ಒಂಬತ್ತನೇ ವಾರ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆದವರು ಯಾರ್ ಗೊತ್ತಾ..? ಶಾಕ್ ಆದ ಮನೆ ಮಂದಿ

Updated: Monday, May 3, 2021, 09:41 [IST]

ಸ್ನೇಹಿತರೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟು ಈಗಾಗಲೇ 9 ವಾರಗಳನ್ನು ಸಹ ಮುಕ್ತಾಯ ಮಾಡಲಾಗಿದ್ದು, ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ ಎಂದು ಈಗಷ್ಟೇ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೌದು ಯಾಕೋ ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮವನ್ನು ಆರಂಭ ಮಾಡಿದ ವೇಳೆಯೇ ಸರಿಯಿಲ್ಲ ಎನ್ನುವಂತೆ ಕಾಣುತ್ತಿದೆ. ಮೊದಲಿಗೆ ಕೊರೋನಾ ಬಂದಿದ್ದು ಅಕ್ಟೋಬರ್ ನಲ್ಲಿ ಆರಂಭವಾಗಬೇಕಿದ್ದ ಈ ಬಿಗ್ ಬಾಸ್ ಕಾರ್ಯಕ್ರಮ ಫೆಬ್ರವರಿ ತಿಂಗಳಲ್ಲಿ ಆರಂಭವಾಯಿತು.   

ಇದೀಗ ಮೊಟ್ಟಮೊದಲ ಬಾರಿಗೆ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡದೇ 3 ವಾರಗಳು ಸಹ ಮುಕ್ತಾಯವಾದವು. ಹೌದು ಬಿಗ್ ಬಾಸ್ ಆರಂಭದ ಹಂತದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿತು, ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಆದರೆ ಐಪಿಎಲ್ ಆರಂಭವಾದಾಗಿನಿಂದ, ಈ ಕಾರ್ಯಕ್ರಮ ಯಾಕೋ ಡಲ್ ಆಗಿದೆ ಎನ್ನಬಹುದು. ಇದರ ನಡುವೆ ಒಂಬತ್ತನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ.

ಈ ವಾರ ಯಾರು ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದರು ಎಂದು ಬಿಗ್ಬಾಸ್ ಪ್ರಿಯರು ತುಂಬಾ ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಈ ಒಂಬತ್ತನೆ ವಾರ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿ ಕೂಡ ಎಲಿಮಿನೇಟ್ ಆಗಿ ಹೊರ ಹೋಗ್ತಿಲ್ಲ. ಈ ವಾರ ಎಲ್ಲರೂ ಸೇಫ್ ಆಗಿದ್ದಾರೆ. ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ಇಲ್ಲ ಎಂಬುದಾಗಿ ತಿಳಿದು ಬಂದಿದೆ....