ಬುಲೆಟ್‌ ಪ್ರಕಾಶ್‌ ಅವರಿಗೆ ಕಾಣದಂತೆ ಸಹಾಯ ಮಾಡಿದ ಆ ನಟ ಯಾರು ಗೊತ್ತಾ..?

By Infoflick Correspondent

Updated:Saturday, July 9, 2022, 08:31[IST]

ಬುಲೆಟ್‌ ಪ್ರಕಾಶ್‌ ಅವರಿಗೆ ಕಾಣದಂತೆ ಸಹಾಯ ಮಾಡಿದ ಆ ನಟ ಯಾರು ಗೊತ್ತಾ..?

ಬುಲೆಟ್ ಪ್ರಕಾಶ್ ಅವರು ಕಡು ಬಡತನದಲ್ಲಿ ಹುಟ್ಟಿ ಬೆಳೆದವರು. ಬುಲೆಟ್‌ ಗಾಡಿ ಬಳಸುತ್ತಿದ್ದರಿಮದ ಅವರಿಗೆ ಬುಲೆಟ್‌ ಪ್ರಕಾಶ್‌ ಎಂಬ ಹೆಸರು ಬಂತು. ರಂಗ ಭೂಮಿ  ಪ್ರವೇಶಿಸಿದ ಅವರು, ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ  ಗುರುತಿಸಿಕೊಂಡರು.  ಸ್ಯಾಂಡಲ್ ವುಡ್ ನಲ್ಲಿ  ಪುನೀತ್ ರಾಜ್‌ ಕುಮಾರ್‌, ದರ್ಶನ್, ಸುದೀಪ್, ಸಾದು ಕೋಕಿಲ ಹೀಗೆ ಹಲವರ ಜೊತೆಗೆ ತೆರೆ ಹಂಚಿಕೊಂಡರು. ಸುಮಾರು 325 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ತೀರಾ ದಪ್ಪಗಿದ್ದ ಬುಲೆಟ್‌ ಪ್ರಕಾಶ್‌ ಅವರು ಕೊಬ್ಬು ಕರಗಿಸುವ ಆಪರೇಷನ್‌ ಮಾಡಿಸಿಕೊಂಡಿದ್ದರು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸಿದ್ದರು. ನಂತರ 2020 ರ ಏಪ್ರಿಲ್ 6 ರಂದು ಬಹು ಅಂಗಾಂಗ ವೈಫಲ್ಯದಿಂದ ವಿಧಿವಶರಾದರು. ಆದರೆ, ಕೆಲ ಸಮಯದ ಕಾಲ ಅನಾರೋಗ್ಯದಿಂದ ಬಳಲಿದ ಬುಲೆಟ್‌ ಪ್ರಕಾಶ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಬುಲೆಟ್‌ ಪ್ರಕಾಶ್‌ ಅವರ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿತ್ತು.

ಇನ್ನು ಬುಲೆಟ್‌ ಪ್ರಕಾಶ್‌ ಅವರನ್ನು ನೊಡಲು ಸಿನಿಮಾ ತಾರೆಯರು ಕೂಡ ಭೇಟಿ ಕೊಟ್ಟಿದ್ದರು. ಅದರಲ್ಲಿ ಒಬ್ಬ ನಟ ಬುಲೆಟ್‌ ಪ್ರಕಾಶ್‌ ಅವರಿಗೆ ಹಣ ಕೊಟ್ಟು ಸಹಾಯ ಮಾಡಿದ್ದರು. ಅದರಲ್ಲೂ ಕೂಡ ಬುಲೆಟ್‌ ಪ್ರಕಾಶ್‌ ಅವರು ಮಲಗಿದ್ದ ದಿಂಬಿನ ಕೆಳಗೆ ಯಾರಿಗೂ ಗೊತ್ತಾಗದಂತೆ  ಒಂದು ಲಕ್ಷ  ಹಣವನ್ನು ಇಟ್ಟು ಬಂದಿದ್ದರು. ಅದು ಯಾರು ಎಂದು ಗೊತ್ತಿದ್ಯಾ..?ಬೇರೆ ಯಾರೂ ಅಲ್ಲ ಸ್ನೇಹಿತರೇ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ಚಾಲೇಂಜಿಂಗ್‌ ಸ್ಟಾರ್‌ ದರ್ಶನ್‌ ಅವರು. ದರ್ಶನ್‌ ಅವರು ಸದಾ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಲೇ ಇರುತ್ತಾರೆ.