Rachita Ram : ಯಾರಿಗೂ ಗೊತ್ತಾಗದಂತೆ ಮದುವೆ ಮಾಡಿಕೊಂಡ್ರಾ ರಚ್ಚು..? ಕೊನೆಗೂ ಬಯಲಾಯ್ತು ತಾಳಿ ರಹಸ್ಯ.!!

By Infoflick Correspondent

Updated:Wednesday, August 17, 2022, 12:44[IST]

Rachita Ram : ಯಾರಿಗೂ ಗೊತ್ತಾಗದಂತೆ ಮದುವೆ ಮಾಡಿಕೊಂಡ್ರಾ ರಚ್ಚು..? ಕೊನೆಗೂ ಬಯಲಾಯ್ತು ತಾಳಿ ರಹಸ್ಯ.!!

ಸ್ಯಾಂಡಲ್ ವುಡ್ನ ಮೋಸ್ಟ್ ಬ್ಯೂಟಿಫುಲ್ ನಟಿ ಮತ್ತು ಹೆಚ್ಚು ಬೇಡಿಕೆ ಖ್ಯಾತ ನಟಿಯಾಗಿ ಇದೀಗ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ರಚಿತಾ ರಾಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಹೌದು ನಟಿ ರಚಿತ ರಾಮ್ ದರ್ಶನ್ ಅವರೊಟ್ಟಿಗೆ ಬುಲ್ ಬುಲ್ ಸಿನಿಮಾದಲ್ಲಿ ಅಭಿನಯವನ್ನು ಆರಂಭಿಸಿದವರು. ನಂತರದ ದಿನದಲ್ಲಿ ಹಿಂತಿರುಗಿ ನೋಡಿದ ನಟಿಯೇ ಅಲ್ಲ. ಸುಮಾರು ಎರಡು ನೂರು ಯುವತಿಯರು ಬುಲ್ ಬುಲ್ ಸಿನಿಮಾ ಆಡಿಶನ್ ನಲ್ಲಿ ಪಾಲ್ಗೊಂಡಿದ್ದರಂತೆ. ಅದರಲ್ಲಿ ಸೆಲೆಕ್ಟ್ ಆದ ನಟಿಯೇ ರಚಿತಾರಾಮ್. ಇವರನ್ನು ಡಿಂಪಲ್ ಕ್ವೀನ್ ಎಂದು ಕರೆಯುವುದು ಅಭಿಮಾನಿಗಳಿಗೆ ಹೆಚ್ಚು ಖುಷಿ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋ ಮತ್ತು ವಿಡಿಯೋಗಳ ಮೂಲಕ ಸದ್ದು ಮಾಡುತ್ತ ಸಕ್ರಿಯರಾಗಿರುವ ನಟಿ ರಚಿತಾ ರಾಮ್.

ಇತ್ತೀಚಿನ ಕಿರುತೆರೆಯ ಡ್ರಾಮಾ ಜೂನಿಯರ್ ಸೆಟ್ ನಲ್ಲಿ ಮಕ್ಕಳೊಡನೆ ಮಕ್ಕಳಾಗಿ ಹೆಚ್ಚು ನಗುತ್ತಾ ಅವರ ಪರ್ಫಾಮನ್ಸ್ಗೆ ಮಾರ್ಕ್ಸ್ ನೀಡುತ್ತಿದ್ದಾರೆ ರಚ್ಚು. ಹಾಗೆ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಚಿತಾ ರಾಮ್ ಅವರು ಈಗಾಗಲೇ ಮದುವೆ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕಿಕೊಂಡಿರುವ ಒಂದು ತಾಳಿಯ ಫೋಟೋ ಎಂದು ಹೇಳಲಾಗುತ್ತಿದೆ. ಹೌದು ಅವರ ತಾಳಿ ಫೋಟೋ ವೈರಲ್ ಆಗುತ್ತಿದೆ. ರಚಿತಾ ರಾಮ್ ಅವರ ಕೊರಳಲ್ಲಿ ತಾಳಿ ಕಂಡ ಅಭಿಮಾನಿಗಳು, ಅರೆ ಇದೇನಪ್ಪ ರಚಿತಾ ರಾಮ್ ಅವರು ಯಾರಿಗೂ ಗೊತ್ತಾಗದ ಹಾಗೆ ಮದುವೆ ಆಗಿಬಿಟ್ರ ಎಂದು ಪ್ರಶ್ನೆ ಮಾಡುತ್ತಿದ್ದಾರೆ.   

ಆದರೆ ಅದೆಲ್ಲಾ ಸುಳ್ಳು. ಹೌದು ಇದು ತೆಲುಗಿನ ಚಿತ್ರದ ಒಂದು ಸಿನಿಮಾ ಶೂಟಿಂಗ್ ಎನ್ನಲಾಗಿದೆ. ತೆಲುಗು ಚಿತ್ರ ಒಂದರಲ್ಲಿ ಅಭಿನಯ ಮಾಡುತ್ತಿರುವ ರಚಿತಾ ರಾಮ್ ಅವರು ಶೂಟಿಂಗ್ ಸೆಟ್ಟಿನಲ್ಲಿ ಕೊರಳಿಗೆ ಸುಮ್ಮನೆ ತಾಳಿ ಹಾಕಿಕೊಂಡಿದ್ದಾರೆ. ಬಳಿಕ ಈ ಇವರ ಫೋಟೋವನ್ನು ತೆಗೆದುಕೊಂಡು ಯಾರೋ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಹರಿ ಬಿಟ್ಟಿದ್ದು ರಚ್ಚು ಮದುವೆಯಾಗಿದ್ದಾರೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಇದಕ್ಕೆಲ್ಲ ನೀವು ತಲೆ ಕೆಡಿಸಿಕೊಳ್ಳಬೇಡಿ ರಚಿತಾ ಅವರು ಮದುವೆಯಾಗುವಾಗ ಎಲ್ಲರ ಗಮನಕ್ಕೂ ತಂದೆ ಮದುವೆ ಆಗುತ್ತಾರೆ. ಈ ಮಾತನ್ನ ಈಗಾಗಲೇ ಅವರೇ ಸಾಕಷ್ಟು ಸಂದರ್ಭದಲ್ಲಿ ಅವರೇ ಹೇಳಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..