ಕನ್ನಡ ಬಿಗ್ ಬಾಸ್ ಸೀಸನ್ 9 ಯಾವಾಗಿನಿಂದ ಪ್ರಾರಂಭ ?

By Infoflick Correspondent

Updated:Wednesday, June 29, 2022, 12:32[IST]

ಕನ್ನಡ ಬಿಗ್ ಬಾಸ್ ಸೀಸನ್ 9 ಯಾವಾಗಿನಿಂದ ಪ್ರಾರಂಭ ?

ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋಗಳಲ್ಲಿ ‘ಬಿಗ್‌ ಬಾಸ್‌’ ಕೂಡ ಒಂದು. ಪ್ರತಿಯೊಬ್ಬರೂ ಈ ಶೋಗಾಗಿ ಕಾತರದಿಂದ ಕಾಯ್ತಿದ್ದಾರೆ. ಕಳೆದ ಸೀಸನ್‌ ಜೂನ್‌ ತಿಂಗಳಲ್ಲಿ ಮುಗಿದಿತ್ತು. ‘ಮಜಾ ಭಾರತ’ದ ಮಂಜು ಪಾವಗಡ ವಿನ್ನರ್‌ ಆಗಿ ಹೊರಹೊಮ್ಮಿದ್ರು. ರೇಸರ್‌ ಅರವಿಂದ್‌ ಫಸ್ಟ್‌ ರನ್ನರ್‌ಅಪ್‌ ಸ್ಥಾನ ಗಿಟ್ಟಿಸಿಕೊಂಡ್ರೆ, ದಿವ್ಯಾ ಉರುಡುಗ ಸೆಕೆಂಡ್‌ ರನ್ನರ್‌ಅಪ್‌ ಆಗಿ ಮಿಂಚಿದ್ರು.

ಬಿಗ್ ಬಾಸ್‌ ಶೋ ಶುರುವಾಗ್ತಿದೆ ಅಂದ ಕೂಡಲೇ ಮನಸ್ಸಿಗೆ ಬರುವ ಮೊದಲ ಪ್ರಶ್ನೆ ಮನೆಯೊಳಗೆ ಯಾರ್ಯಾರು ಇರ್ತಾರೆ ಅನ್ನೋದು. ಕನ್ನಡದಲ್ಲಿ ಈಗಾಗಲೇ 8 ಸೀಸನ್​ಗಳು ಪೂರ್ಣಗೊಂಡಿವೆ. ಜತೆಗೆ 'ಕನ್ನಡ ಬಿಗ್ ಬಾಸ್' ಹೊಸ ಸೀಸನ್ ಬಗ್ಗೆಯೂ ಚರ್ಚೆ ಆಗುತ್ತಿದೆ.  

ಇಷ್ಟೊತ್ತಿಗಾಗಲೇ 'ಬಿಗ್ ಬಾಸ್ ಕನ್ನಡ ಸೀಸನ್ 9' ಶುರು ಆಗಬೇಕಿತ್ತು. ಆದರೆ ಸದ್ಯಕ್ಕೆ ಈ ಶೋಗೆ ತಡೆಯಾಗುತ್ತಿರುವುದು ಸುದೀಪ್ ಡೇಟ್ಸ್. ಅವರ ಬಹು ನಿರೀಕ್ಷೆಯ ಚಿತ್ರ ವಿಕ್ರಾಂತ್ ರೋಣ ಜುಲೈ 28ಕ್ಕೆ ತೆರೆ ಕಾಣಲಿದೆ. ಈಗ ಅವರು ದೇಶವಿಡೀ ಸಿನಿಮಾ ಪ್ರಮೋಶನ್‌ನಲ್ಲಿ ಭಾಗಿಯಾಗಿದ್ದಾರೆ. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಈ ಸಿನಿಮಾ ತೆರೆ ಕಂಡ ಬಳಿಕ ಬಿಗ್ ಬಾಸ್ ಹೋಸ್ಟ್ ಮಾಡಲು ತೆರಳುವ ಸಾಧ್ಯತೆ ಇದೆ. 

ಸದ್ಯದ ಲೆಕ್ಕಾಚಾರ ಪ್ರಕಾರ 'ಬಿಗ್ ಬಾಸ್ ಕನ್ನಡ ಸೀಸನ್ 9' ಜೂಲೈ ಕೊನೆವಾರ ಅಥವಾ ಅಗಸ್ಟ್ ನಲ್ಲಿ  ಶುರು ಆಗಬಹುದು. ಸುದೀಪ್ ಅವರೇ ಈ ಶೋ ಹೋಸ್ಟ್ ಮಾಡಲಿದ್ದಾರೆ. ಇನ್ನು ಕೆಲವಾರಗಳಲ್ಲೇ ಕಲರ್ಸ್ ನಿಂದ ಅಧಿಕೃತ ಮಾಹಿತಿ ದೊರೆಯಬಹುದು. ಈಗಾಗಲೇ ತೆರೆಯ ಹಿಂದಿನ ತಯಾರಿಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ‘ಬಿಗ್‌ಬಾಸ್‌ ಸೀಸನ್‌ 9’ಕ್ಕೆ ಮೂಹೂರ್ತ ಇನ್ನೇನು ಕೆಲವೇ ದಿನಗಳಲ್ಲಿ ಫಿಕ್ಸ್‌ ಆಗೋದು ಪಕ್ಕಾ.