ರಶ್ಮಿಕಾ ಬೆಸ್ಟ್ ಫ್ರೆಂಡ್ ಯಾರು ಗೊತ್ತೆ ನಿಮ್ಮ ನೆನಪು ವಿಶೇಷ ಎಂದಿದ್ದು ಯಾರಿಗೆ

By Infoflick Correspondent

Updated:Tuesday, August 9, 2022, 21:33[IST]

ರಶ್ಮಿಕಾ ಬೆಸ್ಟ್ ಫ್ರೆಂಡ್ ಯಾರು ಗೊತ್ತೆ ನಿಮ್ಮ ನೆನಪು ವಿಶೇಷ ಎಂದಿದ್ದು ಯಾರಿಗೆ

ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯರ ಫೋಟೋ ಹಾಕಿ ಭಾವುಕರಾಗಿ, ನನ್ನ ಹೃದಯದ ಗೆಳೆಯರು ಎಂದು ಬರೆದಿದ್ಧಾರೆ. ವಿಜಯ್ ಸೇರಿ ಹಲವರ ಫೋಟೋ ಹಂಚಿಕೊಂಡಿದ್ಧಾರೆ.ಮೊನ್ನೆ ಫ್ರೆಂಡ್‌ಶಿಪ್ ಡೇ ದಿನ ರಶ್ಮಿಕಾ ಮಂದಣ್ಣ ಸ್ನೇಹಿತರ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಅವರು ಸ್ನೇಹಿತರ ದಿನದಂದು ತಮ್ಮ ಸ್ನೇಹಿತರ ಬಗ್ಗೆ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಫ್ರೆಂಡ್‌ಶಿಪ್ ಡೇಯಂದು ಸ್ನೇಹಿತರಿಗೆ ಶುಭ ಹಾರೈಸುತ್ತಾ, 'ಇವರು ನನ್ನ ಜೀವನದಲ್ಲಿ ಬಹಳ ಮುಖ್ಯ, ಅವರಿಲ್ಲದೆ ನಾನು ಏನೂ ಅಲ್ಲ' ಎಂದು ಹೇಳಿದ್ದಾರೆ. ರಶ್ಮಿಕಾ ಶೇರ್ ಮಾಡಿರುವ ಫೋಟೋದಲ್ಲಿ ಖ್ಯಾತ ನಟ ವಿಜಯ್ ದೇವರಕೊಂಡ ಕೂಡ ಕಾಣಿಸಿಕೊಂಡಿದ್ದಾರೆ.


ಸ್ನೇಹಿತರೊಂದಿಗೆ ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ ಮತ್ತು "ನಾನು ಸಾಮಾನ್ಯವಾಗಿ ಫ್ರೆಂಡ್ಶಿಪ್ ಡೇ, ಹಗ್ ಡೇ, ಚಾಕೊಲೇಟ್ ಡೇ ಅಥವಾ ವ್ಯಾಲೆಂಟೈನ್ಸ್ ಡೇ ಅನ್ನು ಆಚರಿಸುವುದಿಲ್ಲ. ಅಲ್ಲದೆ ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಹಂಚಿಕೊಳ್ಳುವುದಿಲ್ಲ. ಅದಕ್ಕಾಗಿಯೇ ನಾನು ಈಗ ಬರೆಯುತ್ತಿದ್ದೇನೆ" ಅಂತ ಹೇಳಿದ್ದಾರೆ.

ಕೆಲವರಿಂದ ನಾನು ಬೆಳೆದಿದ್ದೇನೆ, ಕೆಲವರೊಂದಿಗೆ ನಾನು ಕೆಲಸ ಮಾಡುತ್ತೇನೆ, ಕೆಲವರೊಂದಿಗೆ ನಾನು ಹೆಚ್ಚು ಸಂಪರ್ಕ ಹೊಂದಿಲ್ಲ. ಆದರೆ ಇನ್ನೂ ನನ್ನ ಹೃದಯದ ಮೇಲೆ ಅಂತಹ ಆಳವಾದ ಪ್ರಭಾವ ಇದೆ. ಅವುಗಳು ಯಾವಾಗಲೂ ಮತ್ತು ಎಂದೆಂದಿಗೂ ವಿಶೇಷವಾಗಿರುತ್ತವೆ!" ಅಂತ ಬರೆದುಕೊಂಡಿದ್ದಾರೆ.

ನಾನು ನಿನ್ನನ್ನು ನನ್ನ ಹೃದಯದಿಂದ ಪ್ರೀತಿಸುತ್ತೇನೆ. ನಿಮ್ಮ ಸಲಹೆಗಳಿಂದ ನನಗೆ ಸಂತೋಷವಾಗಿದೆ. ನನ್ನನ್ನು ಇಂದು ನಾನಾಗಿ ಮಾಡುವಲ್ಲಿ ನೀವೆಲ್ಲರೂ ದೊಡ್ಡ ಪಾತ್ರವನ್ನು ವಹಿಸಿದ್ದೀರಿ. ನಿಮಗೆ ಧನ್ಯವಾದಗಳು" ಅಂತ ರಶ್ಮಿಕಾ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ


ಗೆಳೆಯ ಗೆಳತಿರ ದಿನದಂದು ವಿಜಯ ದೇವರಕೊಂಡ ಅವರನ್ನು ನೆನಸಿಕೊಂಡ ರಶ್ಮಿಕಾ ರಕ್ಷಿತ್ ಅವರನ್ನು ಮರೆತರೆ?
ರಕ್ಷಿತ್​ ಶೆಟ್ಟಿ ಬಿಟ್ಟು ಉಳಿದವರು ಮಾತ್ರ ರಶ್ಮಿಕಾ ಗೆಳೆಯರಾ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿನಾ ಮರೆತೇ ಬಿಟ್ರಾ ಎಂಬ ಪ್ರಶ್ನೆ ಮೂಡುತ್ತಿದೆ. ಸಿನಿಮಾಗೆ ಪರಿಚಯಿಸಿದ ರಕ್ಷಿತ್​ನೇ  ಸಾನ್ವಿ ಮರೆತ್ರಾ ಎಂದು ಜನ ಪ್ರಶ್ನಿಸುತ್ತಿದ್ದಾರೆ.