ಯಾರಾಗಬಹುದು ಈ ಬಾರಿಯ ರಾಜಾ-ರಾಣಿ 2 ಶೋ ನಿರೂಪಕರು ? ಇಲ್ಲಿದೆ ಮುಖ್ಯ ವಿವರ

By Infoflick Correspondent

Updated:Wednesday, June 8, 2022, 08:38[IST]

ಯಾರಾಗಬಹುದು ಈ ಬಾರಿಯ ರಾಜಾ-ರಾಣಿ 2 ಶೋ ನಿರೂಪಕರು ? ಇಲ್ಲಿದೆ ಮುಖ್ಯ ವಿವರ

ಕಲರ್ಸ್ ಕನ್ನಡ  ವಾಹಿನಿಯೂ ವಿಭಿನ್ನ ಧಾರಾವಾಹಿಗಳು  ಹಾಗೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ಈ ಬಾರಿ ಹೆಚ್ಚಿನ ಮನರಂಜನೆ ನೀಡುವ ಉದ್ದೇಶದಿಂದ ‘ರಾಜಾ ರಾಣಿ ಸೀಸನ್​ 2’ ವೇದಿಕೆ ಸಜ್ಜಾಗಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಈ ಶೋ ಪ್ರಸಾರ ಆಗಲಿದೆ. ಈಗಾಗಲೇ ಒಂದು ಸೀಸನ್​ ಅನ್ನು ಯಶಸ್ವಿಯಾಗಿ ಮುಗಿಸಿರುವ ಈ ಕಾರ್ಯಕ್ರಮದ ಎರಡನೇ ಸೀಸನ್​ಗೆ ಸಕಲ ತಯಾರಿ ನಡೆದಿದೆ. ಸ್ಪರ್ಧಿಗಳ ಹಾಗು ಜಡ್ಜ್ ಗಳ ವಿವರ ಹೊರಬಿದ್ದಿದ್ದು ನಿರೂಪಣೆ ಯಾರು ಮಾಡುತ್ತಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.   

ಕಲರ್ಸ್​ ಕನ್ನಡದ ಸೋಶಿಯಲ್​ ಮೀಡಿಯಾದ ಖಾತೆಗಳಲ್ಲಿ ‘ರಾಜಾ ರಾಣಿ ಸೀಸನ್​ 2’ ಕಾರ್ಯಕ್ರಮದ ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದೆ. ಈ ಬಾರಿ ಕೂಡ ಸೃಜನ್​ ಲೋಕೇಶ್​ ಮತ್ತು ನಟಿ ತಾರಾ ಅವರು ಜಡ್ಜ್​ ಆಗಿರಲಿದ್ದಾರೆ. ಈ ಶೋ ಜನರಿಗೆ ಮನರಂಜನೆ ನೀಡುವುದರ ಜೊತೆ ಸೆಲೆಬ್ರಿಟಿಗಳ ಜೀವನ ಹೇಗಿರುತ್ತದೆ ಎಂಬುದನ್ನ ಸಹ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಕಾಮಿಡಿ, ನೋವು, ನಲಿವುಗಳ ಮಿಶ್ರಣದ ಈ ಕಾರ್ಯಕ್ರಮದ ಮತತೆ ತೆರೆ ಮೇಲೆ ಬರುತ್ತಿದ್ದು, ಕಲರ್ಸ್ ವಾಹಿನಿ ಮತ್ತೊಂದು ಹೊಸ ಪ್ರೊಮೋ ಮೂಲಕ ಸಮಯ ಹಾಗೂ ದಿನಾಂಕವನ್ನು ಬಹಿರಂಗಪಡಿಸಿದೆ. 

ಅನುಪಮಾ ಅಥವಾ ಅನುಶ್ರೀ ನಿರೂಪಣೆ ಮಾಡಬಹುದು ಎಂದು ಜನ ಅಭಿಪ್ರಾಯ ಪಡುತ್ತಿದ್ದಾರೆ ಆದರೆ ಹಲವರು ಕಳೆದ ಸೀಸನ್ ನಲ್ಲಿ ಅನುಪಮಾ ನಡೆಸಿಕೊಟ್ಟ ಕಾರಣ ಅನುಪಮಾ ನಿರೂಪಣೆ ಮಾಡಿದರೆ ಒಳಿತು ಎಂಬ ಅಭಿಪ್ರಾಯ ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ನಟಿ ನಿರೂಪಕಿ ಅನುಪಮ ಗೌಡ ಅದ್ಬುತವಾಗಿ ಹೋಸ್ಟ್‌ ಮಾಡಿ ಪಟ ಪಟ ಮಾತುಗಳನ್ನಾಡುತ್ತಾ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದರು. 

ಕಳೆದ ಸೀಸನ್​ಗೆ ಅನುಪಮಾ ಗೌಡ ಅವರು ನಿರೂಪಕಿ ಆಗಿದ್ದರು. ಈ ಬಾರಿ ಕೂಡ ಅವರೇ ನಿರೂಪಣೆ ಮಾಡಬೇಕು ಎಂದು ಕಮೆಂಟ್​ಗಳ ಮೂಲಕ ವೀಕ್ಷಕರು ಒತ್ತಾಯಿಸಿದ್ದಾರೆ. ಕಳೆದ ಬಾರಿ ನಿರೂಪಣೆ ಮಾಡಿದ್ದ ಅನುಪಮಾ ಅವರೇ ನಿರೂಪಣೆ ಮಾಡಬಹುದು ಎನ್ನಲಾಗುತ್ತಿದೆ.