Rashmika Mandanna : ಹಿಜಾಬ್ ದರಿಸಿದ ರಶ್ಮಿಕಾ ಮಂದಣ್ಣ ! ಏನು ಈ ವಿಶೇಷ ?

By Infoflick Correspondent

Updated:Friday, July 15, 2022, 17:00[IST]

Rashmika Mandanna : ಹಿಜಾಬ್ ದರಿಸಿದ ರಶ್ಮಿಕಾ ಮಂದಣ್ಣ ! ಏನು ಈ ವಿಶೇಷ ?

ರಶ್ಮಿಕಾ ಮಂದಣ್ಣ ವಿಭಿನ್ನವಾಗಿ ಬಕ್ರೀದ್ ಶುಭಾಶಯ ಕೋರಿದ್ದಾರೆ. ಹಿಜಾಬ್ ಧರಿಸಿರುವ ರಶ್ಮಿಕಾ ಮಂದಣ್ಣ ಅವರು ಈದ್ ಉಲ್-ಅಧಾ ಶುಭಾಶಯಗಳನ್ನು ತಿಳಿಸಿದ್ದಾರೆ.  ರಶ್ಮಿಕಾ ಹಿಜಾಬ್ ಧರಿಸಿರುವ ಫೋಟೋಗಳು ವೈರಲ್ ಆಗುತ್ತಿದ್ದು ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಹಿಜಾಬ್ ಧರಿಸಿದ್ದು ಏಕೆ ಗೊತ್ತೆ ? ಇದು ರಶ್ಮಿಕಾ ನಟನೆಯ ಸೀತಾ ರಾಮಮ್  ಚಿತ್ರದ ಪೋಸ್ಟರ್. ರಶ್ಮಿಕಾ ಮಂದಣ್ಣ ಅವರು 'ಸೀತಾ ರಾಮಮ್​' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಫ್ರೀನ್​ ಎಂಬ ಹುಡುಗಿಯ ಪಾತ್ರವನ್ನು ರಶ್ಮಿಕಾ ನಿಭಾಯಿಸುತ್ತಿದ್ದಾರೆ. ಅಫ್ರೀನ್ ಎಂಬ ಕಾಶ್ಮೀರಿ ಮುಸ್ಲಿಂ ಹುಡುಗಿಯಾಗಿ ರಶ್ಮಿಕಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

ಸೀತರಾಮಂ ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಪೋಸ್ಟರ್ ರಿಲೀಸ್ ಆಗಿದೆ. ಬಕ್ರೀದ್ ಹಬ್ಬದಂದೇ ಪೋಸ್ಟರ್ ರಿಲೀಸ್ ಆಗಿದ್ದು ಅದರಲ್ಲಿ ಮುಸ್ಲಿಂ ಸಮುದಾಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಕ್ರಿದ್ ಹಬ್ಬದ ವಿಶೇಷವಾಗಿ ರಶ್ಮಿಕಾ ಪೋಸ್ಟರ್ ಶೇರ್ ಮಾಡಿ ಸಿನಿಮಾತಂಡ ವಿಶ್ ಮಾಡಿದೆ

ಸೀತಾ ರಾಮಮ್ ಸಿನಿಮಾದಲ್ಲಿ ನಾಯಕನಾಗಿ ದುಲ್ಕರ್ ಸಲ್ಮಾನ್ ನಟಿಸಿದ್ದಾರೆ. ನಾಯಕಿಯಾಗಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಹಿಜಾಬ್ ಧರಿಸಿ ಕಾಶ್ಮೀರ ಮುಸ್ಲಿಂ ಸಮುದಾಯದಂತೆ ಕಾಣಿಸಿಕೊಂಡಿರುವ ರಶ್ಮಿಕಾ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಗರಿಗೆದರಿದೆ. ಈಗಾಗಲೇ ತೆಲುಗು ಚಿತ್ರರಂಗದ ಪ್ರೇಕ್ಷಕರ ಮನಗೆದ್ದಿರುವ ರಶ್ಮಿಕಾ ಇದೀಗ ಮಲಯಾಳಂನಲ್ಲಿ ಯಾವ ರೀತಿ ಕಮಾಲ್ ಮಾಡಲಿದ್ದಾರೆ ಎಂಬುದು ಚಿತ್ರದ ಬಿಡುಗಡೆ ನಂತರ ಗೊತ್ತಾಗಲಿದೆ.

ಸ್ವಪ್ನಾ ಸಿನಿಮಾ ಬ್ಯಾನರ್‌ ಅಡಿಯಲ್ಲಿ ಅಶ್ವಿನಿ ದತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ನೀಡುತ್ತಿದ್ದು, ವೈಜಯಂತಿ ಮೂವೀಸ್ ಪ್ರಸ್ತುತಪಡಿಸುವ ಈ ಸೀತಾ ರಾಮಂ ಚಲನಚಿತ್ರವು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ 5, 2022 ರಂದು ಬಿಡುಗಡೆಯಾಗಲಿದೆ.