ಚಿರು ಸಮಾಧಿ ಬಳಿ ಮೇಘನಾಗೆ ಬರಬೇಡ ಎಂದ ಚಿರು ತಾಯಿ..! ಕಣ್ಣೀರಿಟ್ಟ ಮೇಘನಾ..! ಕಾರಣ..?

By Infoflick Correspondent

Updated:Wednesday, April 13, 2022, 10:04[IST]

ಚಿರು ಸಮಾಧಿ ಬಳಿ ಮೇಘನಾಗೆ ಬರಬೇಡ ಎಂದ ಚಿರು ತಾಯಿ..! ಕಣ್ಣೀರಿಟ್ಟ ಮೇಘನಾ..! ಕಾರಣ..?

ಕನ್ನಡ ಚಿತ್ರರಂಗದ ಯುವ ನಾಯಕ ನಟ ಆಗಿದ್ದ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ ಯಾರಿಗೂ ಕೂಡ ಅರಗಿಸಿಕೊಳ್ಳಲು ಆಗಲಿಲ್ಲ. ಚಿರಂಜೀವಿ ಸರ್ಜಾ ಅವರು ಅಗಲಿ ಎರಡು ವರ್ಷಗಳು ಕಳೆದಿವೆ. ಈಗಲೂ ಕೂಡ ಅವರ ಮನೆಯಲ್ಲಿ ಚಿರಂಜೀವಿ ಅವರ ನೆನಪು ಹೆಚ್ಚು ಕಾಡುತ್ತದೆ. ಹಾಗೆ ಅವರ ಅಭಿಮಾನಿಗಳ ಮನಸ್ಸಿನಲ್ಲಿಯೂ ಕೂಡ ಅವರ ನೆನಪಾಗುವಂತೆ ಜೀವನ ಮಾಡಿಹೋಗಿದ್ದಾರೆ. ಹೀಗಿರುವಾಗ ಎರಡು ವರ್ಷದ ಬಳಿಕ ಚಿರು ಪತ್ನಿ ಮೇಘನಾ ರಾಜ್ ಅವರ ಬದುಕಿನಲ್ಲಿ ಸಂತೋಷ ಮತ್ತೆ ಮರುಕಳಿಸಿದೆ ಎಂದು ಹೇಳಬಹುದು. ಚಿರು ಅಗಲಿಕೆಯ ಬೆನ್ನಲ್ಲೇ ಅವರು ಪ್ರಗ್ನೆಂಟ್ ಇರುವ ವಿಚಾರ ತಿಳಿಯಿತು. ನಂತರ ಚಿರಂಜೀವಿ ಸರ್ಜಾ ಅವರ ಮಗನಾಗಿ ರಾಯನ್ ರಾಜ್ ಸರ್ಜಾ ಹುಟ್ಟಿ ಬಂದನು.  

ಮಗನ ಲಾಲಿಕೆ ಪಾಲಿಕೆಯಲ್ಲಿ ಇಷ್ಟು ದಿನ ನಟಿ ಮೇಘನಾ ಅವರು ತುಂಬಾನೇ ಬ್ಯುಸಿಯಾಗಿದ್ದರು. ಹಾಗೆ ಇದೀಗ ಎರಡು ವರ್ಷದ ಬಳಿಕ ಸ್ವಲ್ಪ ಖುಷಿಯಾಗಿದ್ದಾರೆ. ಚಿರು ಅಗಲಿಕೆಯಾದ ಮೇಲೆ ತುಂಬಾನೇ ನೋವಿಗೆ ಒಳಗಾಗಿದ್ದ ಮೇಘನಾ ಇತ್ತೀಚಿಗೆ ಮಗ ರಾಯನ್ ರಾಜ್ ಸರ್ಜಾ ಮುಖ ನೋಡಿಕೊಂಡು ಕೊಂಚ ನೋವ ಕಡಿಮೆ ಮಾಡಿದ್ದಾರೆ. ಹೆಚ್ಚು ಸಿನಿಮಾಗಳ ಆಫರ್ ಗಳು ಒಂದು ಕಡೆ ಬರುತ್ತಿದ್ದು ತುಂಬಾನೇ ಖುಷಿಯಲ್ಲಿದ್ದಾರೆ ಮೇಘನಾ ಎನ್ನಲಾಗಿದೆ. ಇದರ ನಡುವೆ ಚಿರು ಅವರ ತಾಯಿ ಮೇಘನಾ ಅವರಿಗೆ ನೀನು ಸಮಾಧಿ ಬಳಿ ಬರಬೇಡ ಎಂದಿದ್ದಾರಂತೆ. ಇದಕ್ಕೆ ಅಸಲಿ ಕಾರಣ ಇದೀಗ ಬಯಲಾಗಿದೆ.

ಹೌದು ಚಿರು ಸಮಾಧಿ ಬಳಿ ಬಂದರೆ ನೀನು ಹೆಚ್ಚು ಕಣ್ಣೀರು ಹಾಕುತ್ತೀಯಾ ಪದೇಪದೇ ಅವನ ನೆನಪುಮಾಡಿಕೊಂಡು ನೋವ ಪಡುತ್ತೀಯಾ, ಸಮಾಧಿ ಹತ್ತಿರ ಹೆಚ್ಚು ಬರಬೇಡ ಚಿರು ಪುಣ್ಯತಿಥಿ, ಮತ್ತು ಅವನ ಹುಟ್ಟುಹಬ್ಬದ ದಿನ ಮಾತ್ರ ಬರೋಣ, ಈ ರೀತಿ ನೀನು ಪದೇ ಪದೇ ಸಮಾಧಿಗೆ ಬಂದು ಕಣ್ಣೀರಿಡುತ್ತಾ ನೋವಲ್ಲಿದ್ದಾರೆ ಅದು ನನ್ನ ಮಗನ ಮೇಲೆ ಪರಿಣಾಮ ಬೀರಬಹುದು. ಅವನ ಮತ್ತು ನಿನ್ನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ ಎಂದು ಈಗ ತಿಳಿದುಬಂದಿದೆ. ಹಾಗಾಗಿ ಅಲ್ಲಿಗೆ ಹೆಚ್ಚು ಬರಬೇಡ ಎಂದು ಹೇಳಿದ್ದಾರಂತೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.