ನಟಿ ಭಾವನಾ ರಾಮಾಚಾರಿ ಧಾರಾವಾಹಿಯಿಂದ ಹೊರ ನಡೆಯಲು ಇದೇ ಕಾರಣ..

By Infoflick Correspondent

Updated:Thursday, June 16, 2022, 08:50[IST]

ನಟಿ ಭಾವನಾ ರಾಮಾಚಾರಿ ಧಾರಾವಾಹಿಯಿಂದ ಹೊರ ನಡೆಯಲು ಇದೇ ಕಾರಣ..

ಸೋಶಿಯಲ್ ಮೀಡಿಯಾಗಳಲ್ಲಿ, ಮನೆ ಮನೆಗಳಲ್ಲೂ ರಾಮಾಚಾರಿ ಧಾರಾವಾಹಿಯದ್ದೇ ಸುದ್ದಿ. ಎಲ್ಲರೂ ಈ ಸೀರಿಯಲ್ ಬಗ್ಗೇನೆ ಮಾತನಾಡುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಕೆ.ಎಸ್.ರಾಮ್ಜಿ ಅವರ ನಿರ್ಮಾಣ ಹಾಗೂ ನಿರ್ದೇಶನ ಎರಡೂ ನಿರ್ವಹಿಸುತ್ತಿದ್ದು, ಧಾರಾವಾಹಿಯ ಕತೆ ಕೂಡ ಅದ್ಬುತವಾಗಿದೆ. ಈ ಧಾರಾವಾಹಿಯಲ್ಲಿ ಭಾವನಾ ರಾಮಣ್ಣ, ಗುರುದತ್, ಶಂಕರ್ ಅಶ್ವಥ್, ಸಿರಿ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಇನ್ನು ಇವರೊಂದಿಗೆ ಹೊಸ ಪ್ರತಿಭೆಗಳು ಕೂಡ ಧಾರಾವಾಹಿಯಲ್ಲಿದ್ದಾರೆ.


ರಾಮಾಚಾರಿ ಪಾತ್ರದ ವ್ಯಕ್ತಿಯ ಹೆಸರು ರಿತ್ವಿಕ್ ಕೃಪಾಕರ್ ನಿರ್ವಹಿಸುತ್ತಿದ್ದು, ಚಾರುಲತಾ ಪಾತ್ರಕ್ಕೆ ಮಂಗಳೂರಿನ ಬೆಡಗಿ ಬಣ್ಣ ಹಚ್ಚಿದ್ದಾಳೆ. ಕಂಪನಿಯನ್ನು ನಡೆಸುವ ಶಕ್ತಿಶಾಲಿ, ಸೊಕ್ಕಿನ ಮಹಿಳೆಯಾಗಿ ಭಾವನಾ ರಾಮಣ್ಣ ನಟಿಸುತ್ತಿದ್ದಾರೆ. ಗುರುದತ್ ಭಾವನಾ ಹಾಗೂ ಸಿರಿ ಪತಿಯಾಗಿ ಕಾಣಿಸಿಕೊಂಡಿದ್ದಾರೆ.  ಶಂಕರ್ ಅಶ್ವಥ್ ಅವರು ರಾಮಾಚಾರಿ ತಂದೆ ಪಾತ್ರವನ್ನು ಮಾಡುತ್ತಿದ್ದಾರೆ. ಇನ್ನು ನಾಯಕಿ ಚಾರುಲತಾ ಅವರ ನಿಜವಾದ ಹೆಸರು ಮೌನ ಗುಡ್ಡೆ ಮನೆ.


ಕಂಪನಿಯನ್ನು ನಡೆಸುವ ಶಕ್ತಿಶಾಲಿ, ಸೊಕ್ಕಿನ ಮಹಿಳೆಯಾಗಿ ಭಾವನಾ ರಾಮಣ್ಣ ನಟಿಸುತ್ತಿದ್ದಾರೆ. ಇನ್ನು ಇದೀಗ ಮಾನ್ಯತಾ ಪಾತ್ರದ ಮೂಲಕ ಮನೆ ಮಾತಾಗಿದ್ದ ನಟಿ ಭಾವನಾ ಅವರು, ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇದಕ್ಕೆ ಕಾರಣ ತಮ್ಮ ವಯಕ್ತಿಕ ಕೆಲಸಗಳು ಹಾಗೂ ಸಿನಿಮಾ ಶೂಟಿಂಗ್. ಹೀಗಾಗಿ ಧಾರಾವಾಹಿಗೆ ಸಮಯ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಸೀರಿಯಲ್ ನಿಂದ ಹೊರ ಬಂದಿದ್ದಾರೆ.