Ravi Basrur : ಕೆಜಿಎಫ್‌ ಸಂಗೀತ ನಿರ್ದೇಶ ರವಿ ಬಸ್ರೂರ್‌ ಅವರಿಗೆ ಈ ಹೆಸರು ಬರಲು ಕಾರಣವೇನು ಗೊತ್ತಾ..?

By Infoflick Correspondent

Updated:Thursday, July 14, 2022, 08:16[IST]

Ravi Basrur : ಕೆಜಿಎಫ್‌ ಸಂಗೀತ ನಿರ್ದೇಶ ರವಿ ಬಸ್ರೂರ್‌ ಅವರಿಗೆ  ಈ ಹೆಸರು ಬರಲು ಕಾರಣವೇನು ಗೊತ್ತಾ..?

ಮೂಲತಃ ಕುಂದಾಪುರದ ಬಸ್ರೂರ್‌ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದ ರವಿ ಬಸ್ರೂರ್‌ ಅವರು ಜೀವನದಲ್ಲಿ ತುಂಬಾ ಕಷ್ಟದ ಜೀವನವನ್ನು ನಡೆಸಿದ್ದಾರೆ. ಅದೊಮ್ಮೆ ಜೀವನವೇ ಬೇಡ ಎನ್ನುವಷ್ಟು ಒದ್ದಾಡಿದ್ದ ರವಿ ಬಸ್ರೂರ್‌ ಅವರು ಬೆಂಗಳುರಿನ ಬೀದಿ ಬೀದಿಯಲ್ಲಿ ಅಲೆದಾಡುತ್ತಿದ್ದರು. ಊಟವಿಲ್ಲದೆ, ಕೈಯಲ್ಲಿ ಕಾಸಿಲ್ಲದೇ, ಒಡಾಡುವಾಗ ಕಾಮತ್‌ ಎಂಬುವರು ಇವರನ್ನು ಒಂದು ಅಂಗಡಿಗೆ  ಕರೆದು ಕೊಂಡು ಹೋದರಂತೆ. ಅಲ್ಲಿ ನಡೆದ ಘಟನೆಯೇ ಇಂದು ಅವರನ್ನು ಈ ಮಟ್ಟಕ್ಕೆ ಹೆಸರು ಮಾಡುವಂತೆ ಮಾಡಿದೆ. 

ಎಂದಿಗೂ ನನ್ನ ಜೀವನ ಹೀಗೇ ಇರಬೇಕು ಎಂದೇನು ಇಲ್ಲ. ಹೇಗೆ ಬರುತ್ತೋ ಹಾಗೆ ಬದುಕೋದು ಎಂದು ಹೇಳುವ ರವಿ ಬಸ್ರೂರ್‌ ಅವರು, ಐದು ರೂಪಾಯಿ ಇದ್ದರೆ ಕೊಡಿ ನಾನು ಚಿತ್ರಾನ್ನ ತಿಂದು ಬರುತ್ತೇನೆ. ಊಟ ಮಾಡಿ ಮೂರು ದಿನವಾಯ್ತು ಎಂದು ಹೇಳುತ್ತಾರಂತೆ. ಅಲ್ಲಿದ್ದ ವ್ಯಕ್ತಿಯೊಬ್ಬರು ೩೫ ಸಾವಿರ ರೂಪಾಯಿ ಕೊಡುತ್ತಾರಂತೆ. ಮುಂದೊಂದು ದಿನ ನಿನ್ನ ಭೇಟಿಯಾಗಲು ಅಪಾಯಿಂಟ್‌ ಮೆಂಟ್‌ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರಂತೆ.    

ಮೊದಲೇ ಮ್ಯೂಸಿಕ್‌ ಅನ್ನು ಹೆಚ್ಚು ಇಷ್ಟ ಪಡುತ್ತಿದ್ದ ರವಿ ಬಸ್ರೂರ್‌ ಅವರು ಪ್ರಶಾಂತ್‌ ನೀಲ್‌ ಜೊತೆ ಸೇರಿ ಉಗ್ರಂ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮಾಡಿದರು. ಅಲ್ಲಿಂದ ಅವರ ಲಕ್‌ ಬದಲಾಗಿ ಹೋಯ್ತು.  ಅವರ ನಿಜವಾದ ಹೆಸರು ಕಿರಣ್ ಅಂತೆ. , ತಮಗೆ ಹಣ ಕೊಟ್ಟವರ ಹೆಸರು ರವಿ ಎಂಬ ಕಾರಣಕ್ಕೆ ಆ ಹೆಸರನ್ನೇ ಇಟ್ಟುಕೊಂಡರಂತೆ. ಆವತ್ತು ಹಣ ಕೊಟ್ಟವರು ನನ್ನ ಪಾಲಿನ ದೇವರು ಎಂದು ಹೇಳಿದ್ದಾರೆ. 

ಉಗ್ರಂ ಇಲ್ಲ ಅಂದಿದ್ದರೆ ಕೆಜಿಎಫ್‌ ಇರುತ್ತಿರಲಿಲ್ಲ. ಪ್ರಶಾಂತ್‌ ನೀಲ್‌ ಹಾಗೂ ಅವರ ತಾಯಿಗೆ ಧನ್ಯವಾದ ಎಂದು ಹೇಳಿದ್ದಾರೆ. ಇನ್ನು ರವಿ ಬಸ್ರೂರ್‌ ಅವರು, ಕರ್ವ, ಮಫ್ತಿ, ಅಂಜನಿಪುತ್ರ, ಕಟಕ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಅಲ್ಲದೇ, ಕುಂದಾಪುರ ಕನ್ನಡ ಭಾಷೆಯಲ್ಲಿ ಗರಗರ ಮಂಡಲ, ಬಿಲಿಂಡರ್ ಹಾಗೂ ಕಟಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಬಿಲಿಂಡರ್‌ ಚಿತ್ರದಲ್ಲಿ ರವಿ ಬಸ್ರೂರ್‌ ಅವರು ಕೂಡ ನಟಿಸಿದ್ದಾರೆ.