿತಿಯನ್ನು ನೋಡಬಹುದು ಧನ್ಯವಾದಗಳು..