ಎಷ್ಟೋ ವರ್ಷಗಳಿಂದ ಖ್ಯಾತ ನಟಿ ರಕ್ಷಿತಾ ಸಿನಿಮಾದಲ್ಲಿ ನಟಿಸಲಿಲ್ಲ ಏಕೆ ಗೊತ್ತೆ ?

By Infoflick Correspondent

Updated:Wednesday, March 16, 2022, 19:01[IST]

ಎಷ್ಟೋ ವರ್ಷಗಳಿಂದ ಖ್ಯಾತ ನಟಿ ರಕ್ಷಿತಾ ಸಿನಿಮಾದಲ್ಲಿ ನಟಿಸಲಿಲ್ಲ ಏಕೆ ಗೊತ್ತೆ ?

ನಟಿ ರಕ್ಷಿತಾ ಚಂದನವನದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರೂ ಎಷ್ಟೊ ವರ್ಷಗಳಿಂದ  ಸಿನಿಮಾದಲ್ಲಿ ನಟನೆ ಮಾಡಿರಲಿಲ್ಲ. ಇತ್ತೀಚಿಗೆ ಎಕ್ ಲವ್ ಯಾ ಚಿತ್ರದ ನಿರ್ಮಾಪಕಿಯೂ ಹೌದು ಮತ್ತು ಅವರು ಇಲ್ಲಿ ಚಿಕ್ಕ ಪಾತ್ರ ಮಾಡಿದ್ದರೆ. ಪ್ರಮೋಷನ್ ನಲ್ಲಿ ತೊಡಗಿಕೊಂಡಿರುವ ನಟಿ ರಕ್ಷಿತಾ ತಮ್ಮ ದಾಂಪತ್ಯ ಜೀವನದ ಆರಂಭ ಆಗುವ ಮುಂಚೆ ಬಹುಬೇಡಿಕೆಯ ನಟಿಯಾಗಿದ್ದ ನಾನು ತದನಂತರದಲ್ಲಿ ಸಿನಿಮಾರಂಗದಿಂದ ದೂರ ಉಳಿಯಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ. 

2007ರಲ್ಲಿ ನಟನೆಯನ್ನು ತೊರೆದ ನಟಿ ಈಗ ಎಕ್ ಲವ್ ಯಾ ಚಿತ್ರದಲ್ಲಿ ಮತ್ತೊಮ್ಮೆ ಹದಿನೈದು ವರ್ಷಗಳ ನಂತರ ನಟಿಸಿದ್ದಾರೆ. ನಟಿ ರಕ್ಷಿತಾ ಮೊದಲ ಬಾರಿಗೆ ನಿರ್ಮಾಪಕಿ ಆಗಿದ್ದು ಅವರದೇ ಬ್ಯಾನರ್ ಆದ ರಕ್ಷಿತಾ ಫಿಲಂ ಫ್ಯಾಕ್ಟರಿ ಅಡಿ ಮೊದಲ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  

ದಾಂಪತ್ಯ ಜೀವನ ಚಂದವಾಗಿ ಸಾಗುವುದು ನನ್ನ ಉದ್ದೇಶವಾಗಿತ್ತು ಆದ ಕಾರಣದಿಂದ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದೆ 2007ನೇ ಇಸವಿಯ ನಂತರ ನಾನು ಯಾವುದೇ ಸಿನಿಮಾ ಮಾಡಲಿಲ್ಲ. ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದ ನಾನು ಸಿನಿಮಾರಂಗದಿಂದ ದೂರ ಉಳಿಯುವುದು ಕಷ್ಟವಾಗಿತ್ತು.

2002ರಂದು ಚಿತ್ರರಂಗ ಪ್ರವೇಶಿಸಿದ ನನ್ನ ಮೊದಲ ಸಿನಿಮಾ ಪುನೀತ್ ಜೊತೆಗಿನ ಅಪ್ಪು, ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಆಗಿನಿಂದ  2007ರವರೆಗೆ ತೆರೆಕಂಡ ನನ್ನ ಹಲವು ಸಿನಿಮಾಗಳು ಯಶಸ್ವಿ ಪ್ರದರ್ಶನ ಕಂಡಿದ್ದವು ಆದರೂ ಬಣ್ಣ ಹಚ್ಚುವುದನ್ನು ಬಿಟ್ಟು ಪ್ರೇಮ್ ಅವರನ್ನು ಮದುವೆಯಾದೆ. ಪ್ರೇಮ್ ಅವರು ಸಹ ಅವಸರದಲ್ಲಿ ಮದುವೆಯಾದರು. ನಮ್ಮದು ಲವ್ ಮ್ಯಾರೇಜ್ ಆದರೂ ಪ್ರೇಮ್ ಅವರ ತಾಯಿ ನನಗೆ ಎಂಗೇಜ್ಮೆಂಟ್ ಗೂ ಮುನ್ನ ಪರಿಚಯವೇ ಇರಲಿಲ್ಲ. ಅವರ ಮನೆಯವರು ನನಗೆ ನನ್ನ ಎಂಗೇಜ್ಮೆಂಟ್ ನಂತರದಲ್ಲಿ ಪರಿಚಯವಾದರು. ಸಂಸಾರಕ್ಕಾಗಿ ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟೆ. ಎಂದಿದ್ದಾರೆ ರಕ್ಷಿತಾ.