ಭಾರತದ ಸಿನಿಮಾ ಇಂಡಸ್ಟ್ರಿಯ ಬಾಸ್ ಯಾರು ಗೊತ್ತಾ..? ಗೂಗಲ್ ಹೇಳಿದ್ದನ್ನು ಕೇಳಿದರೆ ಖುಷಿ ಪಡ್ತೀರಾ..

By Infoflick Correspondent

Updated:Friday, January 21, 2022, 08:57[IST]

ಭಾರತದ ಸಿನಿಮಾ ಇಂಡಸ್ಟ್ರಿಯ ಬಾಸ್ ಯಾರು ಗೊತ್ತಾ..? ಗೂಗಲ್ ಹೇಳಿದ್ದನ್ನು ಕೇಳಿದರೆ ಖುಷಿ ಪಡ್ತೀರಾ..

ಭಾರತೀಯ ಸಿನಿಮಾ ರಂಗಕ್ಕೆ ತನ್ನದೇ ಆದ ಇತಿಹಾಸವಿದೆ. ಭಾರತೀಯ ಸಿನಿಮಾರಂಗದ ಮೂಲಕ ಹಲವು ಕಲಾವಿದರು ಜೀವನ ಕಟ್ಟಿಕೊಂಡಿದ್ದಾರೆ. ಬಾಲಿವುಡ್, ಮಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಗಳ ಮೂಲಕ ಹಲವು ಪ್ರತಿಭೆಗಳನ್ನು ಗುರುತಿಸಿ ನಾಯಕ-ನಾಯಕಿಯರನ್ನು ಗುರುತಿಸಿದ್ದೇವೆ. ಅಮಿತಾಬ್ ಬಚ್ಚನ್, ಶ್ರೀದೇವಿ, ಐಶ್ವರ್ಯ ರೈ, ಎನ್ ಟಿಆರ್, ಡಾ.ರಾಜ್ ಕುಮಾರ್, ಶಂಕರ್ ನಾಗ್, ರಜನಿಕಾಂತ್, ಮಮ್ಮೂಟಿ, ಹೀಗೆ ಸಾವಿರಾರು ಕಲಾವಿದರಿದ್ದಾರೆ. ಇನ್ನು ಈ ಭಾರತೀಯ ಚಿತ್ರರಂಗದ ಬಾಸ್ ಯಾರು ಎಂದು ಗೂಗಲ್ ಹೇಳಿದೆ. ಅದು ಯಾರು ಎಂದು ನೋಡೋಣ ಬನ್ನಿ.. 

ಇದೀಗ ಯಾರೋ ಒಬ್ಬರು ಗೂಗಲ್ ಸರ್ಚ್ ನಲ್ಲಿ ಬಾಸ್ ಆಫ್ ಇಂಡಿಯನ್ ಫಿಲ್ಮಂ ಇಂಡಸ್ಟ್ರಿ ಅಂತ ಟೈಪ್ ಮಾಡಿದ್ದಾರೆ. ಗೂಗಲ್ ಇದರಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತೋರಿಸಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದರ ಸ್ಕ್ರೀನ್ ಶಾಟ್ ಅನ್ನು ತೆಗೆದು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸ್ಕ್ರೀನ್ ಶಾಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಡಿ ಬಾಸ್ ದರ್ಶನ್ ಅವರನ್ನು ಗೂಗಲ್ ಇಂಡಿಯನ್ ಫಿಲ್ಮಂ ಇಂಡಸ್ಟ್ರಿ ಬಾಸ್ ಎಂದು ತೋರಿಸಿರುವುದು ಖುಷಿಯ ಸಂಗತಿಯೇ ಸರಿ.   

ದರ್ಶನ್ ತೂಗುದೀಪ್ ಅವರು ಮೆಜೆಸ್ಟಿಕ್ ಸಿನಿಮಾ ಮೂಲಕ ಕನ್ನಡ ಫಿಲ್ಮಂ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ಡಿ ಬಾಸ್ ಸಿನಿಮಾ ರಂಗದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಸದ್ಯ ದರ್ಶನ್ ಅವರು ಕ್ರಾಂತಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರು ಕ್ರಾಂತಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಇನ್ನು ವಿ.ಹರಿಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡಲಿದ್ದಾರೆ. ಚಿತ್ರ ಶೂಟಿಂಗ್ ಹಂತದಲ್ಲಿದೆ.