Darshan : ದರ್ಶನ್ ಸುದೀಪ್ ಮತ್ತೆ ಒಂದಾಗುತ್ತರಾ..! ಭಾಮ ಹರೀಶ್ ಅವರಿಂದ ಅಭಿಮಾನಿಗಳಿಗೆ ಬಂತು ಸಿಹಿ ಸುದ್ದಿ..!
Updated:Thursday, June 2, 2022, 18:57[IST]

ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಈ ಮುಂಚೆ ಒಳ್ಳೆಯ ಸ್ನೇಹಿತರು. ನಟ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ನಟ ಸಾಹಸ ಸಿಂಹ ವಿಷ್ಣುವರ್ಧನ್ ಹೇಗೆ ಒಳ್ಳೆಯ ಕುಚುಕು ಆಗಿದ್ದರೋ, ಅದೇ ರೀತಿ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರನ್ನು ಅಭಿಮಾನಿಗಳು ಆದರದಿಂದ ಸ್ವಾಗತ ಮಾಡಿಕೊಂಡಿದ್ದರು. ಇವರಿಬ್ಬರ ಗೆಳೆತನ ನೋಡಿ ಅದೆಷ್ಟೊ ಜನರಿಗೆ ಸ್ಫೂರ್ತಿಯಾಗಿದ್ದು ಉಂಟು. ಕಿಚ್ಚ ಸುದೀಪ್ ಅವರ ನಟನೆ ಬಗ್ಗೆ ನಾವು ಏನೂ ಹೇಳಬೇಕಾಗಿಲ್ಲ. ಅವರದೇ ಆದ ಅಪಾರ ಅಭಿಮಾನಿ ಬಳಗ ಅವರ ನಟನೆ ಮೂಲಕವೇ ನಟ ಸುದೀಪ್ ಹೊಂದಿದ್ದಾರೆ. ಜೊತೆಗೆ ನಟ ದರ್ಶನ್ ಅವರು ಕೂಡ ಅಷ್ಟೇ ಹೆಚ್ಚು ಫ್ಯಾನ್ಸ್ ಹೊಂದಿದ್ದಾರೆ. ಹಾಗೆ ಡಿಬಾಸ್ ಎಂದೇ ಅವರ ಪ್ರೀತಿಯ ಅಭಿಮಾನಿಗಳಿಂದ ಪ್ರೀತಿಯಾಗಿ ಕರೆಯಲ್ಪಡುತ್ತಾರೆ.
ಹೌದು ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರ ಸ್ನೇಹ ಈ ಮುಂಚೆ ತುಂಬಾ ಚೆನ್ನಾಗಿತ್ತು. ಯಾವುದೇ ಕಾರ್ಯಕ್ರಮ ಇದ್ದರೂ ಒಟ್ಟಿಗೆ ಕಾಣಿಸಿಕೊಂಡು ಸುದೀಪ್, ದರ್ಶನ್ ಅವರು ಪ್ರೀತಿಯಿಂದ ಎಲ್ಲರೂಟ್ಟಿಗೆ ಅಭಿಮಾನಿಗಳ ಜೊತೆ ಕಾಣಿಸುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಇವರಿಬ್ಬರೂ ಬೇರೆ ಬೇರೆಯಾಗಿದ್ದಾರೆ. ಮಾತುಗಳೇ ಬಿಟ್ಟು ಬಹಳ ದಿನಗಳು ಕಳೆದಿವೆ. ಹೀಗಿರುವಾಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಕೊಟ್ಟಂತಹ ಬಾಮ ಹರೀಶ್ ಅವರು ಇವರಿಬ್ಬರು ಮತ್ತೆ ಒಂದಗೋ ಸುದ್ದಿ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್ ಮತ್ತು ಸುದೀಪ್ ಅವರು ಮತ್ತೆ ನಿಮ್ಮ ಮೂಲಕ ಒಂದಾಗುತ್ತಾರ ಹಾಗಾದಲ್ಲಿ ಕನ್ನಡ ಇಂಡಸ್ಟ್ರಿ ಇನ್ನೂ ದೊಡ್ಡ ಮಟ್ಟಕ್ಕೆ ಹೋಗುತ್ತದೆ ಎಂದಾಗ, ಹಾಗೆ ಒಟ್ಟು ಮಾಡುವ ರೀತಿ ಏನಾದರೂ ಸಾಧ್ಯತೆ ಇದೆಯಾ ಎಂಬುದಾಗಿ ಪ್ರಶ್ನೆ ಕೇಳಿದಾಗ ಭಾಮ ಹರೀಶ್ ಅವರು ಹೇಳಿದ್ದಿಷ್ಟು.
ಅವರಿಬ್ಬರು ಕೂಡ ಮಗುವಿನ ಮನಸ್ಸು ಹೊಂದಿರುವ ನಟರು. ಇಬ್ಬರೂ ಕೂಡ ಒಳ್ಳೆಯವರು, ದರ್ಶನ್ ಅವರ ಜೊತೆ ನಾನು ಮೆಜೆಸ್ಟಿಕ್ ಸಿನಿಮಾ ಮಾಡಿದ್ದೇನೆ. ಸುದೀಪ್ ಅವರನ್ನು ಕೂಡ ನೋಡಿದ್ದೇನೆ. ಇಬ್ಬರೂ ಒಳ್ಳೆಯವರು ಆದರೆ ಕೆಲವೊಂದಿಷ್ಟು ಸ್ಪಾರ್ಕ್ ಇಬ್ಬರಲ್ಲಿ ಬಂದಿದೆ. ಹಾಗಾಗಿ ಈ ದೂರ ಎನ್ನಬಹುದು. ಮನುಷ್ಯ ಅಂದಮೇಲೆ ಕೋಪ ಇರೋದು ಸಹಜ. ಅವರು ಈಗಲೂ ಕೂಡ ಚೆನ್ನಾಗಿಯೇ ಇದ್ದಾರೆ. ನಾನು ಒಂದು ವೇಳೆ ಅಧ್ಯಕ್ಷ ಆದರೆ ವಾಣಿಜ್ಯ ಮಂಡಳಿಯ ಮೂಲಕ ಅವರಿಬ್ಬರಿಗೂ ಕೈಮುಗಿದು ಕಾಲು ಬಿದ್ದು ಮತ್ತೆ ನೀವಿಬ್ಬರೂ ಒಂದಾಗಿ ಎನ್ನುತ್ತೇನೆ, ಒಂದು ಮಾಡುವ ಕೆಲಸವನ್ನು ಮಾಡುತ್ತೇನೆ ಎಂದಿದ್ದಾರೆ ಭಾಮ ಹರೀಶ್. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ..